
ಯಾದಗಿರಿ/ ಗುರುಮಠಕಲ್: ಇಂದು ಬೆಳಿಗ್ಗೆಯಿಂದನೆ ಮಳೆರಾಯ ಗುಡುಗು ಸಹಿತ ಪಟ್ಟಣ ಹಾಗೂ ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳಲ್ಲಿ ಆರ್ಭಟಿಸುತ್ತಿದ್ದು, ಜನ ಜೀವನ ಸಂಪೂರ್ಣ ಸ್ಥಬ್ದವಾಗಿದೆ.
ಪಟ್ಟಣದ ಬಹುತೇಕ ಅಂಗಡಿಗಳಿಗೆ ನೀರು ನುಗ್ಗಿ, ನೀರು ಹೊರಹಾಕಲು ಪರದಾಡುತ್ತಿರುವ ವರ್ತಕರು ಪರದಾಡುತ್ತಿದ್ದರೆ, ಪಟ್ಟಣದ ರಸ್ತೆ ಕಾಮಗಾರಿ ಕೆಲಸ ನಡೆಯುತ್ತಿದ್ದು, ರಸ್ತೆ ಎತ್ತರದಲ್ಲಿ ಹಾಕುತ್ತಿರುವ ಪರಿಣಾಮ ಕೆಳ ಭಾಗದಲ್ಲಿರುವ ಅಂಗಡಿ ಮನೆಗಳಿಗೆ ನೀರು ನುಗ್ಗಿ ಸಾಕಷ್ಟು ಹಾನಿಯಾಗಿದೆ. ಇನ್ನೂ ಎರಡು ಗಂಟೆಗಳಿಂದ ಸತತವಾಗಿ ಸಿಡಿಲು, ಆಣೆಕಲ್ಲು ಮಳೆ ಬೀಳುತ್ತಿದ್ದು, ಮಳೆ ನಿಂತಾಗ ಮಾತ್ರ ಎಲ್ಲೆಲ್ಲಿ ಏನು ಹಾನಿಯಾಗಿದೆ ಎಂದು ತಿಳಿದು ಬರುತ್ತೆ.
ವರದಿ: ಜಗದೀಶ್ ಕುಮಾರ್
