
ಕಲಬುರಗಿ :2024 -25 ನೇ ಶೈಕ್ಷಣಿಕ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಕೊನೆಯ ಸ್ಥಾನವನ್ನು ಪಡೆದಿದೆ. ಕೊನೆಯ ಸ್ಥಾನ ಬರುವಲ್ಲಿ ತೊಂದರೆ, ತೊಡಕುಗಳು ಶಿಕ್ಷಣ ಮಟ್ಟದಲ್ಲಿನ ಲೋಪ ದೋಷಗಳು ಪತ್ತೆ ಹಚ್ಚಬೇಕು. ವಿದ್ಯಾರ್ಥಿಯ ಜೀವನದ ಬದಲಾವಣೆಯ ಪ್ರಮುಖ ಹಂತ 10ನೇ ತರಗತಿ ಅದೇ ರೀತಿಯಾಗಿ ಮಕ್ಕಳ ಶಿಕ್ಷಣ ಕುಂಠಿತವಾಗಲು ಕಾರಣವೇನು? ಸರ್ಕಾರ ಜಾರಿಗೆ ತರುವಂತಹ ಯೋಜನೆಗಳಿಂದ ವಿಫಲವಾಗುತ್ತಿದೆಯಾ, ಶಿಕ್ಷಕರ ನಿರ್ಲಕ್ಷವೇ ಕಾರಣನಾ? ರಾಜಕಾರಣಿಗಳು ಕಾರಣನಾ ? ಮಕ್ಕಳನ್ನು ಕೇಳಿದರೆ ಶಿಕ್ಷಕರು ಸರಿಯಾದ ಸಮಯಕ್ಕೆ ಶಾಲೆಗೆ ಬರುವುದಿಲ್ಲವೆಂದು ತಿಳಿಸುತ್ತಾರೆ. ಇದುವೇ ಮೂಲ ಕಾರಣನಾ? ಶಿಕ್ಷಕರು ಸರಿಯಾಗಿ ಪಾಠ ಬೋಧನೆ ಮಾಡುತ್ತಿಲ್ಲಯಾ? ಮಕ್ಕಳಿಗೆ ಶಿಕ್ಷಣ ಮೇಲೆ ಆಸಕ್ತಿ ಕಡಿಮೆಯಾಗಿದೆಯಾ? ಪ್ರಾಥಮಿಕ ಹಾಗೂ ಪ್ರೌಢ ವಿಭಾಗದಲ್ಲಿ ಶಿಕ್ಷಕರ ಕೊರತೆ ಇದ್ದರೂ ಸಹ ಸರಿಯಾದ ಸಮಯದಲ್ಲಿ ನೇಮಕವಾಗುತ್ತಿಲ್ಲ. ಶಿಕ್ಷಣ ಕುಂಠಿತವಾಗಲು ಮೂಲ ಕಾರಣವನ್ನು ಪತ್ತೆ ಹಚ್ಚಬೇಕು. ಮತ್ತು ಪಾಲಕರ ನಿರ್ಲಕ್ಷವೇ ಕಾರಣನಾ? ಶಿಕ್ಷಣ ಇಲಾಖೆಯ ತಜ್ಞರು ಪರಿಶೀಲನೆ ಮಾಡಬೇಕು, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರು ಮಧು ಬಂಗಾರಪ್ಪನವರು ಸರಿಯಾದಂತಹ ಕ್ರಮವನ್ನು ತೆಗೆದುಕೊಳ್ಳಬೇಕೆಂದು ವೀರಣ್ಣ ಗಂಗಾಣಿ ರೈತಸೇನೆ ತಾಲೂಕ ಅಧ್ಯಕ್ಷರು ಕಾಳಗಿ ಮತ್ತು ಚಿಂಚೋಳಿ ತಮ್ಮ ನೋವನ್ನು ತೊಡಗಿಕೊಂಡಿದ್ದಾರೆ.
ವರದಿ ಚಂದ್ರಶೇಖರ್ ಆರ್ ಪಾಟೀಲ್
