ವಿಜಯನಗರ ಜಿಲ್ಲೆ ಕೊಟ್ಟೂರು:
ದಿ. 25 -03-2025 ರಂದು ಮಧ್ಯಾಹ್ನ 1 ಗಂಟೆಗೆ ಫಿರ್ಯಾದಿ ಶ್ರೀ ಟಿ. ಸಣ್ಣರಮೇಶ ಚೆನ್ನಿ ತಂದೆ ಲೇಟ್ ಚೌಡಪ್ಪ 27 ವರ್ಷ ಭೋವಿ ಜನಾಂಗ ಬೇಲ್ದಾರ್ ಕೆಲಸ ಮಲ್ಲಾನಾಯಕನ ಹಳ್ಳಿ ಗ್ರಾಮ ಕೊಟ್ಟೂರು ತಾಲೂಕು ವಿಜಯನಗರ ಜಿಲ್ಲೆ ಇವರು ಕೊಟ್ಟೂರು ಪೋಲಿಸ್ ಠಾಣೆಗೆ ಹಾಜರಾಗಿ ಪಿರ್ಯಾದಿಯಾಗಿ ಠಾಣೆಗೆ ನೀಡಿದ ದೂರಿನ ಸಾರಾಂಶ ಈ ರೀತಿ ಇದೆ.
24-3-2025 ರಂದು ಬೆಳಿಗ್ಗೆ 11-30 ಗಂಟೆಯ ಅವಧಿಯಲ್ಲಿ ಪಿರ್ಯಾದಿಯಾ ಹೆಂಡತಿಯಾದ ಶ್ರೀ ಮತಿ ರೇಣುಕಾ 25 ವರ್ಷ ಮತ್ತು ಮಗ ಮಾರುತಿ 4 ವರ್ಷ ಇವರು ಯಾವುದೋ ಕಾರಣಕ್ಕೆ ಯಾರಿಗೂ ಹೇಳದೆ ಕೇಳದೆ ತಮ್ಮ ಮನೆಯಿಂದ ಹೋಗಿ ಕಾಣೆಯಾಗಿದ್ದು ಈವರೆಗೂ ಎಲ್ಲಾ ಕಡೆ ಹುಡುಕಿದರೂ ಸಹ ಪತ್ತೆಯಾಗಿಲ್ಲವೆಂದು ಕಾಣೆಯಾಗಿರುವ ತನ್ನ ಹೆಂಡತಿ ಮತ್ತು ಮಗನನ್ನು ಪತ್ತೆ ಮಾಡುವಂತೆ ಕೊಟ್ಟೂರು ಪೋಲಿಸ್ ಠಾಣೆಯಲ್ಲಿ ಗುನ್ನೆ ನಂ. 68/2025 ಕಲಂ ಮಹಿಳೆ ಮತ್ತು ಮಗು ಕಾಣೆಯಾಗಿದ್ದಾರೆ ಎಂದು ಕೊಟ್ಟೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲೆಸಿಕೊಂಡು ಇವರನ್ನು ಪತ್ತೆ ಮಾಡಲು ಪೋಲಿಸ್ ಸಿಬ್ಬಂದಿಗಳು ಮುಂದಿನ ಕ್ರಮ ಕೈಗೊಂಡಿದ್ದಾರೆಂದು ಪೋಲಿಸ್ ಸಿಬ್ಬಂದಿಗಳು ಪತ್ರಿಕೆ ಪ್ರಕಟಣೆಗೆ ತಿಳಿಸಿದ್ದಾರೆ.
ಕಾಣೆಯಾದ ಶ್ರೀ ಮತಿ ರೇಣುಕಾ ಮತ್ತು ಮಗ ಮಾರುತಿ ಚಹರೆ ಗುರುತು ಈ ಕೆಳಕಂಡಂತೆ ಇರುತ್ತದೆ,
1) ಹೆಸರು: ಶ್ರೀ ಮತಿ ರೇಣುಕಾ ಗಂಡ ಸಣ್ಣ ರಮೇಶ
ಮೈ ಬಣ್ಣ : ಕಪ್ಪು ಮೈ ಬಣ್ಣ
ವಯಸ್ಸು: 25
ಎತ್ತರ: 5,2 ಅಡಿ ಎತ್ತರ
ಮೈಕಟ್ಟು: ಧೃಡವಾದ ಮೈ ಕಟ್ಟು
ಧರಸಿರುವ ಬಟ್ಟೆ; ಹಸಿರು ಬಣ್ಣದ ಸೀರೆ ಧರಸಿರುತ್ತಾರೆ
ಮಾತನಾಡುವ ಭಾಷೆಗಳು : ಕನ್ನಡ ಮತ್ತು ತೆಲುಗು
2) ಹೆಸರು: ಮಾರುತಿ ತಂದೆ ಸಣ್ಣ ರಮೇಶ
ವಯಸ್ಸು-: 04 ವರ್ಷ
ಮೈಬಣ್ಣ: ಗೋಧಿ ಮೈ ಬಣ್ಣ
ಎತ್ತರ: 3 ಅಡಿ ಎತ್ತರ
ಮೈಕಟ್ಟು: ಸಾಧಾರಣ ಮೈಕಟ್ಟು
ಧರಿಸಿರುವ ಬಟ್ಟೆ: ಬಿಳಿ ಬಣ್ಣದ ಶರ್ಟ್ ಮತ್ತು ಬಿಳಿ ಬಣ್ಣದ ಜೀನ್ಸ್ ಪ್ಯಾಂಟ್
ಮಾತನಾಡುವ ಭಾಷೆ : ಕನ್ನಡ ಭಾಷೆ
- ಕರುನಾಡ ಕಂದ
