ಬಳ್ಳಾರಿ / ಕುರುಗೋಡು : ಬಳ್ಳಾರಿ ರಸ್ತೆಯಲ್ಲಿರುವ ಕುರುಗೋಡನ ಮಾರುತಿ ಕ್ಯಾಂಪಿನ ಬಳಿ ಎಲೆಕ್ಟ್ರಿಕ್ ಕಾರು ಅತಿಯಾದ ವೇಗದಲ್ಲಿ ಚಾಲಕ ಸ್ಟೇರಿಂಗ್ ಬಿಟ್ಟು ನೀರನ್ನು ಕುಡಿಯಲು ಹೋದಾಗ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ನಡೆದಿದೆ.
ಕಾರಿನಲ್ಲಿದ್ದ ಓರ್ವ ಮಹಿಳೆಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಕುರುಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲೆಗೊಂಡಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಚಾಲಕರು ಜಾಗೃತಿಯಿಂದ ವಾಹನಗಳನ್ನು ಚಲಾಯಿಸಬೇಕಾಗಿ ಕರುನಾಡ ಕಂದ ಪತ್ರಿಕೆ ಮನವಿ ಮಾಡುತ್ತದೆ.
ವರದಿ : ಜಿಲಾನಸಾಬ್ ಬಡಿಗೇರ್
