ಬಾಗಲಕೋಟೆ :ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ದೊಡ್ಡ ಬಳ್ಳಾಪುರ – ಬೆಂಗಳೂರು ಗ್ರಾ. ಜಿಲ್ಲೆ ಸಂಸ್ಥೆ ನೀಡುವ ಈ ವರ್ಷದ ‘ಕಾಯಕ ಯೋಗಿ -2025’ ಪ್ರಶಸ್ತಿಗೆ ರಬಕವಿ ನಗರದ ಸಂತೋಷ ಆಲಗೂರು ಅವರು ಆಯ್ಕೆಯಾಗಿದ್ದಾರೆ. ಇವರು ಪೌರ ಕಾರ್ಮಿಕರಾಗಿದ್ದು ಜೊತೆಗೆ ಸಮಾಜ ಸೇವೆ, ಮೂಕ ಪ್ರಾಣಿಗಳ ಮೇಲೆ ವಿಶೇಷ ಕಾಳಜಿ ಹೊಂದಿದವರಾಗಿರುತ್ತಾರೆ. ಅದೇ ರೀತಿ ಮುಧೋಳ ತಾಲೂಕಿನ ಕುಳಲಿ ಗ್ರಾಮದ ಹಿರಿಯ ಜೀವಿ ಶ್ರೀ ಎನ್ ಆರ್ ಐಹೊಳೆ ಅವರು ಕೂಡಾ ಆಯ್ಕೆ ಆಗಿರುತ್ತಾರೆ. ಐಹೊಳೆ ಅವರ ಸಮಾಜ ಸೇವೆ ಗುರುತಿಸಿ ಅವರನ್ನು ಕಾಯಕ ಯೋಗಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ ಚಿರಂಜೀವಿ ರೋಡಕರ್ ಮತ್ತು ಪ್ರಧಾನ ಕಾರ್ಯದರ್ಶಿ ಸುರೇಶ ರಾಜಮಾನೆ ಅವರು ಪತ್ರಿಕೆಗೆ ತಿಳಿಸಿರುತ್ತಾರೆ. ಮೇ 01 ರಂದು ರಬಕವಿಯ ಶ್ರೀ ಶಿವದಾಸಿಮಯ್ಯ ಸಮುದಾಯ ಭವನದಲ್ಲಿ ನಡೆಯುವ ರಾಜ್ಯ ಮಟ್ಟದ ಕಾಯಕ ಯೋಗಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು ಎಂದು ತಿಳಿಸಿರುತ್ತಾರೆ.
- ಕರುನಾಡ ಕಂದ
