ರಾಯಚೂರು: ಸಿಂಧನೂರು ನಗರದ ಕುಷ್ಟಗಿ ರಸ್ತೆಯಲ್ಲಿರುವ ಅಗ್ನಿ ಆಂಜನೇಯ ದೇವಸ್ಥಾನ ಹಾಗೂ ಅಗ್ನಿ ಶಾಮಕ ದಳದ ಆವರಣದಲ್ಲಿ ವನಸಿರಿ ಫೌಂಡೇಷನ್ ವತಿಯಿಂದ ನ್ಯಾಷನಲ್ ಕಾಲೇಜು NSS ಘಟಕದ ಅಧಿಕಾರಿ ರವಿಕುಮಾರ ಸ್ವಾಮಿ ಅವರ ಹುಟ್ಟುಹಬ್ಬದ ಅಂಗವಾಗಿ ವಿಶೇಷವಾಗಿ
ಪಕ್ಷಿಗಳ ಅರವಟ್ಟಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಪಕ್ಷಿಗಳಿಗೆ ನೀರುಣಿಸುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡ ನ್ಯಾಷನಲ್ ಕಾಲೇಜು NSS ಘಟಕದ ಅಧಿಕಾರಿ ರವಿಕುಮಾರ ಮಾತನಾಡಿ 12 ನೇ ಶತಮಾನದಲ್ಲಿ ಶರಣರು ಕೆರೆ ಕಟ್ಟೆಗಳನ್ನು ನಿರ್ಮಿಸಿ, ಅದರ ಪಕ್ಕದಲ್ಲಿ ಒಂದು ಗುಂಪು ಹಾಕಿಕೊಂಡು ಪಕ್ಷಿಧಾಮ ನಿರ್ಮಿಸಿ ಪಕ್ಷ ಸಂಕುಲ ಉಳಿಸಿ ಅವು ಬಾನೆತ್ತರಲ್ಲಿ ಹಾರಾಡುತ್ತಾ ಚೆಲ್ಲಾಟವಾಡುವುದನ್ನು ನೋಡಿ ಮನರಂಜನೆ ಪಡೆದುಕೊಳ್ಳುತ್ತಿದ್ದರು. ಆದರೆ ಇಂದಿನ ತಂತ್ರಜ್ಞಾನದ ಅಳವಡಿಕೆಯಿಂದ ಪಕ್ಷಿ ಸಂಕುಲವೇ ನಾಶವಾಗುತ್ತಿದೆ. ಉಳಿದ ಪಕ್ಷಿ ಸಂಕುಲವನ್ನು ಉಳಿಸುವುದು ಅನಿವಾರ್ಯವಾಗಿದೆ. ರಾಜ್ಯದಲ್ಲಿ ಬಿಸಿಲಿನ ತಾಪ ಹೆಚ್ಚುತ್ತಿದೆ. ಜಲ ಮೂಲಗಳು ಬತ್ತಿಹೋಗುತ್ತಿವೆ, ಅಂತರ್ಜಲ ಮಟ್ಟ ಕುಸಿಯುತ್ತಿದೆ, ಸಿಸಿ ರಸ್ತೆ, ಡಾಂಬರೀಕರಣದಿಂದ ತಾಪಮಾನ ಈಗಲೇ 35-36 ಡಿಗ್ರಿ ಸೆಲ್ಸಿಯಸ್ ದಾಖಲಾಗುತ್ತಿದ್ದು, ಕೆಲ ಜಿಲ್ಲೆಗಳಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ, ಇದು ಪಕ್ಷಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ದಿನ ಬೆಳಗ್ಗೆ ಸೂರ್ಯ ಹುಟ್ಟುವುದರೊಳಗೆ ಪಕ್ಷಿಗಳು ತಮ್ಮ ದಿನದ ಆಹಾರ ಹುಡುಕಿಕೊಳ್ಳುತ್ತವೆ. ಪಕ್ಷಿ ಸಂಕುಲದ ಉಳಿವಿಗಾಗಿ ಅಲ್ಲಲ್ಲಿ ನೀರು ತುಂಬಿದ ಪಾತ್ರೆಗಳನ್ನು ಇಡಲಾಗುತ್ತಿದೆ. ಆ ಮೂಲಕ ವನಸಿರಿ ಫೌಂಡೇಷನ್ ಸಂಸ್ಥೆಯಿಂದ ಬೇಸಿಗೆ ಸಂದರ್ಭದಲ್ಲಿ ಪಕ್ಷಿಗಳ ಉಳಿವಿಗಾಗಿ ಶ್ರಮಿಸಲಾಗುತ್ತಿದೆ. ನೀವು ಕೂಡಾ ವನಸಿರಿ ಫೌಂಡೇಷನ್ ಜೊತೆಗೆ ಕೈಜೋಡಿಸಿ ಪಕ್ಷಿಗಳ ಉಳಿವಿಗೆ ಶ್ರಮಿಸಲು ಮುಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ವನಸಿರಿ ಫೌಂಡೇಷನ್ ಅಧ್ಯಕ್ಷ ಅಮರೇಗೌಡ ಮಲ್ಲಾಪುರ, ಮಹೇಶ ಹಿರೇಮಠ, ಪ್ರವೀಣ ಕುಮಾರ, ಚನ್ನಪ್ಪ ಕೆ ಹೊಸಹಳ್ಳಿ, ಮುದಿಯಪ್ಪ ಹೊಸಳ್ಳಿ ಕ್ಯಾಂಪ್, ಮಹಾವೀರ ಸೇಠ, ಅಗ್ನಿ ಶಾಮಕ ದಳದ ಸಿಬ್ಬಂದಿಗಳು, ವನಸಿರಿ ಪೌಂಡೇಷನ್ ಸದಸ್ಯರು, NSS ವಿದ್ಯಾರ್ಥಿಗಳು ಭಾಗವಹಿಸಿದ್ದರು.
- ಕರುನಾಡ ಕಂದ
