ಕಲಬುರಗಿ/ ಜೇವರ್ಗಿ :ನಮ್ಮ ದೇಶದ ಪ್ರಧಾನಿ ಮೋದಿ ಅವರು ಜಗತ್ತು ಮೆಚ್ಚುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಪಾಕಿಸ್ತಾನಿಯರ ಎಲ್ಲಾ ವೀಸಾಗಳನ್ನು ರದ್ದು ಮಾಡಲಾಗಿದೆ ಅದೇ ರೀತಿಯಾಗಿ ಸಿಂಧೂ ನದಿಯ ನೀರನ್ನು ಸ್ಥಗಿತಗೊಳಿಸಲಾಗಿದೆ ಅದೇ ರೀತಿಯಾಗಿ ಭಾರತದಲ್ಲಿರುವ ಪಾಕಿಸ್ತಾನಿಗಳನ್ನು ಜಾಗ ಬಿಡುವಂತೆ ತಿಳಿಸಿದ್ದಾರೆ ವಾಯು ಮಾರ್ಗ ಬಂದ್ ಆಗಿದೆ ಒಟ್ಟಾರೆ ಪಾಕಿಸ್ತಾನದ ವಿರುದ್ಧ ದೇಶದ ಪ್ರಧಾನಿ ಮೋದಿಜಿ ಯವರು ಸರಿಯಾದ ನಿರ್ಧಾರವನ್ನೇ ತೆಗೆದುಕೊಂಡಿದ್ದಾರೆಂದು ಜೇವರ್ಗಿ ತಾಲೂಕಿನ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ರೈತ ಸೇನೆಯ ತಾಲೂಕ ಅಧ್ಯಕ್ಷರಾದ ಸಿದ್ದಲಿಂಗ ಪೂಜಾರಿ ಎಚ್ ಹಾಲಗಡ್ಲಾ ಅವರು ಪ್ರಧಾನಿ ಮೋದಿಯವರ ಕಾರ್ಯಕ್ಕೆ ನೈತಿಕ ಬೆಂಬಲ ಸೂಚಿಸಿದ್ದಾರೆ ಅದೇ ರೀತಿಯಾಗಿ ಭಯೋತ್ಪಾದಕರು ಜಿಹಾದ್ ಯುದ್ಧ ಸಾರಿದ್ದಾರೆ ತಮ್ಮ ಪ್ರಾಣ ಬಲಿ ಕೊಡಲು ತಯಾರಾಗಿದ್ದಾರೆ ತಾವು ಸತ್ತರೆ ಸ್ವರ್ಗಕ್ಕೆ ಹೋಗುವುದಾಗಿ ನಂಬಿದ್ದಾರೆ ಆದರೆ ಖಂಡಿತ ಅವರು ನರಕಕ್ಕೆ ಹೋಗುತ್ತಾರೆ ಭಯೋತ್ಪಾದಕರನ್ನು ಮುಗಿಸಿದರೆ ಸಾಲದು ಈ ದೇಶದಲ್ಲಿ ಭಯೋತ್ಪಾದನೆಗೆ ಕುಮುಕು ಅಥವಾ ಬೆಂಬಲ ಕೊಡುವವರನ್ನು ಮುಗಿಸಬೇಕಿದೆ ಪಾಕಿಸ್ತಾನ ಎಂಬುವುದು ನಾವು ಕೊಟ್ಟ ಭಿಕ್ಷೆಯ ದೇಶ ಅದಕ್ಕೆ ಎಷ್ಟು ಸೊಕ್ಕು ಇರಬೇಕು ನೆಹರೂ ಮಾಡಿದ ತಪ್ಪಿನಿಂದ ಪಾಕಿಸ್ತಾನ ಉದಯವಾಯಿತು ಅದು ಸರ್ವನಾಶವಾಗಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ರೈತ ಸೇನೆಯ ಜೆವರ್ಗಿ ತಾಲೂಕ ಅಧ್ಯಕ್ಷರಾದ ಸಿದ್ದಲಿಂಗ ಎಚ್ ಪೂಜಾರಿ ಹಾಲಗಡ್ಲಾ ಅವರು ಕುತಂತ್ರಿ ಪಾಕಿಸ್ತಾನದ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
- ಕರುನಾಡ ಕಂದ
