ಹಣದ ದಾಹಕ್ಕೆ ಬಲಿಯಾಗಿ
ನೆಮ್ಮದಿ ಬದುಕು ಮಂಕಾಗಿ
ಬಾಳ ಭರವಸೆ ಕೊಚ್ಚಿ ಹೋಗಿ
ದಿನವು ಸಾಗಿದೆ ಅತಂತ್ರವಾಗಿ
ದೂರ ದೃಷ್ಟಿಯ ಯೋಚಿಸದೆ
ಉಸಿರಿತ್ತ ಗಿಡ ಮರವ ಕಡಿದೆ
ಢಾಂಬಿಕ ಬದುಕಿಗೆ ಅಣಿಯಾದೆ
ಸ್ವಾರ್ಥದಿ ಅಹಂಕಾರದಿ ಮೆರೆದೆ
ಗಿಡ ಮರಗಳೆಲ್ಲ ಧರೆಗುರುಳಿ
ಸುಂದರ ನಿಸರ್ಗವೆಲ್ಲಾ ಕೆರಳಿ
ಜೀವ ಸಂಕುಲ ನೊಂದು ಬಳಲಿ
ಬರವುದೇ ದೈವ ಸೃಷ್ಟಿ ಮರಳಿ
ಸುರಿಯದಿರು ವರುಣ ಧಾರಾಕಾರ
ನಿಲ್ಲಿಸು ನಿನ್ನಯ ರೌದ್ರ ಅವತಾರ
ತೋರದಿರು ನಮ್ಮ ಮೇಲೆ ಪ್ರತಿಕಾರ
ತೋರುವೆಯಾ ಕೊಂಚ ಮಮಕಾರ

- ಬ್ಯಾಡನೂರು ವೀರಭದ್ರಪ್ಪ ಶಿವಶರಣ, ಎಸ್.
ಪಾವಗಡ ತಾಲ್ಲೂಕು, ತುಮಕೂರು ಜಿಲ್ಲೆ.
ದೂರವಾಣಿ ಸಂಖ್ಯೆ: 9740199896.
