ಉತ್ತರ ಕನ್ನಡ/ ಶಿರಸಿ: ಇತ್ತೀಚೆಗೆ ಆಸ್ತಿ ವ್ಯಾಜ್ಯಗಳು ಬಹಳವಾಗುತ್ತಿವೆ; ಇದರಿಂದ ಸಮಾಜದ ಸ್ವಾಸ್ಥ್ಯ ಏರುಪೇರು ಆಗುತ್ತಿದೆ; ವಿವಾಹ ವಿಚ್ಛೇದನಗಳು ಅತಿಯಾಗುತ್ತಿವೆ; ಸಹೋದರ ಸಹೋದರಿಯರಲ್ಲಿ ಆಸ್ತಿಯಿಂದಾಗಿ ಆತ್ಮೀಯತೆ ಕಡಿಮೆಯಾಗುತ್ತಿದೆ; ವಿಲ್ ಬರೆಯುವಾಗ ಗಮನಿಸಬೇಕಾದ ಅಂಶಗಳು ಬಹಳ ಇವೆ ಎಂದು ಶಿರಸಿಯ ಖ್ಯಾತ ವಕೀಲ ಅರುಣಾಚಲ ಹೆಗಡೆ ಅವರು ನುಡಿದರು.
ಅವರು ಇತ್ತೀಚೆಗೆ ಗಾಯತ್ರಿ ಗೆಳೆಯರ ಬಳಗದಲ್ಲಿ ಕಾನೂನು ಅರಿವು ಕಾರ್ಯಕ್ರಮದಲ್ಲಿ ಹಿಂದೂ ವಾರಸಾ ಕಾಯ್ದೆಯ ಹಲವು ಮಜಲುಗಳ ವಿಸ್ತೃತ ಮಾಹಿತಿ ನೀಡಿದ ಅವರು ಮುಂದುವರೆದು ವಿಲ್ ಸರಿಯಾಗಿ ನೋಂದಾವಣೆ ಮಾಡದಿರುವುದರಿಂದ ಆಗುತ್ತಿರುವ ತೊಂದರೆ, ಕಾಯ್ದೆಯ ಇತ್ತೀಚಿನ ತಿದ್ದುಪಡಿ ಪ್ರಕಾರ ಹೆಣ್ಣು ಮಕ್ಕಳಿಗೆ ಆಸ್ತಿ ಹಕ್ಕು, ಅನ್ಯ ಕೋಮಿನವರಿಂದ ಆಸ್ತಿ ಖರೀದಿಸುವಾಗ ಗಮನಿಸಬೇಕಾದ ಅಂಶಗಳು ಇತ್ಯಾದಿ ಮಾಹಿತಿ ಜನಸಾಮಾನ್ಯರಿಗೆ ಬಹಳ ಅಗತ್ಯವೆಂದು ಪ್ರತಿಪಾದಿಸಿದರು. ತುಂಬಿದ ಸಭೆಯಲ್ಲಿದ್ದ ಸಭಿಕರ ಅನೇಕ ಸಂದೇಹಗಳಿಗೆ ವಿವರಣೆ ನೀಡಿದರು.
ಕಾರ್ಯಕ್ರಮದ ಆರಂಭದಲ್ಲಿ ಕುಮಾರ್ ಮೋಹಿತ ಭಂಡಾರಿ ಅವರಿಂದ ಶಂಕರ ಭಗವತ್ಪಾದರ ಸೌಂದರ್ಯ ಲಹರಿ ಸ್ತೋತ್ರ ಪಠಣ ಜನರ ಮೆಚ್ಚುಗೆ ಗಳಿಸಿತು.
ಇಂದಿರಾ ಬೈಲಕೇರಿ ಸ್ವಾಗತಿಸಿದರು, ರವಿ ಹೆಗಡೆ ಗಡಿಹಳ್ಳಿ, ಅತಿಥಿಗಳನ್ನು ಪರಿಚಯಿಸಿದರು ಹಾಗೂ ಡಿ. ಎಸ್. ಹೆಗಡೆ ಮುರೂರ ಪ್ರಸ್ತಾವನೆ ಮಾಡಿ ಕಾರ್ಯಕ್ರಮ ನಿರೂಪಣೆಗೈದರು. ಬಳಗದ ಮುಖ್ಯಸ್ಥ ಎಂ.ಎಸ್.ಹೆಗಡೆ ವಂದಿಸಿ, ಬಾಲಕನಿಗೆ ಅವನ ಪಾಲಕರಿಗೆ, ಉಪನ್ಯಾಸಕರಿಗೆ ಗೌರವ ಸಮರ್ಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ಹಿರಿಯರಾದ ರಾಮ್ ಪೈ, ಶಂಕರ ಹೆಗಡೆ ಭದ್ರನ್, ಆರ್ ಎಸ್ ಬೈಲಕೇರಿ,ಎಸ್ ಎಸ್ ಹೆಗಡೆ, ಎಸ್ ಮಂಜುನಾಥ್, ಜಿ ಎಂ ಹೆಗಡೆ ಬೊಮ್ಮನಳ್ಳಿ, ಲಕ್ಷ್ಮಣ ಶಾನಭಾಗ, ಹೊಂಬಾಳಿ, ದಾಮೋದರ ಭಂಡಾರಿ, ಆರ್ ಜಿ ದೇಶಪಾಂಡೆ, ಪಾರ್ವತಿ ಹೆಗಡೆ, ಸುಧಾ ಹೆಗಡೆ, ಕೃಷ್ಣವೇಣಿ ಹೆಗಡೆ, ತ್ರಿವೇಣಿ ಹೆಗಡೆ, ಆಶಾ ಸಭಾಹಿತ, ಸಂಧ್ಯಾ ಭಂಡಾರಿ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ವರದಿ: ಶ್ರೀ ಕೊಡಕ್ಕಲ್ ಶಿವಪ್ರಸಾದ
