ಬಳ್ಳಾರಿ/ ಕಂಪ್ಲಿ : ತಾಲೂಕಿನ ಮಾವಿನಹಳ್ಳಿ ಗ್ರಾಮದ ರೈತರಾದ ಬಿ ಸಿದ್ದಪ್ಪ ಧರ್ಮಪ್ಪನವರು ಸಂಕ್ಲಾಪುರ ಗ್ರಾಮಕ್ಕೆ ಸೇರಿದ ಗುತ್ತಿಗೆ ಹೊಲದಲ್ಲಿ ಬಾಳೆತೋಟ ಮೊದಲು ಬೆಳೆ ಬಾಳೆ ಗೊನೆ ಕಟಾವಿಗೆ ಬಂದಿತ್ತು. ಆದರೆ ನಿನ್ನೆ ಸಂಜೆ ಸುರಿದ ಆಲಿ ಕಲ್ಲು ಮಳೆಗೆ ಎಲ್ಲಾ ತೋಟ ನೆಲಕ್ಕೆ ಉರುಳಿದೆ. ರೈತರು ಮನನೊಂದು ಈ ರೈತರ ಜೀವನ ಯಾರು ಕೇಳಬೇಕು ಎಂದು ಗೋಗರಿಯುತ್ತಾರೆ. ಗ್ರಾಮ ಲೆಕ್ಕಾಧಿಕಾರಿ, ತಹಶೀಲ್ದಾರ್ ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡುವುದಿಲ್ಲ, ಇಲ್ಲಿನ ಗ್ರಾಮದಲ್ಲಿ ಬಾಳೆತೋಟ, ಭತ್ತ, ಮೆಕ್ಕೆಜೋಳ, ಹಲಸಂದಿ ಇನ್ನೂ ಅನೇಕ ಬೆಳೆಗಳು ನೆಲಕಚ್ಚಿ ರೈತರಿಗೆ ಬಹಳಷ್ಟು ನಷ್ಟವನ್ನುಂಟು ಮಾಡಿದೆ. ಬೆಳೆದ ಬೆಳೆಗೆ ಸರಿಯಾದ ಬೆಲೆ ಇಲ್ಲ ಮತ್ತು ಬಂದ ಬೆಳೆ ಆಲಿ ಕಲ್ಲು ಮಳೆಗೆ ಎಲ್ಲಾ ಬೆಳೆಗಳು ನಾಶವಾಗಿದೆ. ಇದರಿಂದ ಜನರಿಗೆ ಕರ್ನಾಟಕ ಸರ್ಕಾರದ ತೋಟಗಾರಿಕೆ ಇಲಾಖೆ ಮತ್ತು ಕೃಷಿ ಇಲಾಖೆ ಭೇಟಿ ನೀಡಿ ನಷ್ಟ ಪರಿಹಾರವನ್ನು ಒದಗಿಸಿ ಕೊಡಬೇಕೆಂದು ಬಾಳೆತೋಟದ ರೈತರಾದ ಬಿ ಸಿದ್ದಪ್ಪ ಧರ್ಮಪ್ಪ ಮತ್ತು ಇಲ್ಲಿನ ರೈತರಾದ ಜೆ.ಪ್ರಕಾಶ್, ಹುಚ್ಚಪ್ಪ, ವಿರೇಶ, ವಿರುಪಣ್ಣ, ದೊಡ್ಡಪ್ಪ, ಬಸವರಾಜ ಇನ್ನೂ ಅನೇಕ ರೈತರು ಒತ್ತಾಯವಾಗಿದೆ. ಕೂಡಲೇ ಗ್ರಾಮಲೆಕ್ಕಾಧಿಕಾರಿ, ತಹಶೀಲ್ದಾರ್ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಬೇಕೆಂದು ರೈತರು ತಿಳಿಸಿದ್ದಾರೆ.
ವರದಿ : ಜಿಲಾನಸಾಬ್ ಬಡಿಗೇರ್.
