
ಬಳ್ಳಾರಿ / ಕಂಪ್ಲಿ : ತಾಲೂಕಿನ ಸೋಮಲಾಪುರ ಗ್ರಾಮದಲ್ಲಿ ಶನಿವಾರ ಸಂಜೆ ಬೀಸಿದ ಬಿರುಗಾಳಿ ಗುಡುಗು ಮಿಂಚು ಆಲಿಕಲ್ಲು ಸಹಿತ ಮಳೆಗೆ ಕೊಯ್ಲಿಗೆ ಸಿದ್ಧವಾಗಿದ್ದ ನೂರಾರು ಎಕರೆ ಹಿಂಗಾರು ಭತ್ತದ ಕಾಳು ನೆಲದ ಪಾಲಾಗಿದೆ.
ಕನಿಷ್ಠ ಅರ್ಧ ಗಂಟೆಗೂ ಹೆಚ್ಚು ಕಾಲ ಆಲಿಕಲ್ಲು ಮಳೆ ಸುರಿದಿದ್ದು ಸಂಪೂರ್ಣ ಭತ್ತದ ಪೈರು ನೆಲ ಕಚ್ಚುವುದರ ಜೊತೆಗೆ ಭತ್ತದ ಕಾಳು ತೆನೆಯಿಂದ ಬೇರ್ಪಟ್ಟು ಕೆಸರುಮಯವಾಗಿರುವುದನ್ನು ಕಂಡು ದಿಕ್ಕು ತೋಚದಂತಾಗಿದೆ ಎಂದು ಗ್ರಾಮದ ರೈತ ಎಸ್. ಕೆ. ಮಲ್ಲಿಕಾರ್ಜುನ್ ಬೇಸರ ವ್ಯಕ್ತಪಡಿಸಿದರು.
ದರೋಜಿ ಕೆರೆ ನೀರಿನಿಂದ ಈ ಬೇಸಿಗೆಯಲ್ಲಿ ಆರ್. ಎಸ್. ಆರ್. ಮತ್ತು ಗಂಗಾ ಕಾವೇರಿ ತಳಿ ಬೆಳೆಯಲಾಗಿತ್ತು ಆದರೆ ಮಳೆರಾಯನ ಅವಾಂತರದಿಂದ ಕೈಗೆ ಬಂದ ತುತ್ತು ಬಾಯಿಗೆ ಬರೆದಂತಾಗಿದೆ ಎಂದು ಗ್ರಾಮದ ಇನ್ನು ರೈತರು ದುಃಖದಿಂದ ಅಸಮಾಧಾನ ವ್ಯಕ್ತಪಡಿಸಿದರು. ಸ್ಥಳಕ್ಕೆ ಶಾಸಕ ಜೆ. ಎನ್. ಗಣೇಶ ಹಾಗೂ ತಹಶೀಲ್ದಾರ್ ಎಸ್. ಶಿವರಾಜ ಹಾಗೂ ಸಂಬಂಧಿಸಿದ ಅಧಿಕಾರಿಗಳು ಭೇಟಿ ನೀಡಿ ಸಮೀಕ್ಷೆ ನಡೆಸಿದ್ದರು ಆದಷ್ಟು ಬೇಗ ನಷ್ಟ ಪರಿಹಾರ ನೀಡುತ್ತೇವೆಂದು ರೈತರಿಗೆ ಭರವಸೆ ನೀಡಿದರು.
ವರದಿ : ಜಿಲಾನಸಾಬ್ ಬಡಿಗೇರ್.
