ಬೆಳಗಾವಿ/ನೇಸರಗಿ : ಗುರು ಶಿಷ್ಯರ ಸಂಬಂಧ ವಿಶೇಷವಾಗಿದೆ ಶಿಷ್ಯರು ಗುರವಂದನೆ ಮಾಡುತ್ತಿರುವದು ಶ್ಲಾಘನೀಯವೆಂದು ಮಲ್ಲಾಪೂರ ಕೆ. ಎನ್. ಗ್ರಾಮದ ಶ್ರೀ ಗಾಳೇಶ್ವರ ಮಠದ ಶ್ರೀ ಚಿದಾನಂದ ಮಹಾ ಸ್ವಾಮೀಜಿ ಹೇಳಿದರು.
ರವಿವಾರ ನೇಸರಗಿ ಗ್ರಾಮದ ವಿದ್ಯಾಮಂದಿರ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ ೧೯೮೯-೯೦ ನೇ ಸಾಲಿನ ವಿದ್ಯಾರ್ಥಿಗಳಿಂದ ೪ ನೇ ವರ್ಷದ ಸ್ನೇಹಕೂಟ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, ಈ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಉನ್ನತ ಸ್ಥಾನ ಪಡೆದು ಒಳ್ಳೆಯ ಜೀವನ ನಡೆಸುತ್ತಿರುವುದನ್ನು ಕೇಳಿ ಹೆಮ್ಮೆ ಎನಿಸುತ್ತದೆ ಎಂದರು.
ನಿವೃತ್ತ ಶಿಕ್ಷಕ ಸಿ. ವಿ. ಕಟ್ಟಿಮನಿ ಮಾತನಾಡಿ, ವಿದ್ಯಾರ್ಥಿಗಳು ಕಲಿಸಿದ ಗುರುಗಳನ್ನು ತಮ್ಮ ಜೀವನದಲ್ಲಿ ಮರೆಯದೆ ವ್ಯಾಸಂಗ ನಂತರವೂ ಅವರನ್ನು ಕರೆಸಿ ಗುರುವಂದನೆ ಮಾಡುತ್ತಿರುವುದು ಅಪರೂಪವಾಗಿದೆ ಎಂದರು.
ನಿವೃತ್ತ ಶಿಕ್ಷಕ ಜಿ.ಆರ್.ಕುಲಕರ್ಣಿ, ಪ್ರೌಢಶಾಲೆ ಮುಖ್ಯೋಪಾಧ್ಯಾಯ ಫಾ. ಹ್ಯಾರಿ ವಿಕ್ಟರ್ ಡಿಕ್ರೂಜ್, ಯರಗಟ್ಟಿ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ ಪ್ರಾಚಾರ್ಯ ರಾಯನಗೌಡ ಮರಿಗೌಡ, ಹಳೆಯ ವಿದ್ಯಾರ್ಥಿಗಳಾದ ವಿಜಯ ಸೋಮಣ್ಣವರ, ಮಲ್ಲಪ್ಪ ಹುಲಮನಿ, ಸುರೇಖಾ ಮೇಟಿ, ಸುರೇಶ ನಾವಲಗಟ್ಟಿ ಮಾತನಾಡಿ, ಒಂದೇಡೆ ಹಳೆಯ ವಿದ್ಯಾರ್ಥಿಗಳು ಸೇರಿಕೊಂಡು ಹಳೆಯ ನೆನಪುಗಳನ್ನು ಮೆಲಕು ಹಾಕುವ ಕಾರ್ಯಕ್ರಮ ರೂಪಿಸಿರುವದು ಸಂತಸ ಮೂಡಿಸಿದೆ ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಾದ ಎಸ್.ಎಸ್.ಅಪ್ಪಾಜಿಗೋಳ, ಶ್ರೀಮತಿ ಎಸ್.ಎಮ್.ವನಹಳ್ಳಿ, ಎ.ಬಿ.ಉಪ್ಪಾರ, ಎ.ಆರ್.ಕುಲಕರ್ಣಿ, ಆರ್.ಸಿ.ಯರಗಟ್ಟಿ, ಪ್ರಭಾಕರ ಸತ್ತಿಗೇರಿ, ಹಣಮಂತ ಹಳೆಮನಿ, ಹಳೆಯ ವಿದ್ಯಾರ್ಥಿಗಳಾದ ಯಲ್ಲನಗೌಡ ದೊಡ್ಡಗೌಡರ, ನ್ಯಾಯವಾದಿ ಶೀತಲ ಕಾಡಣ್ಣವರ, ಸುರೇಖಾ ಪರ್ವತಗೌಡರ, ಕಲಾವತಿ ದೇಶನೂರ, ಸಂಜೀವ ಸರಾಫ, ಶಿವನಗೌಡ ಪಾಟೀಲ, ಮಹಾಂತೇಶ್ ಮಾಸ್ತಮರಡಿ, ವಿಠ್ಠಲ ಕಮತಗಿ, ಬಸವರಾಜ ಸಾಣಿಕೊಪ್ಪ, ಮಹಾಂತೇಶ ಚರಂತಿಮಠ, ಮಲ್ಲೇಶ ಯರಗುದ್ದಿ, ಶೇಖರ ಮಾರಿಹಾಳ, ನಿಂಗಪ್ಪ ಕುರಗುಂದ, ಗಂಗಾಧರ ಕಾಜಗಾರ, ಶ್ರೀಮತಿ ಕಮಲಾ ಪಾಟೀಲ, ಶ್ರೀಮತಿ ವೀಣಾ ಪಾಟೀಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಉಪನ್ಯಾಸಕಿ ಶ್ರೀಮತಿ ಉಷಾ ನಾವಲಗಟ್ಟಿ ನಿರೂಪಿಸಿದರು, ಶ್ರೀಮತಿ ಎಮ್. ಆರ್.ಬಾಗೇವಾಡಿ ಸ್ವಾಗತಿಸಿದರು, ಮಹಾವೀರ ಬಿಲ್ ವಂದಿಸಿದರು.
ವರದಿ : ಭೀಮಸೇನ ಕಮ್ಮಾರ
