ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ತ್ಯಾಗಮಯಿ, ರೆಡ್ಡಿ ಕುಲದ ಮಹಾ ಶಿವಶರಣೆಯ ದೇವಸ್ಥಾನ ಅನಾವರಣ

ಬಾಗಲಕೋಟೆ :ಪ್ರಾಚೀನ ಕಾಲದಿಂದಲೂ ಜಾತಿ ಆಧಾರಿತ ಸಮಾಜ ನೋಡಿಕೊಂಡು ಬಂದಂತೆಲ್ಲಾ ಒಂದೊಂದು ಸಮಾಜಕ್ಕೆ ಒಬ್ಬೊಬ್ಬರು ಪೀಠಾಧಿಪತಿಗಳಾಗಿ ಸಮಾಜ ಸುಧಾರಣೆಗಾಗಿ ತಮ್ಮದೇ ತಪಸ್ಸು ತ್ಯಾಗಮಯ ಶಕ್ತಿಯಿಂದ ಆಯಾ ಸಮಾಜಕ್ಕೆ ಏನು ಎನ್ನುವುದು ತೋರಿಸಿಕೊಟ್ಟಿದ್ದಾರೆ ಇವತ್ತು ಸಮಾಜ ಸರ್ವ ಜನಾಂಗದ ಶಾಂತಿಯ ತೋಟವಾಗಿ ಈ ನಾಡು ಹೊರಹೊಮ್ಮಿದೆ ತಮ್ಮ ತಮ್ಮ ಧರ್ಮಕ್ಕೆ ತಾವು ಕಠಿಬದ್ಧರಾಗಿದ್ದರು ದೇಶಭಕ್ತಿ ದೇಶದ ಸ್ವಾಯತತ್ತೆಗೆ ಧಕ್ಕೆ ಬಂದಾಗ ಎಲ್ಲರೂ ಒಂದಾಗಿ ಹೋರಾಡಿದ್ದರ ಫಲವೇ ಇವತ್ತು ನಮ್ಮ ದೇಶ ಸ್ವತಂತ್ರ ಪಡೆದು ತನ್ನದೇ ಸಾಮ್ರಾಜ್ಯ ಸ್ಥಾಪಿಸಿಕೊಂಡಿದೆ ಸಮಾಜದ ಕೆಲಸ ಅಂತಾ ಬಂದಾಗ ನಾವೆಲ್ಲರೂ ಒಂದು ಎಂಬ ಸಂದೇಶ ಸಾರುತ್ತ ಯಾವುದೇ ಜಾತಿ ಭೇದ ಭಾವಗಳನ್ನು ಮಾಡದೆ ಸರ್ವ ಜನಾಂಗದ ಒಳಿತಿಗಾಗಿ ಬ್ರಿಟಿಷರ ಬಹುಮನಿ ಸುಲ್ತಾನರು ಆದಿಲ್ ಶಾಹಿಗಳು ಹೀಗೆ ಅನೇಕರು ನಮ್ಮ ದೇಶ ಆಳಲು ಬಂದ ಎಲ್ಲರಿಗೂ ತಕ್ಕ ಪಾಠ ಕಲಿಸುವ ನಿಟ್ಟಿನಲ್ಲಿ ಎಲ್ಲಾ ಜನಾಂಗದವರು ಒಂದಾಗಿ ಹೋರಾಟ ಮಾಡಿದ್ದರ ಫಲವಾಗಿ ಇವತ್ತು ನಮ್ಮ ದೇಶ ಸಮಾಜಗಳು ಹೆಮ್ಮರವಾಗಿ ಬೆಳೆದು ಇಡೀ ಪ್ರಪಂಚದಲ್ಲಿಯೇ ಜಗತ್ತಿಗೆ ಮಾದರಿ ದೇಶವಾಗಿ ಭಾರತ ರಾರಾಜಿಸುತ್ತಿದೆ.
ಇದಕ್ಕೆಲ್ಲಾ ಕಾರಣವೇನೆಂದರೆ ಸಮಯ ಸಂದರ್ಭ ಬಂದಾಗ ಎಲ್ಲಾ ಜಾತಿ ಭೇದ ಭಾವ ಮರೆತು ಎಲ್ಲರೂ ಒಂದಾಗಿ ಸರ್ವ ಜನಾಂಗದ ಶಾಂತಿಯ ತೋಟ ಎಂಬಂತೆ ಭಾರತೀಯರ ವಿರುದ್ಧ ಯುದ್ಧ ಮಾಡಲು ಬಂದ ಎಲ್ಲರನ್ನು ಓಡಿಸಿದ್ದರ ಫಲವೇ ಇವತ್ತು ನಮ್ಮ ಭಾರತ ದೇಶದ ಜನ ಸುಭಿಕ್ಷವಾಗಿ ಬದುಕುತ್ತಿದ್ದಾರೆ ನಮ್ಮ ದೇಶ ಅಂತ ಬಂದಾಗ ಎಲ್ಲಾ ಜಾತಿ ಭೇದ ಭಾವ ಮರೆತು ಅವರವರ ಕುಲದೇವರುಗಳು ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದರ ಪರವಾಗಿ ಇವತ್ತು ಭಾರತ ದೇಶ ಜಗತ್ತನ್ನೇ ಎದುರಿಸಬಲ್ಲ ಬಲಿಷ್ಠ ರಾಷ್ಟ್ರವಾಗಿ ಬೆಳೆದಿದೆ ಅನೇಕ ಜಾತಿಗಳ ರಾಜ ಮಹಾರಾಜರು ರಾಣಿಯರು ಹೋರಾಡಿದ್ದರ ಫಲವೇ ನಾವು ಇವತ್ತು ಸುರಕ್ಷಿತವಾಗಿ ಇರಲು ಕಾರಣವಾಗಿದೆ.

ಈ ನಾಡಿನಲ್ಲಿ ಅನೇಕ ದೇವಾನು ದೇವತೆಗಳು ತಪಸ್ಸು ಕಾರ್ಯಸಿದ್ಧಿ ಕೈಗೊಂಡಿದ್ದರ ಫಲವಾಗಿ ಇಡೀ ಮಾನವ ಕುಲವೇ ಸಂತೃಪ್ತಿಯಿಂದ ಬದುಕುತ್ತಿದೆ ಎಲ್ಲಾ ಕಾರಣಿಕ ಮಹಾಪುರುಷರು ಯೋಗಿಗಳು ಜ್ಞಾನಿಗಳು ಸತ್ತ್ಪುರುಷರು ಮಹಾಮಾತೆಯರು ಸ್ವತಂತ್ರ ಹೋರಾಟಗಾರರು ಸಾಕಷ್ಟು ತಪಸ್ಸು ಹೋರಾಟಗಳನ್ನು ಮಾಡಿ ತಮ್ಮದೇ ಬೇಡಿಕೆಗಳನ್ನು ಈಡೇರಿಸಿಕೊಳ್ಳುವುದಕ್ಕಾಗಿ ಜೀವನ ತ್ಯಾಗ ಮಾಡಿ ಸಮಾಜವನ್ನು ಸನ್ಮಾರ್ಗದಡೆಗೆ ಒಯ್ಯುವ ಕೆಲಸ ಮಾಡುತ್ತಾ ಬಂದಿದ್ದಾರೆ ಪ್ರಾಚೀನ ಕಾಲದಲ್ಲಿ ಹೋರಾಟ ಮಾಡುವುದಾಗಲಿ ತಪಸ್ಸು ಮಾಡುವುದಾಗಲಿ ದೇವರನ್ನು ಒಲಿಸಿಕೊಂಡವರೆಲ್ಲಾ ದೈವೀ ಪುರುಷರು ಎಂದೂ ಜಾತಿ ಭೇದ ಬಾವ ಮಾಡಿಲ್ಲ ಆದರೆ ಇವತ್ತು ನಾವೆಲ್ಲರೂ ಒಂದೊಂದು ಜಾತಿ ಹೆಸರಿನಲ್ಲಿ ಒಂದೊಂದು ಸಮಾಜ ನಿರ್ಮಿಸಿಕೊಂಡು ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದೇವೆ.

ಹೀಗೆ ಎಲ್ಲಾ ಸಮಾಜದಲ್ಲೂ ಒಬ್ಬೊಬ್ಬ ಧರ್ಮ ಗುರುಗಳನ್ನು ನೇಮಿಸಿಕೊಂಡು ಇವತ್ತು ಸಮಾಜಗಳು ತಮ್ಮ ತಮ್ಮ ಜಾತಿಯ ಬೇಕು ಬೇಡಗಳನ್ನು ಈಡೇರಿಸಿಕೊಳ್ಳುವಲ್ಲಿ ಸಂಘಟನೆಯೊಂದಿಗೆ ತಮ್ಮದೇ ಆದ ಮಠವನ್ನು ಕಟ್ಟಿಕೊಂಡು ಅದಕ್ಕೆ ಪೀಠಾಧಿಪತಿಗಳನ್ನು ನೇಮಿಸಿ ಸರ್ಕಾರದಿಂದ ಬರತಕ್ಕಂತ ಸೌಲಭ್ಯಗಳನ್ನು ಹೋರಾಟದ ಮೂಲಕವಾಗಲಿ ಮನವಿಗಳ ಮೂಲಕವಾಗಲಿ ಸರ್ಕಾರಗಳನ್ನು ಮನವೊಲಿಸುವ ಮೂಲಕ ತಮ್ಮ ತಮ್ಮ ಸಮಾಜದ ಬೇಡಿಕೆಯನ್ನು ಈಡೇರಿಸಿಕೊಳ್ಳುತ್ತಿವೆ ಇದೇ ಮಾದರಿಯಲ್ಲಿ ಕರ್ನಾಟಕದ ಪ್ರಬಲ ರೆಡ್ಡಿ ಜನಾಂಗದ ರಾಜಕೀಯ ನಾಯಕರುಗಳು ಜನಾಂಗದ ಮುಖಂಡರು ಹಿರಿಯರು ಹಾಗೂ ರೆಡ್ಡಿ ಸಮಾಜದ ಹಿತೈಷಿಗಳು ಹರಿಹರ ತಾಲೂಕಿನ ಹೊಸಳ್ಳಿಯಲ್ಲಿ ರಡ್ಡಿ ಪೀಠ ಸ್ಥಾಪನೆ ಮಾಡಿ ಪರಮಪೂಜ್ಯ ಶ್ರೀ ವೇಮಾನಂದ ಸ್ವಾಮೀಜಿಯವರನ್ನು ರಡ್ಡಿ ಸಮಾಜದ ಗುರುಗಳನ್ನಾಗಿ ನೇಮಿಸಿ ರೆಡ್ಡಿ ಸಮಾಜದ ಬೇಡಿಕೆಗಳನ್ನು ಈಡೇರಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಾ ಬಂದಿರುತ್ತಾರೆ ರಡ್ಡಿ ಸಮಾಜ ಮುನ್ನಡೆಸುವುದಕ್ಕೆ ಮುಖ್ಯ ಕಾರಣವೇ ಮಹಾಮಾತೆ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನ ಹಾಗೂ ವೇಮನ ರೆಡ್ಡಿ ಸಮಾಜದ ಕುಲದೈವರೆಂದು ಸಮಾಜದವರು ಪೂಜಿಸುತ್ತಾರೆ ಹೇಮರಡ್ಡಿ ಮಲ್ಲಮ್ಮ ತಾಯಿಯು ತನಗಾಗಿ ಏನೂ ಮಾಡಿಕೊಳ್ಳದೆ ಸುಮಾರು 600 ವರ್ಷಗಳ ಹಿಂದೆ ಶ್ರೀಶೈಲ ಪ್ರಾಂತ್ಯದ ಕರ್ನೂಲ್ ಜಿಲ್ಲೆಯ ಆತ್ಮಕೂರ ತಾಲೂಕಿನ ರಾಮಾಪುರ ಗ್ರಾಮದಲ್ಲಿ ತಂದೆ ನಾಗರೆಡ್ಡಿ ತಾಯಿ ಗೌರಮ್ಮನ ಉದರದಲ್ಲಿ ಶ್ರೀಮಂತ ಕುಟುಂಬದಲ್ಲಿ ಜನಿಸುತ್ತಾಳೆ 16 ವರ್ಷ ತುಂಬಿದಾಗ ಅದೇ ಸಂಸ್ಥಾನದ ಒಡೆಯರಾದ ಸಿದ್ದಾಪುರದ ಶ್ರೀ ಹೇಮರೆಡ್ಡಿ ಅವರ ಮೂರನೇ ಮಗನಾದ ಭರಮರೆಡ್ಡಿಗೆ ಕೊಟ್ಟು ಮದುವೆ ಮಾಡಿದ ನಂತರ ಸಿದ್ದಾಪುರದ ಸೊಸೆಯಾಗಿ ಮನೆಯಲ್ಲಿ ಗಂಡ ಅತ್ತೆ-ಮಾವ ನಾದಿನಿಯರನ್ನು ತುಂಬಾ ಗೌರವದಿಂದ ಪೂಜ್ಯನೀಯ ಸ್ಥಾನ ನೀಡಿ ಗೌರವಿಸುತ್ತಾಳೆ ಇಷ್ಟೆಲ್ಲಾ ಗೌರವಿಸುವ ಸೊಸೆಗೆ ಅತ್ತೆ ಮಾವನ ನಾದನಿಯರ ಕಾಟದಿಂದ ಕೌಟುಂಬಿಕ ಜೀವನದಲ್ಲಿ ಹಲವಾರು ಏರುಪೇರು ಸಂಕಷ್ಟ ಅನುಭವಿಸಿದಳು.

ಡಿವಿಜಿ ಅವರ ನುಡಿಯಂತೆ ” ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆ ಹಾಗೂ ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೇ ಬೆಲ್ಲ ಸಕ್ಕರೆ ಹಾಗೂ ದೀನ ದುರ್ಬಲರಿಗೆ ಎಲ್ಲರೊಳಗೆ ಒಂದಾಗು ಮಂಕುತಿಮ್ಮ” ಎನ್ನುವಂತೆ ಹೇಮರೆಡ್ಡಿ ಮಲ್ಲಮ್ಮ ಕಷ್ಟಗಳ ಮಳೆಯ ಸುರಿದರು ಅದೆಲ್ಲವನ್ನೂ ಧೈರ್ಯದಿಂದ ಎದುರಿಸಿ ಸಾಮರಸ್ಯದ ಬಾಳನ್ನು ಬದುಕಿದಳು, ಗಂಡನ ಮನೆಯಲ್ಲಿ ಎಷ್ಟೇ ಕಿರುಕುಳ ತೊಂದರೆ ಇದ್ದರೂ ಅದನ್ನು ಇನ್ನೊಬ್ಬರಿಗೆ ಹೇಳದೆ ತಂದೆ ತಾಯಿಯ ತವರ ಮನೆ ಹೆಸರನ್ನು ನಾಡಿಗೆ ಬೆಳಗಿದಳು ಗಂಡನ ಮನೆಯ ಸಾಕಷ್ಟು ಕಿರಿಕಿರಿ ತೊಂದರೆಗಳಿದ್ದರೂ ಅದರಿಂದ ಕುಗ್ಗದೇ ಕರಗದೆ ಎಲ್ಲವನ್ನೂ ಎದುರಿಸಿ ಸಾಕ್ಷಾತ್ ಶ್ರೀಶೈಲ ಮಲ್ಲಯ್ಯನಿಗೆ ಪರಮ ಭಕ್ತೆ ಯಾದಳು
ಜೀವನದುದ್ದಕ್ಕೂ ಭೋಗಿಯಾಗಿ ಭೋಗಿ ಜೀವನ ನಡೆಸಿದ ವೇಮನನ್ನು ಯೋಗಿಯನ್ನಾಗಿ ಮಾಡಿ ಮಹಾಮಾತೆ ಮಲ್ಲಮ್ಮಲಾದಳು ಮಲ್ಲಮ್ಮ ಕಾಯಕದಿಂದಲೇ ಮುಕ್ತಿ ಎನ್ನುವ ಶರಣ ಸಿದ್ದಾಂತವನ್ನು ಪಾಲಿಸಿಕೊಂಡು ಬಂದವಳು ಕೃಷಿ ಕಾಯಕದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಸಾಂಸಾರಿಕ ಬದುಕು ಜಯಿಸಿದ ಮಹಾ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ತನ್ನ ಕೊನೆಯ ದಿನಗಳನ್ನು ಶ್ರೀಶೈಲದ ಮಲ್ಲಿಕಾರ್ಜುನ ಗುಡ್ಡದಲ್ಲಿ ಆಶ್ರಯ ನಿರ್ಮಿಸಿಕೊಂಡು ಪತಿ ಭರಮರೆಡ್ಡಿ ಹಾಗೂ ಮಲ್ಲಿಕಾರ್ಜುನ ಸ್ವಾಮಿಯನ್ನೆ ಸದಾಕಾಲ ನೆನೆಯುತ್ತ ತಪಸ್ಸು ಮಾಡುತ್ತಾ ಜೀವನ ಸಾಗಿಸಿದಳು. ಮಲ್ಲಮ್ಮನ ಭಕ್ತಿಗೆ ಮಾರುಹೊದ ಮಲ್ಲಯ್ಯ ಒಂದು ದಿನ ಪ್ರತ್ಯಕ್ಷನಾಗಿ ನಿನ್ನ ಸಾವು ಸಮೀಪಿಸುತ್ತಿದೆ ನಿನಗೆ ಏನು ವರ ಬೇಕು ಕೇಳು ಅದನ್ನು ಕರುಣಿಸುತ್ತೇನೆ ಎಂದಾಗ ನನಗೆ ಯಾವುದೇ ಆಸೆ ಆಕಾಂಕ್ಷೆಗಳಿಲ್ಲ ನನ್ನ ರೆಡ್ಡಿ ಸಮಸ್ತ ಕುಲಕ್ಕೆ ಎಂದಿಗೂ ಬಡತನ ಭಾರದಿರಲಿ ರೆಡ್ಡಿ ಯಾವಾಗಲೂ ಬಂಗಾರ ಕಡ್ಡಿಯಾಗಿರಲಿ ಎಂದು ಬೇಡಿಕೊಂಡಾಗ ಒಂದು ಕ್ಷಣ ಮಲ್ಲಯ್ಯನ ದಿಗ್ರಾಂತನಾದನು. ತನಗಾಗಿ ಏನೂ ಬೇಡಿಕೊಳ್ಳದ ಈ ತಾಯಿ ಇಡಿ ಸಮಾಜವನ್ನು ರಕ್ಷಣೆ ಇಡೀ ಕುಲದ ಸಮಾಜಿಕ ಕಳಕಳಿ ಮಾಡುವ ಇವಳೆಂಥ ಭಕ್ತಳು ಎಂದು ಮನಸ್ಸಿನಲ್ಲಿ ಅಂದುಕೊಂಡು ಮಲ್ಲಮ್ಮಳ ತಪಸ್ಸಿಗೆ ಮೆಚ್ಚಿ ಆಯ್ತು ನಿನ್ನ ಆಸೆ ಈಡೇರಲಿ ಈ ಭೂಮಿ ಮೇಲೆ ವಾಸಿಸುವ ಸಕಲ ರಡ್ಡಿ ಕುಲದವರಿಗೆ ಯಾವತ್ತೂ ಬಡತನ ಬಾರದಿರಲಿ ಎಂದು ಮಲ್ಲಯ್ಯನು ಆಶೀರ್ವಾದ ಕರುಣಿಸಿದನು ಅವತ್ತಿನಿಂದ ಇವತ್ತಿನವರೆಗೂ ರೆಡ್ಡಿ ಸಮಾಜವನ್ನು ಬಂಗಾರದ ಕಡ್ಡಿ ಎಂದು ಕರೆಯುತ್ತಾರೆ

ತನಗಾಗಿ ತಾನು ಏನು ಮಾಡಿಕೊಳ್ಳದ ಮಲ್ಲಮ್ಮ ತಾಯಿ, ತನ್ನ ಗಂಡನ ಮನೆಗಾಗಲಿ ತನ್ನ ತವರಮನಿಗಾಗಲಿ ಏನು ಕೇಳಲಿಲ್ಲ ಮಲ್ಲಯ್ಯನ ಒಲಿದಾಗ ತನಗಾಗಿ ಬೇಕಾದ್ದನ್ನು ಬೇಡಬಹುದಿತ್ತು ಕೇಳಬಹುದಿತ್ತು ಆದರೆ ಮಲ್ಲಮ್ಮ ತಾಯಿ ತ್ಯಾಗ ಮತ್ತು ಭೋಗಿಯಾಗಿರುವುದರಿಂದ ತನಗಾಗಲಿ ತನ್ನ ಮನೆಯವರಿಗಾಗಿ ಏನು ಆಸೆಪಡದ ಮಲ್ಲಮ್ಮ ತಾಯಿ ಇಡೀ ಸಮಸ್ತ ರಡ್ಡಿ ಕುಲವನ್ನೇ ಸುರಕ್ಷಿತ ಸುಭಿಕ್ಷೆ ಚೆನ್ನಾಗಿರುವಂತೆ ಬೇಡಿಕೊಂಡ ರೆಡ್ಡಿ ಸಮಾಜದ ಏಕೈಕ ಮಾತೆ ಹೇಮರೆಡ್ಡಿ ಮಲ್ಲಮ್ಮ ಮಹಾತಾಯಿ ಇಷ್ಟೆಲ್ಲಾ ರೆಡ್ಡಿ ಸಮಾಜಕ್ಕೆ ಮಾಡಿದಾಗ ಮಲ್ಲಮ್ಮ ತಾಯಿಯ ಭಕ್ತಿಗೆ ನಾವು ಯಾವಾಗಲೂ ತಲೆಬಾಗಲೇಬೇಕು ಮಲ್ಲಮ್ಮ ತಾಯಿ ನೆಲೆಸಿದ ಶ್ರೀಶೈಲ ಪ್ರಾಂತ್ಯದಲ್ಲಿ ಮಲ್ಲಯ್ಯನ ದೇವಸ್ಥಾನದ ಹಿಂದುಗಡೆ ವಿಶಾಲವಾದ ಮಲ್ಲಮ್ಮನ ದೇವಸ್ಥಾನ ನಿರ್ಮಿಸಿದ ರೆಡ್ಡಿ ಸಮಾಜದ ಎಲ್ಲ ಗುರು ಹಿರಿಯರು ಇವತ್ತು ಸಾಕ್ಷಾತ್ ಮಲ್ಲಮ್ಮನನ್ನು ಕಣ್ಮುಂದೆ ಗೋಚರಿಸುವಂತೆ ಶ್ರೀಶೈಲದಲ್ಲಿ ದೇವಸ್ಥಾನ ನಿರ್ಮಿಸಿ, ಮಲ್ಲಮ್ಮನ ಕೃಪೆಗೆ ಪಾತ್ರರಾಗಿರುತ್ತಾರೆ.
ಹೇಮರಡ್ಡಿ ಮಲ್ಲಮ್ಮ ಬರಿ ಮಹಾಮಾತೆಯಾಗದೆ ಇಡೀ ರೆಡ್ಡಿ ಸಮಾಜಕ್ಕೆ ಶಕ್ತಿಯಾಗಿ ಮಲ್ಲಯ್ಯ ನಲ್ಲಿ ಬೇಡಿಕೊಂಡ ಪ್ರಯುಕ್ತ ಸಮಸ್ತ ರೆಡ್ಡಿ ಕುಲಬಾಂಧವರೆಲ್ಲರೂ ಸಾಮಾಜಿಕವಾಗಿ ಆರ್ಥಿಕವಾಗಿ ಕೌಟುಂಬಿಕವಾಗಿ ಈ ಭೂಮಿ ಮೇಲೆ ಚೆನ್ನಾಗಿ ಸುಖ ಶಾಂತಿ ನೆಮ್ಮದಿಯಿಂದ ಬದುಕುತ್ತಿದ್ದಾರೆ ಹಾಗಾಗಿ ಮಲ್ಲಮ್ಮನ ಕರುಣಿಸಿದ ದಯದಿಂದಾಗಿ ಪ್ರತಿಯೊಂದು ರೆಡ್ಡಿ ಸಮಾಜ ವಾಸವಾಗಿರುವ ಊರುಗಳಲ್ಲಿ ಮಲ್ಲಮ್ಮನ ದೇವಸ್ಥಾನ ನಿರ್ಮಿಸಿ ಮಲ್ಲಮ್ಮ ಕೃಪೆಗೆ ಪಾತ್ರರಾಗುತ್ತಿದ್ದಾರೆ.

ಅದರಂತೆಯೇ ಇದಕ್ಕೆ ಸ್ಫೂರ್ತಿ ಎನ್ನುವಂತೆ ಶಿರೂರಿನ ರೆಡ್ಡಿ ಸಮಾಜ ಮಾದರಿಯಾಗಿದೆ 2019 ರಲ್ಲಿ ಗ್ರಾಮದ ರೆಡ್ಡಿ ಸಮಾಜದ ಹಿರಿಯರೆಲ್ಲರೂ ಸೇರಿ ಸಮಿತಿ ರಚಿಸಿ 2022 ರಲ್ಲಿ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನ ನಿರ್ಮಾಣ ಮಾಡಬೇಕೆಂಬ ಅಚಲ ನಿರ್ಧಾರದೊಂದಿಗೆ ಶಿರೂರಿನ ಅನೇಕ ಕೊಡಗೈ ದಾನಿಗಳಿಂದ ಪ್ರಾರಂಭವಾದ ದೇಣಿಗೆಯ ಹಣದಿಂದ ಅದ್ದೂರಿಯಾದ ಅಡಿಗಲ್ಲು ಸಮಾರಂಭ ಮಾಡಿ ಗ್ರಾಮದ ಅನೇಕ ಕೊಡಗೈದಾನಿಗಳಿಂದ ಹಾಗೂ ಪ್ರತಿ ಮನೆ ಮನೆಯಿಂದ ಕಾಣಿಕೆ ಪಡೆದು ಶಿರೂರಿನ ಗ್ರಾಮದ ಅನೇಕ ದಾನಿಗಳ ಸಹಾಯ ಮತ್ತು ಮುಜರಾಯಿ ಇಲಾಖೆ ಸಹಾಯಧನ ಪಡೆದು ಮಲ್ಲಮ್ಮನ ದೇವಸ್ಥಾನಕ್ಕೆ ಕಟ್ಟಡ ನಿರ್ಮಾಣ ಮಾಡಲಾಗಿದ್ದು ಸಮುದಾಯ ಭವನಕ್ಕೆ ಸಂಸದರು ಮತ್ತು ಶಾಸಕರ ಅನುದಾನದ ಸಹಾಯದಿಂದ ಅನುದಾನ ಹೊಂದಿಸಿ ಮಲ್ಲಮ್ಮನ ದೇವಸ್ಥಾನ ಮತ್ತು ಸಮುದಾಯ ಭವನ ನಿರ್ಮಾಣ ಮಾಡಬೇಕೆಂಬ ಕಮಿಟಿಯ ನಿರ್ಧಾರದ ಫಲವಾಗಿ ದಿವಂಗತ ಶ್ರೀಮತಿ ಲಕ್ಷ್ಮೀಬಾಯಿ ಶ್ರೀ ಸಕ್ರಪ್ಪ ಗುಲಗುಂಜಿ ಹಾಗೂ ಶ್ರೀಮತಿ ಮಲ್ಲಮ್ಮ ನೀಲಪ್ಪ ಗುಲಗಂಜಿ ಕೊಡ ಮಾಡಿದ ಐದು ಎಕರೆ ಜಾಗದಲ್ಲಿ ಅದ್ದೂರಿಯಾದ ದೇವಸ್ಥಾನ ನಿರ್ಮಾಣ ಮಾಡುವ ಚಲ ದೊಂದಿಗೆ ಮುನ್ನಡೆದಾಗ ದೇವಸ್ಥಾನಕ್ಕೆ ತೆರಳುವ ದಾರಿಯ ಸಮಸ್ಯೆಯೂ ಕೊರತೆ ಕಂಡು ಬಂದಾಗ ಇದೇ ಊರಿನವರಾದ ಶ್ರೀಮತಿ ಸಾವಿತ್ರಿ ಸಿದ್ದಪ್ಪ ಕೆಂಪಲಿಂಗಣ್ಣವರ ದಾರಿಗೆ ಭೂಮಿ ದಾನ ಮಾಡಿದ್ದಾರೆ ಪ್ರಯುಕ್ತ ಇವತ್ತು ಇಡೀ ರಾಜ್ಯವೇ ತೆಲೆ ಎತ್ತಿ ನೋಡುವಂತ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನ ನಿರ್ಮಾಣ ಮಾಡಿದ ಶ್ರೇಯಸ್ಸು ಶ್ರೀ ಹೇಮರಡ್ಡಿ ಮಲ್ಲಮ್ಮ ವಿಕಾಸ ಸಂಸ್ಥೆ ಶಿರೂರಿಗೆ ಸಲ್ಲುತ್ತದೆ ಎಂದರೆ ತಪ್ಪಾಗಲಾರದು ಇಷ್ಟೆಲ್ಲಾ ಅಚಲ ನಿರ್ಧಾರದೊಂದಿಗೆ ಅನೇಕರ ಸಹಾಯ ಪಡೆದು ಕಮಿಟಿಯ ಕಾರ್ಯ ಅಧ್ಯಕ್ಷರಾದ ಶ್ರೀ ನೀಲಪ್ಪ ಕೃಷ್ಣಪ್ಪ ಕೋಟೆಕಲ್ ಹಾಗೂ ಸಮಿತಿಯ ಅಧ್ಯಕ್ಷರಾದ ರವಿ ಗಿರಿಜಾ ಅವರ ತಂಡದ ಕಮಿಟಿಯ ಸದಸ್ಯರೆಲ್ಲರ ಶ್ರಮದ ಫಲವಾಗಿ ಇದೆ ದಿನಾಂಕ 03 ರಂದು ಹೇಮರೆಡ್ಡಿ ಮಲ್ಲಮ್ಮನ ಮೂರ್ತಿ ಹಾಗೂ ಸಿದ್ದಲಿಂಗೇಶ್ವರನ ಮೂರ್ತಿ ಮೆರವಣಿಗೆ ಕಾರ್ಯಕ್ರಮ ಮಾಡುವುದರ ಜೊತೆಗೆ ಹೇಮರಡ್ಡಿ ಮಲ್ಲಮ್ಮ ಸಮುದಾಯ ಭವನ ಇದೇ ಮೇ 03 ,04 ರಂದು ಉದ್ಘಾಟನೆ ಯಾಗಲಿದ್ದು ಗ್ರಾಮದ ಸುತ್ತಮುತ್ತಲು ತಾಲೂಕು ಜಿಲ್ಲೆಯ ಎಲ್ಲಾ ರಡ್ಡಿ ಸಮಾಜದ ಮುಖಂಡರು ಆಗಮಿಸಬೇಕೆಂದು ಸಮಿತಿಯ ಕಾರ್ಯಾಧ್ಯಕ್ಷರು ಅಧ್ಯಕ್ಷರು ಹಾಗೂ ಕಮಿಟಿಯ ಸರ್ವ ಸದಸ್ಯರು ಹಾಗೂ ಗ್ರಾಮದ ಎಲ್ಲಾ ಗುರುಹಿರಿಯರು ರವರು ತಿಳಿಸಿರುತ್ತಾರೆ ಬಾಗಲಕೋಟ ಜಿಲ್ಲೆ ಶಿರೂರು ಗ್ರಾಮದಲ್ಲಿ ಸುಂದರ ಮಹಾಶಿವಶರಣೆ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನ ಹಾಗೂ ಸಿದ್ದೇಶ್ವರ ಮೂರ್ತಿ ಮತ್ತು ಸಮುದಾಯ ಭವನ ನಿರ್ಮಿಸಿ ಉದ್ಘಾಟನೆಗೆ ಸಜ್ಜುಗೊಳಿಸಿದ್ದು ನಾಡಿನ ಹರ-ಗುರು ಚರ ಮೂರ್ತಿಗಳ ಸಮ್ಮುಖದಲ್ಲಿ ದೇವಸ್ಥಾನ ಲೋಕಾರ್ಪಣೆಯಾಗುತ್ತಿದ್ದು ಸಮಸ್ತ ರೆಡ್ಡಿ ಸಮಾಜದ ಎಲ್ಲಾ ಕುಲಬಾಂಧವರು ಈ ದೇವಸ್ಥಾನದ ಉದ್ಘಾಟನೆಗೆ ಆಗಮಿಸಿ ಶಿರೂರು ಗ್ರಾಮದ ಹಿರಿಯರು ಯುವಕ ಮಿತ್ರರ ರೆಡ್ಡಿ ಸಮಾಜದ ಮೇಲಿನ ಕಳಕಳಿ ಮತ್ತು ಕಾಳಜಿಯಿಂದಾಗಿ ಅನೇಕ ಹಿರಿಯರು ರಾಜಕೀಯ ನಾಯಕರುಗಳಲ್ಲಿ ಧನ ಸಂಗ್ರಹಣ ಮಾಡಿ ಅದ್ದೂರಿಯಾಗಿ ದೇವಸ್ಥಾನ ನಿರ್ಮಾಣ ಮಾಡಿದ್ದು ಸಮಸ್ತ ರಡ್ಡಿ ಕುಲದ ಬಾಂಧವರೆಲ್ಲರೂ ಈ ದೇವಸ್ಥಾನದ ಉದ್ಘಾಟನೆಗೆ ಆಗಮಿಸಬೇಕೆಂದು ಹಾಗೂ ಇದೇ ದಿನಾಲೂ 03-05-2025 ರಂದು ಶನಿವಾರ ದಿವಸ ನೂರಾರು ಕುಂಭ ಮೆರವಣಿಗೆಯೊಂದಿಗೆ ಗ್ರಾಮದ ಸಿದ್ದೇಶ್ವರ ಪ್ರೌಢಶಾಲೆಯಿಂದ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದವರೆಗೆ ಅದ್ದೂರಿ ಮೆರವಣಿಗೆ ಹಾಗೂ ದಿನಾಂಕ 04-05-2025 ರಂದು, ರವಿವಾರ ದೇವಸ್ಥಾನದ ಲೋಕಾರ್ಪಣೆ ಜರುಗಲಿದೆ ಕಾರ್ಯಕ್ರಮಕ್ಕೆ ಎಲ್ಲ ಸಮಾಜದ ಗುರುಹಿರಿಯರು ಯುವಕ ಮಿತ್ರರು ತಾಯಂದಿರು ಸಹೋದರಿಯರು ಆಗಮಿಸಬೇಕೆಂದು ವಿನಂತಿಸಿಕೊಂಡಿದ್ದಾರೆ.

••• ಜಗದೀಶ .ಎಸ್. ಗಿರಡ್ಡಿ, ಲೇಖಕರು, ಗೊರಬಾಳ
9902470856

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ