
ಯಾದಗಿರಿ/ ಗುರುಮಠಕಲ್: ಪಟ್ಟಣದ ಕಾಕಲವಾರ ರಸ್ತೆಯ ಪಕ್ಕದ ಬದಿಯಲ್ಲಿರುವ ಗುಡ್ಡದ ದೇವರು/ ಗ್ರಾಮ ರಕ್ಷಕ ಎಂದು ಕರೆಯಲ್ಪಡುವ ಪುರಾತನ ವಿಗ್ರಹದ ಸುತ್ತಮುತ್ತಲಿನ ಪ್ರದೇಶದಲ್ಲಿ ಇಂದು ಹಿಂದೂ ಯುವ ಘರ್ಜನೆ ಸಮಿತಿ ಗುರುಮಠಕಲ್ ಯುವಕರ ಪಡೆ ಸ್ವಚ್ಛತಾ ಕಾರ್ಯಕ್ರಮ ಕೈಗೊಂಡು ಪುರಾತನ ಶಿಲೆಗಳ ರಕ್ಷಣೆಗೆ ಮುಂದಾಗಿದ್ದಾರೆ.
ಶಿಲೆಯ ಇತಿಹಾಸದ ಕುರಿತು ಲಿಖಿತವಾಗಿ ಯಾವುದೇ ಪುರಾವೆಗಳಿಲ್ಲ.. ಒಂದು ಅಂದಾಜಿನ ಪ್ರಕಾರ ಸರಿ ಸುಮಾರು 500-600 ವರ್ಷಗಳ ಹಳೆಯದು ಎನ್ನಬಹುದು.
ಗ್ರಾಮದ ಹಿರಿಯರ ಪ್ರಕಾರ ನವ ವಧುವನ್ನು ಮನೆಗೆ ಸ್ವಾಗತಿಸುವ ಮುನ್ನ ಗುಡ್ಡದ ದೇವರಿಗೆ ಪೂಜೆ ಸಲ್ಲಿಸುವುದು, ಯಾವುದೇ ಭೂತ ಪ್ರೇತಗಳ ಪೀಡೆ ಆಗದಂತೆ ಹಾಗೂ ಮದುವೆ ಶುಭ ಕಾರ್ಯಗಳ ಸಂದರ್ಭದಲ್ಲಿ ನವ ವಧು ವರರ ವಸ್ತ್ರಗಳನ್ನು ದೇವರಿಗೆ ಅರ್ಪಿಸಿ, ಮದುವೆಯಲ್ಲಿ ಧರಿಸುವುದರಿಂದ ದಾಂಪತ್ಯ ಜೀವನ ಸುಖಕರವಾಗಿ ಸಾಗುವುದು ಎಂಬ ನಂಬಿಕೆ ಈಗಲೂ ಇದೆ.
ಪುರಾತನ ಶಿಲೆಯ ಸುತ್ತಮುತ್ತ ಮಾಂಸದ ಅಂಗಡಿಗಳು ಇದ್ದು, ಅವುಗಳ ತ್ಯಾಜ್ಯ ಶಿಲೆಯ ಸುತ್ತಮುತ್ತ ಹಾಕುತ್ತಿದ್ದು, ಬೇಸರ ತಂದಿದೆ
ಪುರಸಭೆ ಕಾರ್ಯಾಲಯಕ್ಕೆ ಸಾಕಷ್ಟು ಬಾರಿ ವಿವಿಧ ಸಂಘಟನೆಗಳು ಹಾಗೂ ಸಾರ್ವಜನಿಕರ ವತಿಯಿಂದ ರಸ್ತೆಯುದ್ದಕ್ಕೂ ಇರುವ ಮಾಂಸದಂಗಡಿಗಳ ತೆರವಿಗೆ ಸಾಕಷ್ಟು ಬಾರಿ ಮನವಿ ಕೊಟ್ಟಿದ್ದರೂ ಸಹ ಇನ್ನೂ ಮಾಂಸದ ಅಂಗಡಿಗಳ ಸ್ಥಳಾಂತರಕ್ಕೆ ಇನ್ನೂ ಪುರಸಭೆ ಅಧಿಕಾರಿಗಳು ಮುಂದಾಗದೇ ಇರುವದು ಅವರ ಬೇಜವಾಬ್ದಾರಿತನ ತೋರಿಸಿಕೊಡುತ್ತದೆ ಎಂದು ವೆಂಕಟೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ಸ್ವಚ್ಛತಾ ಕಾರ್ಯಕ್ರಮದಲ್ಲಿ ನರಸಪ್ಪ ಗಂಗಾನೊಳ, ಬಾಲಾಜಿ, ಸುತ್ತಮುತ್ತಲಿನ ವರ್ತಕರು, ಹಿಂದೂ ಯುವ ಘರ್ಜನೆ ಕಾರ್ಯಕರ್ತರು, ಸಾರ್ವಜನಿಕರು ಪಾಲ್ಗೊಂಡಿದ್ದರು.
ವರದಿ: ಜಗದೀಶ್ ಕುಮಾರ್
