
ರಾಯಚೂರು : ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರಿಂದ ಹಿಂದೂಗಳ ಮೇಲೆ ನಡೆಸಿರುವ ದಾಳಿಯನ್ನು ಖಂಡಿಸಿ ವಿದ್ಯಾರ್ಥಿ ಪರಿಷತ್ ವತಿಯಿಂದ ನಗರದ ಬಿಸಿ ಬಿಸಿಎಂ ವೃತ್ತಿಪರ ವಸತಿ ನಿಲಯದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ನೇತಾಜಿನಗರ ಪೊಲೀಸ್ ಠಾಣೆಯ ಪಿಎಸ್ಐ ಲಕ್ಷ್ಮಿ, ವೃತ್ತಿಪರ ವಸತಿ ನಿಲಯದ ವಾರ್ಡನ್ ಈರಮ್ಮ ಪತ್ತಾರ್ ಮತ್ತು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ರಾಯಚೂರಿನ ಜಿಲ್ಲಾ ಸಂಚಾಲಕರಾದ ಭೀಮೇಶ್ ಸಾಗರ್, ಸಂಘಟನೆ ಕಾರ್ಯದರ್ಶಿಗಳಾದ ಸಂಜಯ್ ಹತ್ತಿಗಟ್ಟಿಗಿ ,
ಹನುಮಂತು, ವರಪ್ರಸಾದ್,ಶಾಂತಕುಮಾರ್
ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
- ಕರುನಾಡ ಕಂದ
