
ಬಾಗಲಕೋಟೆ: ತಾಲೂಕಿನ ಶಿರೂರ ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ರವಿವಾರ ಪ್ರತಿಷ್ಠಾಪನೆಗೊಳ್ಳಲಿರುವ ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮ ಹಾಗೂ ಲಿಂ. ಸಿದ್ಧಲಿಂಗ ಮಹಾಸ್ವಾಮಿ ಗಳವರ ಮೂರ್ತಿಗಳ ಮೆರವಣಿಗೆ ಶನಿವಾರ ವೈಭವದಿಂದ ಜರುಗಿತು.

ಮುಂಜಾನೆ ೮ ಗಂಟೆಗೆ ಸ್ಥಳೀಯ ಸಿದ್ದೇಶ್ವರ ಪ್ರೌಢಶಾಲೆಯ ಆವರಣದಲ್ಲಿ ಸ್ಥಳೀಯ ಶಿವ ಯೋಗಾಶ್ರಮದ ಸಿದ್ಧಲಿಂಗ ಮಹಾಸ್ವಾಮಿಗಳು ಹಾಗೂ ಗದ್ದನಕೇರಿಯ ಮಳೆರಾಜೇಂದ್ರ ಸ್ವಾಮೀಜಿ ಸಾನಿಧ್ಯದಲ್ಲಿ ಮೂರ್ತಿಗಳ ಮೆರವಣಿಗೆಗೆ ಸಂಸದ ಪಿ.ಸಿ.ಗದ್ದಿಗೌಡರ ಚಾಲನೆ ನೀಡಿದರು.

೩೦೦ ಕ್ಕೂ ಹೆಚ್ಚು ಮಹಿಳೆಯರು ಪೂರ್ಣಕುಂಭ, ಕೊಣ್ಣೂರಿನ ಡೊಳ್ಳುಕುಣಿತ, ಕಡಪಟ್ಟಿಯ ಜಾಂಜ್ ಪತಕ ಸೇರಿ ಅನೇಕ ಕಲಾ ತಂಡಗಳ ವಾದ್ಯ ವೈಭವಗಳೊಂದಿಗೆ ನೂತನ ಮೂರ್ತಿಗಳು ಹಾಗೂ ದೇವಸ್ಥಾನದ ಕಳಸದ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆದು ಬಾಗಲಕೋಟೆ ರಸ್ತೆಯಲ್ಲಿರುವ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನಕ್ಕೆ ತಲುಪಿತು. ಮಧ್ಯಾಹ್ನ ಸೂಳಿಭಾವಿಯ ವೆಂಕಮ್ಮ ನರಸಣ್ಣವರ ಅವರಿಂದ ಅನ್ನ ಪ್ರಸಾದ ಸೇವೆ ನಡೆಯಿತು.
ಹೇಮರಡ್ಡಿ ಮಲ್ಲಮ್ಮ ವಿಕಾಸ ಸಂಸ್ಥೆ ಅಧ್ಯಕ್ಷ ರವಿ ಗಿರಿಜಾ, ಕಾರ್ಯಾಧ್ಯಕ್ಷ ನೀಲಪ್ಪ ಕೋಟಿಕಲ್, ಎಸ್.ಬಿ.ಮಾಚಾ, ರಂಗಪ್ಪ ಮಳ್ಳಿ, ಡಾ. ವಾಯ್. ಕೆ.ಕೋಟಿಕಲ್, ಡಾ. ನಿಂಗಪ್ಪ ನಡುವಿನಮನಿ, ನಿವೃತ್ತ ಡಿ. ವೈ. ಎಸ್. ಪಿ ಬಸವರಾಜ ಬಾವಲತ್ತಿ, ಸಿದ್ದಪ್ಪ ಕೋಟಿಕಲ್, ಮುತ್ತು ಹಳದೂರ, ಶೇಖರಪ್ಪ ಮಾಚಾ, ನೀಲಪ್ಪ ಬಾರಡ್ಡಿ, ಎಸ್.ಎಚ್. ಗುಲಗಂಜಿ, ಎಸ್.ಎಫ್.ಬಾರಡ್ಡಿ, ಬಸವರಾಜ ನಡುವಿ ನಮನಿ, ಎಚ್.ಬಿ.ನಾಯ್ಕಲ್, ಸೇರಿದಂತೆ ಶಿರೂರಿನ ಹಿರಿಯರು, ಯುವಕರು, ಮಹಿಳೆಯರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
- ಕರುನಾಡ ಕಂದ
