ಗದಗ/ ನರಗುಂದ: ಇತ್ತೀಚಿಗೆ ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕರ ದಾಳಿಯಿಂದ ನಮ್ಮ ಕರ್ನಾಟಕ ರಾಜ್ಯದ ಮೂವರು ಸೇರಿದಂತೆ 26 ಅಮಾಯಕ ಪ್ರವಾಸಿಗರ ಹತ್ಯೆಗೈದಿರುವ ಘಟನೆ ನಿಜಕ್ಕೂ ಖಂಡನೀಯ. ಇಂತಹ ಅಮಾನವೀಯ ಕೃತ್ಯವೆಸಗಿರುವ ಭಯೋತ್ಪಾದಕರ ಮೇಲೆ ಕಠಿಣ ಕ್ರಮಕ್ಕೆ ಆಗ್ರಹಿಸಿ ಶುಕ್ರವಾರ ನರಗುಂದ ಅಂಜುಮನ್ ಸಂಸ್ಥೆ ವತಿಯಿಂದ ತಹಶೀಲ್ದಾರ್ ಅವರ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಲಾಯಿತು.
ಕಾಶ್ಮೀರದ ಪಹಲ್ಗಾಮ್ ನಲ್ಲಿರುವ ಆರೋಗ್ಯ ರೆಸಾರ್ಟ್ ನಲ್ಲಿ ನಮ್ಮ ಭಾರತ ದೇಶದ ನಾಗರಿಕರು ಮತ್ತು ನಮ್ಮ ನಾಡಿನ ಜನರು ಪ್ರವಾಸಕ್ಕೆ ಹೋದ ಸಂದರ್ಭದಲ್ಲಿ ಭಯೋತ್ಪಾದಕರು ಏಕಾಏಕಿಯಾಗಿ ಪ್ರವಾಸಿಗರ ಮೇಲೆ ಗುಂಡಿನ ದಾಳಿಯನ್ನು ನಡೆಸಿ ಮೂವರು ಕನ್ನಡಿಗರು ಸೇರಿದಂತೆ 26 ಕ್ಕೂ ಹೆಚ್ಚು ಅಮಾಯಕರ ಹತ್ಯೆ ಮಾಡಿರುವುದನ್ನು ನರಗುಂದ ಅಂಜುಮನ್ ಎ ಇಸ್ಲಾಂ ಸಂಸ್ಥೆಯಿಂದ ಖಂಡಿಸುತ್ತೇವೆ ಮಾನವ ವಿರೋಧಿ ದಾಳಿಯಲ್ಲಿ ಮರಣ ಹೊಂದಿರುವ ಕುಟುಂಬಗಳಿಗೆ ಸಾಂತ್ವಾನ ಹೇಳುತ್ತೇವೆ, ಅಮಾಯಕರ ಮೇಲೆ ದಾಳಿ ನಡೆಸಿರುವ ಯಾರೇ ಆಗಿರಲಿ ಯಾವುದೇ ಧರ್ಮದವರು ಆಗಿರಲಿ, ಇಂತಹ ನೀಚಕರಿಗೆ ಕಠಿಣ ಶಿಕ್ಷೆ ಆಗಬೇಕು, ಕೇಂದ್ರ ಸರ್ಕಾರದಿಂದ ನಮ್ಮ ಶಾಂತಿಪ್ರಿಯ ಭಾರತ ದೇಶದಲ್ಲಿ ಇಂತಹ ಅಮಾಯಕರ ಮೇಲೆ ದಾಳಿ ನಡೆಸಿ ಅಶಾಂತಿಯನ್ನು ಹುಟ್ಟಿಸುವ ಕೆಲಸ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ಮಾನವ ವಿರೋಧಿ ಅಮಾಯಕರನ್ನು ಕೊಲ್ಲುವ ಭಯೋತ್ಪಾದಕರಿಗೆ ಯಾವುದೇ ಜಾತಿ, ಧರ್ಮಗಳು ಇರುವುದಿಲ್ಲ, ಇವರು ಕೇವಲ ಮಾನವ ವಿರೋಧಿ, ಸಮಾಜ ವಿರೋಧಿ, ಶಾಂತಿ ಸೌಹಾರ್ದತೆಯ ವಿರೋಧಿ, ಇಂತಹ ಘಟನೆಯನ್ನು ಭಾರತ ದೇಶದ ಪ್ರತಿಯೊಬ್ಬ ನಾಗರಿಕರು ವಿರೋಧಿಸಬೇಕು, ಈ ಘಟನೆಯನ್ನು ಇಟ್ಟುಕೊಂಡು ಇದರಲ್ಲಿ ಜಾತಿ, ಧರ್ಮಗಳನ್ನು, ನೋಡದೆ ನಮ್ಮ ಭಾರತ ದೇಶದ ಅಮಾಯಕ ನಾಗರಿಕರನ್ನು ಭಯೋತ್ಪಾದಕರು ಹತ್ಯೆ ಮಾಡಿರುವುದನ್ನು ನಾವು ಎಲ್ಲಾ ಭಾರತೀಯರು ಒಗ್ಗಟ್ಟಿನಿಂದ ಖಂಡಿಸಬೇಕಾಗುತ್ತದೆ, ಯಾವ ಧರ್ಮ, ಜಾತಿಗಳು ಅಮಾಯಕರನ್ನು ಹತ್ಯೆ ಮಾಡಿರುವುದು ಸಹಿಸಲ್ಲ, ಇದು ನಮ್ಮ ಭಾರತ ದೇಶದ ಐಕ್ಯತೆಗೆ ಧಕ್ಕೆ ತರುವ ಉದ್ದೇಶದಿಂದ ಇಂತಹ ಘಟನೆಯನ್ನು ನಡೆಸಿರುವುದು ನಾವು ಗಮನಿಸಿ ಘಟನೆ ನಡೆದ ಸಂದರ್ಭದಲ್ಲಿ ಕಾಶ್ಮೀರದ ಕೆಲ ಮುಸ್ಲಿಂ ಯುವಕ- ಯುವತಿಯರು ಹಲವು ಗಾಯಾಳುಗಳನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಬಂದಿರುವ ಕುರಿತು ಪ್ರತ್ಯಕ್ಷದರ್ಶಿಗಳು ಹೇಳುತ್ತಿದ್ದಾರೆ, ಇದನ್ನು ಗಮನಿಸಿ ಇದು ಭಾರತ ದೇಶದಲ್ಲಿಯ ಕೋಟ್ಯಾಂತರ ನಿವಾಸಿಗಳ ಮೇಲೆ ಮನಸ್ಸಿನ ಮೇಲೆ ಮಾಡಿರುವ ದಾಳಿಯಾಗಿದೆ, ಒಬ್ಬ ಕಾಶ್ಮೀರ ನಾಗರಿಕ ಅಮಾಯಕರ ಮೇಲೆ ಗುಂಡಿನ ದಾಳಿ ನಡೆಸುತ್ತಿರುವುದನ್ನು ಪ್ರತಿರೋಧ ವ್ಯಕ್ತಪಡಿಸಿ ಅಮಾಯಕ ಪ್ರವಾಸಿಗರ ಮೇಲೆ ದಾಳಿ ನಡೆಸಿದಂತೆ ಕೇಳಿಕೊಂಡರು ಪ್ರತಿರೋಧ ವ್ಯಕ್ತಪಡಿಸಿದ ಕಾಶ್ಮೀರದ ಯುವಕನ ಮೇಲೆ ಸಹ ನೀಚ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿರುವುದನ್ನು ನಾವು ಖಂಡಿಸುತ್ತೇವೆ, ಕೂಡಲೇ ಇಂತಹ ನೀಚ ಕೃತ್ಯವೆಸಗಿರುವ ಭಯೋತ್ಪಾದಕರನ್ನು ಹುಡುಕಿ ಕಠಿಣ ಶಿಕ್ಷೆ ನೀಡಬೇಕು, ಇಂತಹ ಘಟನೆಗಳು ಮರುಕಳಿಸದಂತೆ ಕೇಂದ್ರ ಸರ್ಕಾರ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಅಂಜುಮನ್ ಎ ಇಸ್ಲಾಂ ಸಂಸ್ಥೆ ಅಧ್ಯಕ್ಷರು ಜನಾಬ್ ಐ. ಪಿ. ಚಂದೂನವರ, ಕಾರ್ಯದರ್ಶಿ ಜನಾಬ್ ಅಬ್ದುಲಸಾಬ ಮುಲ್ಲಾ, ಸದಸ್ಯರು ಜನಾಬ್ ಅಮ್ಜದ್ ಅಹ್ಮದ್ ಖಾಜಿ, ಹಾಗೂ ಧರ್ಮ ಗುರುಗಳು ಜನಾಬ್ ಜಹೀರ್ ಅಹ್ಮದ್ ಖಾಜಿ, ಮತ್ತು ಇಮಾಮಸಾಬ ನದಾಫ,ಎಮ್.ಎಮ್.ಖಾಜೀ, ಅಲ್ಲಾಬಕ್ಷ ಸಂಶಿ, ಹಜರತ್ ಅಲಿ ಮುಲ್ಲಾನವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
- ಕರುನಾಡ ಕಂದ
