ವಿಜಯನಗರ ಜಿಲ್ಲೆ ಕೊಟ್ಟೂರು: ದಿ. 15 -04-2025 ರಂದು ಸಂಜೆ 7 ಗಂಟೆಗೆ ಪಿರ್ಯಾದುದಾರರಾದ ದುರುಗಮ್ಮ ಗಂಡ ರೇವಣ್ಣ ,38 ವರ್ಷ, ಆದಿ ಕರ್ನಾಟಕ ಜನಾಂಗ, ಕೂಲಿ ಕೆಲಸ, ವಾಸ ಅಂಗನವಾಡಿ ಶಾಲೆ ಹತ್ತಿರ ಹರಾಳು ಗ್ರಾಮ ಕೊಟ್ಟೂರು ತಾಲೂಕು ವಿಜಯನಗರ ಜಿಲ್ಲೆ ಇವರು ಕೊಟ್ಟೂರು ಪೋಲಿಸ್ ಠಾಣೆಗೆ ಹಾಜರಾಗಿ ಠಾಣೆಗೆ ನೀಡಿದ ದೂರಿನ ಸಾರಂಶ ಈ ರೀತಿ ಇದೆ ದಿ. 06 – 4 – 2025 ರಂದು ಸಂಜೆ 4 ಗಂಟೆಯ ಅವಧಿಯಲ್ಲಿ ಪಿರ್ಯಾದಿಯಾ ಮಗ ದರ್ಶನ ತಂದೆ ರೇವಣ್ಣ, 20 ವರ್ಷ, ಸೋಲಾರ್ ಕಂಪನಿಯಲ್ಲಿ ಕೆಲಸ, ಹರಾಳು ಗ್ರಾಮ ತಮ್ಮ ಮನೆಯಿಂದ ಕಾಣೆಯಾಗಿದ್ದು ಕಾಣೆಯಾದ ತಮ್ಮ ಮಗನನ್ನು ಈವರೆಗೂ ಹುಡುಕಿದರೂ ಪತ್ತೆಯಾಗಿರುವುದಿಲ್ಲವೆಂದು ಕಾಣೆಯಾಗಿರುವ ತನ್ನ ಮಗನನ್ನು ಹುಡುಕಿ ಪತ್ತೆ ಮಾಡುವಂತೆ ಇದ್ದ ಪಿರ್ಯಾದಿಯಾ ದೂರಿನ ಸಾರಂಶದ ಮೇರೆಗೆ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ. 91/ 2025 ಕಲಂ ಪುರುಷ ಕಾಣೆ ರೀತ್ಯಾ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾಣೆಯಾದ ಪುರುಷನನ್ನು ಪತ್ತೆ ಮಾಡಲು ಪೊಲೀಸ್ ಸಿಬ್ಬಂದಿಗಳು ಮುಂದಿನ ಕ್ರಮ ಕೈಗೊಂಡಿದ್ದಾರೆಂದು ಶ್ರೀ ಚಂದ್ರ ಶೇಖರ ಎ. ಎಸ್. ಐ ಕೊಟ್ಟೂರು ಪೊಲೀಸ್ ಠಾಣೆ ಅಧಿಕಾರಿಗಳು ಪತ್ರಿಕೆ ಪ್ರಕಟಣೆಗೆ ತಿಳಿಸಿದ್ದಾರೆ.
- ಕರುನಾಡ ಕಂದ
