ಜೀವನದಲ್ಲಿ ನೈತಿಕತೆಯ ಪಾತ್ರ ಮಹತ್ವವಾದುದು
ಕೊಪ್ಪಳ/ ಯಲಬುರ್ಗಾ : ಪ್ರತಿಯೊಬ್ಬರೂ ಉತ್ತಮ ಬದುಕು ರೂಪಿಸಿಕೊಳ್ಳಬೇಕಾದರೆ ಮಾನವೀಯ ಮತ್ತು ನೈತಿಕತೆಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಅಂದಾಗ ಪುಣ್ಯದ ಫಲ ದೊರೆಯಲು ಸಾಧ್ಯ ಎಂದು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷ ರುದ್ರಪ್ಪ ಭಂಡಾರಿ ಅವರು ಜೀವನದಲ್ಲಿ ನೈತಿಕತೆಯ ಪಾತ್ರ ಎಂಬ ವಿಷಯವಾಗಿ ಯಲಬುರ್ಗಾ ತಾಲೂಕಿನ ದಮ್ಮೂರ ಗ್ರಾಮದ ಶ್ರೀ ಭೀಮಾಂಬಿಕಾ ದೇವಿ ಮಠದಲ್ಲಿ ಚತುರ್ದಶಿ ಅಂಗವಾಗಿ ಎ.೨೬ ರಂದು ಹಮ್ಮಿಕೊಂಡಿದ್ದ ೩೭೩ ನೇ ಶಿವಾನುಭವಗೋಷ್ಠಿಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಮಕ್ಕಳಿಗೆ ಸರಿ ಯಾವುದು? ತಪ್ಪು ಯಾವುದು? ಎಂದು ತಿಳಿದಾಗ ಅವರು ತಪ್ಪು ಮಾಡುವುದನ್ನು ಬಿಟ್ಟು ಸರಿಯಾದ ಗೌರವದಿಂದ ಉತ್ತಮ ಮಾರ್ಗ, ಧರ್ಮದ ಹಾದಿಯಲ್ಲಿ ಸಾಗುವುದಕ್ಕೆ ಸಾಧ್ಯವಾಗುತ್ತದೆ ಎಂದು ಪತ್ರಕರ್ತ ವೀರಯ್ಯ ಕುರ್ತಕೋಟಿ ಹೇಳಿದರು. ತಂದೆ ತಾಯಿಯವರನ್ನು ಪೂಜಿಸುವುದರೊಂದಿಗೆ ಪ್ರೀತಿಯಿಂದ ಗೌರವಿಸಬೇಕು ಅಂದಾಗ ನೈತಿಕತೆ ಹೊಂದುವುದಕ್ಕೆ ಸಾಧ್ಯ ಎಂದು ಮುಧೋಳದ ಆನಂದ ನಿಡಗುಂದಿ ಅಪವರು ಮಾತನಾಡಿದರು. ಶರಣರ ಸಂತರ ವಿಚಾರಧಾರೆಗಳನ್ನು ಅರಿತುಕೊಂಡಾಗ ಮನಸ್ಸು ಪರಿಶುದ್ದವಾಗಿ ಭಕ್ತರು ಉತ್ತಮ ದಾರಿ ದೀಪವಾಗಲು ಸಾದ್ಯ ಎಂದು ಬಸವರಾಜ ಗೌಡ್ರ ಮಾತನಾಡಿದರು. ಧರ್ಮರ ಮಠದ ಹನುಮಂತಪ್ಪ ಹಾಗೂ ಶರಣಯ್ಯ ಹಿರೇಮಠ ಸಾನಿಧ್ಯ ವಹಿಸಿದ್ದರು. ಅಕ್ಷರ ಜ್ಞಾನಕ್ಕಿಂತ ಸಂಸ್ಕಾರ ಜ್ಞಾನ ಮುಖ್ಯವಾದದು , ಮಕ್ಕಳಿಗೆ ಉತ್ತಮ ಶಿಕ್ಷಣದ ಜೋತೆಗೆ ಸಂಸ್ಕಾರ ಸಂಸ್ಕೃತಿಯ ಮಾರ್ಗದರ್ಶನ ನೀಡಬೇಕು, ವಿದ್ಯೆ ಮತ್ತು ಸಂಸ್ಕಾರ ಒಂದು ನಾಣ್ಯದ ಎರಡು ಮುಖಗಳು ಇದ್ದಂತೆ ಶಿಕ್ಷಣದ ಜೊತೆಗೆ ನಯ ವಿನಯದಿಂದ ಸಂಸ್ಕಾರವನ್ನು ರೂಢಿಸಿಕೊಳ್ಳುವುದೆ ಉತ್ತಮ ನೈತಿಕತೆಯಾಗಿದೆ ಎಂದು ಶ್ರೀ ಭೀಮಾಂಬಿಕಾ ದೇವಿ ಶಿವಾನುಭವ ಸೇವಾ ಸಮಿತಿ ಅಧ್ಯಕ್ಷ ಶರಣಬಸಪ್ಪ, ದಾನಕೈ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ವೇಳೆ ಪ್ರಾಸ್ತಾವಿಕವಾಗಿ ಭೀಮಣ್ಣ ಚಿಕ್ಕಗೌಡ್ರ ಮಾತನಾಡಿದರು, ಈರಪ್ಪ ರಾವಣಕಿ,ಸೋಮಪ್ಪ ರಾಠೋಡ, ಕಾಂತೇಶ ಹೊಸಮನಿ, ಮಳಿಯಪ್ಪ ವಜ್ರಬಂಡಿ, ಬಸಯ್ಯ ಹಿರೇಮಠ, ಗಣೇಶ ನಿಡಗುಂದಿ, ಬಸವರಾಜ ಮರಗಪ್ಪನವರ, ಮಂಜು ಭೂನಕೊಪ್ಪ ಹಾಗೂ ಸಂಗೀತ ಬಳಗದ ಕಳಕಪ್ಪ ಹಡಪದ, ಯಮನೂರಪ್ಪ ಹಳ್ಳಿಕೇರಿ ಸೇರಿದಂತೆ ಇತರರು ಇದ್ದರು.
ಕಾರ್ಯಕ್ರಮದ ನಂತರ ಅನ್ನಸಂತರ್ಪಣೆ ಜರುಗಿತು.
- ಕರುನಾಡ ಕಂದ
