ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಜಾಗತಿಕ ಪ್ರಪಂಚಕ್ಕೆ ಬಸವಣ್ಣನವರ ಕೊಡುಗೆ ಅಪಾರ.

ಬೀದರ್/ ಚಿಟಗುಪ್ಪಾ: ಜಾಗತಿಕ ಪ್ರಪಂಚಕ್ಕೆ ಬಸವಣ್ಣನವರ ಕೊಡುಗೆ ಅಪಾರ ಎಂದು ಅನುಭವ ಮಂಟಪದ ಅಧ್ಯಕ್ಷ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ನುಡಿದರು.

ತಾಲೂಕಿನ ಕಂದಗೋಳ ಗ್ರಾಮದಲ್ಲಿ ವಿಶ್ವ ಗುರು ಬಸವಣ್ಣನವರ ಅಶ್ವಾರೂಢ ಮೂರ್ತಿ ಅನಾವರಣ ಹಾಗೂ ಬಸವ ಜಯಂತಿ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು ಬಸವಣ್ಣನವರು ಅಂದು ಸಾಮಾಜಿಕ ನ್ಯಾಯದ ಮೇಲೆ ಸರ್ವ ಜನಾಂಗದ, ಸಕಲ ಜೀವಾತ್ಮರ ಕಲ್ಯಾಣಕ್ಕಾಗಿ ತಮ್ಮ ಜೀವನದ ಹಂಗನ್ನು ತೊರೆದು ಶ್ರಮಿಸಿದ ಮಾಹಾನ ಚೇತನರು, ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಸಿಗಬೇಕೆಂದು ಹೋರಾಟ ಮಾಡಿ, ನ್ಯಾಯ ಒದಗಿಸಿ‌ ಅದರಂತೆ ನಡೆದವರು.
ಕನ್ನಡದಲ್ಲಿ ವಚನಗಳನ್ನು ರಚಿಸಿ, ಕನ್ನಡ ಭಾಷೆಯನ್ನು ದೇವ ಭಾಷೆಯನ್ನಾಗಿ ಮಾಡಿದವರು.
ಬಸವಣ್ಣನವರ ತತ್ವ ಚಿಂತನೆಗಳು ಸರ್ವರೂ ಅಳವಡಿಸಿಕೊಂಡು ಇನ್ನೊಬ್ಬರಿಗೆ ಮಾದರಿ ವ್ಯಕ್ತಿಯಾಗಿ ಬಾಳಬೇಕೆಂದು ಕರೆಯನ್ನು ನೀಡಿದರು.
ಸನ್ನಿಧಾನ ವಹಿಸಿದ ಬಸವಕಲ್ಯಾಣ ಗುಣತೀರ್ಥವಾಡಿ ಕಲ್ಯಾಣ ಮಹಾಮನೆ ಪೀಠಾಧ್ಯಕ್ಷ ಬಸವಪ್ರಭು ಶ್ರೀಗಳು ಮಾತನಾಡಿ ಬಸವಣ್ಣನವರ ತತ್ವಗಳು ಸಮಾಜದಲ್ಲಿ ಸಮಾನತೆ ಸಾರುತ್ತವೆ. ನಿತ್ಯ ಜೀವನದಲ್ಲಿ ಅವುಗಳನ್ನು ಅನುಸರಿಸಿದರೆ 12ನೇ ಶತಮಾನದ ಶರಣ ಪರಂಪರೆ ಪುನಃ ಮರುಕಳಿಸುತ್ತದೆ.
ಬಸವಣ್ಣನವರ ಕಳಬೇಡ, ಕೊಲಬೇಡ ಎಂಬ ವಚನವನ್ನು ಚಾಚೂ ತಪ್ಪದೇ ಸರ್ವರೂ ಪಾಲಿಸಬೇಕು ನುಡಿದಂತೆ ನಡೆಯಬೇಕು ಬಸವಣ್ಣನವರ ವಚನಗಳು ಇಂದಿಗೂ ಪ್ರಸ್ತುತ ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಇದರಿಂದ ಸಮಾಜದ ಸ್ವಾಸ್ಥ್ಯ ಕಾಪಾಡಲು ಸಹಕಾರಿ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಬೀದರ್ ಜಿಲ್ಲಾಧ್ಯಕ್ಷ ಸಂಗಮೇಶ ಎನ್ ಜವಾದಿ ಮಾತನಾಡಿ ಸಮಾಜದಲ್ಲಿ ಸಮಾನತೆ, ಸಹಬಾಳ್ವೆಯ ತತ್ವಗಳನ್ನು ಬಿತ್ತಿದ ಬಸವಣ್ಣನವರ ಚಿಂತನೆಗಳು ಕೇವಲ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಲ್ಲ, ಜಗತ್ತಿನ ಒಳಿತಿಗಾಗಿ ಶ್ರಮಿಸಿದ ಅವರ ವಿಚಾರಗಳಿಗೆ ಜಾತಿಯ ಲೇಪ ಹಚ್ಚುವ ಅಗತ್ಯವಿಲ್ಲ. ಬಸವಣ್ಣನವರ ವಿಚಾರಗಳನ್ನು ಸಮಾಜದ ತಳಮಟ್ಟದ ಜನರಿಗೂ ತಲುಪಿಸುವ ಪ್ರಯತ್ನ ಆಗಿದ್ದರೆ ಈವರೆಗೆ ಸಮಾಜದಲ್ಲಿ ಸಮಾನತೆಯ ಆಶಯ ಸ್ವಲ್ಪ ಮಟ್ಟಿಗಾದರೂ ಸಾಕಾರವಾಗುತ್ತಿತ್ತು. ಬಸವಣ್ಣನವರ ವಿಚಾರಗಳನ್ನು ಕೇವಲ ಭಾಷಣಗಳಿಗಷ್ಟೇ ಸೀಮಿತಗೊಳಿಸದೇ ವಿಶ್ವದಾದ್ಯಂತ ಪರಿಚಯಿಸುವ ಕೆಲಸವಾಗಬೇಕು ಎಂದರು.

ಸಮಾರಂಭದ ವೇದಿಕೆ ಮೇಲೆ ಪೂಜ್ಯ ಡಾ. ಮಾಹಾದೇವಮ್ಮಾ ತಾಯಿ ಹಾಗೂ ಪೂಜ್ಯ ಮೈತ್ರಾದೇವಿ ತಾಯಿ ರವರು ಉಪಸ್ಥಿತರಿದ್ದರು.

ಅಧ್ಯಕ್ಷತೆಯನ್ನು ರಾಚಪ್ಪ ಮಾಲಿ ಪಾಟೀಲ ವಹಿಸಿ, ಮಾತನಾಡಿದರು.

ಸಮಾರಂಭದಲ್ಲಿ ಬಂಡೆಪ್ಪಾ ಮೂಲಗಿ, ಮಾಣಿಕಪ್ಪಾ ಹೌಶೆಟ್ಟಿ,ಅಣ್ಣೆಪ್ಪಾ ನಾಗನಕೇರಾ,
ಅನಿಲಕುಮಾರ ಸಿಂದಗಿರಿ, ಜಗನ್ನಾಥ ದೇವಣಿ, ಬಸವರಾಜ ಪೊಲೀಸ್ ಪಾಟೀಲ,ಅಮೃತಪ್ಪಾ ದೇವಣಿ, ಬಂಡೆಪ್ಪಾ ಶೇರಿ,
ರಾಜಶೇಖರ ದೇವಣಿ, ಸಿದ್ರಾಮೇಶ ಧೋಳಾ ಸೇರಿದಂತೆ ಸಮಸ್ತ ಕಂದಗೋಳ ಗ್ರಾಮಸ್ಥರು ಹಾಜರಿದ್ದರು.
ರೇಖಾ ಮಂಜುನಾಥ್ ನಿರೂಪಿಸಿದರು,
ಮಹಾದೇವ ಶೆಟ್ಟಿಗಾರ್ ವಂದಿಸಿದರು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ