ಕಲಬುರಗಿ : ಯಡ್ರಾಮಿ ತಾಲೂಕಿನ ಪ್ರತಿಯೊಂದು ಹಳ್ಳಿಗಳಲ್ಲಿ 2018 ರಿಂದ ಕೇಂದ್ರ ಸರ್ಕಾರದ ಜಲಜೀವನ್ ಮಿಷನ್ ಕಾಮಗಾರಿ ಆರಂಭಿಸಲಾಗಿದೆ ಆದರೆ ಈ ಕಾಮಗಾರಿ ಯದ್ವಾತದ್ವಾ ನಡೆದಿದ್ದು ಕಂಡು ಬಂದಿದೆ ಇದಕ್ಕೆ ಸಂಬಂಧಪಟ್ಟ ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಈ ಕಾಮಗಾರಿಗಳನ್ನು ಪರಿಶೀಲನೆ ಮಾಡದೆ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ. ಗ್ರಾಮದ ಪ್ರತಿ ಮನೆಗಳಿಗೂ 24 ಗಂಟೆ ಶುದ್ಧ ಕುಡಿಯುವ ನೀರನ್ನು ಪೂರೈಸುವುದು ಈ ಯೋಜನೆಯ ಗುರಿಯಾಗಿದೆ ಆದರೆ ಕೇಂದ್ರ ಸರ್ಕಾರದ ಕೋಟ್ಯಾಂತರ ರೂಪಾಯಿ ದುಂದು ವೆಚ್ಚವಾಗುತ್ತಿದೆ ಇದಕ್ಕೆ ಸಂಬಂಧಪಟ್ಟ ತಾಂತ್ರಿಕ ಸಹಾಯಕರು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಇಲ್ಲಿನ ಸ್ಥಳೀಯ ಗ್ರಾಮ ಪಂಚಾಯತಿ ಅಧ್ಯಕ್ಷರು ಸ್ಥಳೀಯ ಗ್ರಾಮಸ್ಥರ ನಿರ್ಲಕ್ಷ್ಯ ಧೋರಣೆಯಿಂದ ಜೆಜೆಎಂ ಕಾಮಗಾರಿ ಕದೀಮರ ಕೈಯಲ್ಲಿ ಸಿಕ್ಕು ಹಳ್ಳ ಹಿಡಿದು ಹೊರಟಿದೆ ಎನ್ನಬಹುದು ಸಿಸಿ ರಸ್ತೆಯನ್ನು ಅಗೆದು ಹಾಳುಗೆಡವಲಾಗಿದ್ದು ಈ ರಸ್ತೆಯಲ್ಲಿ ಸಂಚಾರ ಮಾಡಬೇಕಾದ ವಾಹನ ಸವಾರರು ಹರಸಾಹಸ ಪಡುತ್ತಿದ್ದಾರೆ ಅದೇ ರೀತಿಯಾಗಿ ರಸ್ತೆಗಳಿಗೆ ಅಳವಡಿಸಿದ ಪೈಪುಗಳನ್ನು ಕಿತ್ತು ಕೆಲವು ರೈತರು ಈ ಕಾಮಗಾರಿ ಯಾವಾಗ ಆಗುತ್ತೋ ಎಂದು ತಮ್ಮ ಮನೆಯೊಳಗೆ ಅಳವಡಿಸಿದ್ದ ಪೈಪುಗಳನ್ನು ಕಿತ್ತುಕೊಂಡು ಮನೆಯಲ್ಲಿ ಇಟ್ಟುಕೊಂಡಿದ್ದಾರೆ ಅದೇ ರೀತಿಯಾಗಿ ಕೆಲವು ಗ್ರಾಮಸ್ಥರ ಮನೆಗಳಿಗೆ ಅಳವಡಿಸಿದ್ದ ಪೈಪುಗಳು ವಾಹನ ಸಂಚಾರದಿಂದ ಡ್ಯಾಮೇಜ್ ಆಗಿ ಹಾಳಾಗಿ ಹೋಗಿವೆ ಇದಕ್ಕೆ ಸಂಬಂಧಪಟ್ಟ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ತಾಲೂಕ ತನಿಖಾ ಸಮಿತಿಯವರು ಯಡ್ರಾಮಿ ತಾಲೂಕಿನ ಪ್ರತಿಯೊಂದು ಹಳ್ಳಿಗಳಿಗೆ ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿಯನ್ನು ಪರಿಶೀಲನೆ ಮಾಡಬೇಕೆಂದು ರಾಷ್ಟ್ರೀಯ ಅಹಿಂದ ಸಂಘಟನೆಯ ಯಡ್ರಾಮಿ ತಾಲೂಕ ಅಧ್ಯಕ್ಷರಾದ ಮಹಾಂತಗೌಡ ಆರ್ ಪಾಟೀಲ್ ಹಂಗರಗಾ ಕೆ ಅವರು ಪತ್ರಿಕಾ ಪ್ರಕಟಣೆಯ ಮೂಲಕ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ್ದಾರೆ ಒಂದು ವೇಳೆ ಈ ವರದಿಗೆ ಎಚ್ಚೆತ್ತುಕೊಳ್ಳದಿದ್ದಲ್ಲಿ ತಾಲೂಕ ಪಂಚಾಯತ್ ಕಚೇರಿಗೆ ಸಂಬಂಧಪಟ್ಟ ಎಲ್ಲಾ ಗ್ರಾಮಸ್ಥರೊಂದಿಗೆ ಮುತ್ತಿಗೆಯನ್ನು ಹಾಕಿ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳಲಾಗುವುದೆಂದು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.
- ಕರುನಾಡ ಕಂದ
