
ಬಳ್ಳಾರಿ / ಕಂಪ್ಲಿ : ಪಹಲ್ಗಾಮ್ ಭಯೋತ್ಪಾದಕ ಕೃತ್ಯ ಖಂಡಿಸಿ ನಗರದ 17 ಮತ್ತು 18ನೇ ವಾರ್ಡಿನ ಕ್ರಿಕೆಟ್ ಯುವ ಆಟಗಾರರಿಂದ ಕಪ್ಪು ಬಟ್ಟಿ ಧರಿಸಿ ಕ್ರಿಕೆಟ್ ಆಟ ಆಡಿ ಗಮನಸೆಳೆದರು.
ಹೌದು ಜಮ್ಮು ಕಾಶ್ಮೀರದ ಪಹೆಲ್ಗಾಮ್‍ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ನಡೆಸಿದ ದಾಳಿಯನ್ನು ಖಂಡಿಸಿ, ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಲಾಯಿತು. ಇದೇ ವೇಳೆ ದಾಳಿಯಲ್ಲಿ ಮೃತರಾದವರಿಗೆ ಮೌನಾಚರಣೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ನಗರದ 17 ಮತ್ತು 18 ವಾರ್ಡಿನ ಯುವಕರ ತಂಡ ಪ್ರೀಮಿಯರ್ ಲೀಗ್ 8 ಓವರ್ ನ ಕ್ರಿಕೆಟ್ ಪಂದ್ಯಾವಳಿಯಲ್ಲಿ ,RCB, Bombay Blasaters, The Kings, Lions Bird, Bhagat Singh, Raja Huli Boys, A Team, Squad Hunters ಒಟ್ಟು ಎಂಟು ತಂಡಗಳು ಭಾಗವಹಿಸಿದ್ದು,
ಆಟಗಾರ ಹೆಚ್. ನಿಸಾರ್ ಮಾತನಾಡಿ ಈ ದಾಳಿಯು ಮಾವೀಯತೆಯ ಮೇಲಿನ ದಾಳಿಯಾಗಿದ್ದು ಭಾರತದಲ್ಲಿರುವ ನಾವು ಹಿಂದೂ ಮುಸ್ಲಿಂ ಬಾಯಿ ಬಾಯಿ ಎಂದು ವಿವಿಧತೆಯಲ್ಲಿ ಏಕತೆಯಿಂದ ಬದುಕುತ್ತಿದ್ದು ಶಾಂತಿ ಕದಡುವ ಹುನ್ನಾರವನ್ನು ನಡೆಸುತ್ತಿರುವ ಕೆಲವು ಕ್ಷುದ್ರಶಕ್ತಿಗಳನ್ನು ಕೇಂದ್ರ ಸರ್ಕಾರ ಕೂಡಲೇ ಸೇದೆ ಬಡಿಯುವ ಕೆಲಸವನ್ನು ಮಾಡಬೇಕು ಎಂದು ತಿಳಿಸಿದರು.
ಅಮಾಯಕ ಜನರ ಸಾವಿಗೆ ಕಾರಣರಾದ ಉಗ್ರರಿಗೆ ಹಾಗೂ ಕೃತ್ಯ ನಡೆಸಲು ಸಹಕರಿಸಿದವರಿಗೆ ತಕ್ಕ ಶಿಕ್ಷೆ ನೀಡಬೇಕು ಎಂದು ಎಲ್ಲಾ ಆಟಗಾರರು ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಹಮದ್ ಕೈಫ್, ಮುಕ್ತೀಯರ ಬಾಗ್ಲಿ , ವೆಂಕಟೇಶ, ಶ್ರೀಕಾಂತ, ಚಂದ್ರು, ಶಕೀಲ್, ಕೆ. ಎಸ್. ಮೆಹಬೂಬ, ಚಂದಭಾಷಾ, ಎಂ.ಡಿ ಸಾಧಿಕ್ ಸೇರಿದಂತೆ ಆಟಗಾರರು ಹಾಗೂ ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್.
