ಕಲ್ಬುರ್ಗಿ : ಕಳೆದ ಮೂರು ನಾಲ್ಕು ದಿನಗಳ ಹಿಂದೆ ಜಮ್ಮು-ಕಾಶ್ಮೀರದ ಶ್ರೀನಗರದಿಂದ 90 ಕಿಲೋಮೀಟರ್ ದೂರದಲ್ಲಿರುವ ಐತಿಹಾಸಿಕ ಪ್ರವಾಸಿ ತಾಣ ಅತ್ಯಂತ ಸುಂದರ ಪರ್ವತ ಶ್ರೇಣಿಯ ಜಗತ್ ವಿಖ್ಯಾತ ಮಿನಿ ಸ್ವಿಟ್ಜರ್ಲೆಂಡ್ ಎಂದು ಖ್ಯಾತಿಯಾಗಿರುವ ಫೆಹೆಲ್ಗಾಂವ ಪ್ರವಾಸಿಸ್ಥಳಧಲ್ಲಿ ಅನೇಕ ರಾಜ್ಯದ ಪ್ರವಾಸಿಗಳು ತೆರಳಿದ್ದರು ಅದರಲ್ಲಿ ಕರ್ನಾಟಕದ ಸುಮಾರು ಜನ ಭಾಗವಹಿಸಿದ್ದರು ಇದರಲ್ಲಿ ಒಟ್ಟು 28 ಜನ ಭಯೋತ್ಪಾದಕರ ದಾಳಿಗೆ ಹತರಾಗಿದ್ದಾರೆ ಕರ್ನಾಟಕದ ಮೂರು ಜನ ಭಯೋತ್ಪಾದಕರ ಗುಂಡಿನ ದಾಳಿಗೆ ಪ್ರಾಣ ಕಳೆದುಕೊಂಡಿದ್ದಾರೆ ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆಯ ರಾಜ್ಯ ಉಪಾಧ್ಯಕ್ಷರಾದ ಲಕ್ಷ್ಮಿಕಾಂತ್ ಪಾಟೀಲ್ ಮದ್ದರಕಿ ಅವರು ಆಕ್ರೋಶವನ್ನು ವ್ಯಕ್ತಪಡಿಸಿ ಭಯೋತ್ಪಾದಕರ ಗುಂಡಿನ ದಾಳಿಗೆ ಬಲಿಯಾದ ಅಮಾಯಕರ ಆತ್ಮಕ್ಕೆ ಭಗವಂತನು ಚರಶಾಂತಿ ನೀಡಲೆಂದು ಈ ಸಂದರ್ಭದಲ್ಲಿ ತಿಳಿಸಿದ್ದಾರೆ. ಈಗಾಗಲೇ ಜಮ್ಮು-ಕಾಶ್ಮೀರದ ಗಡಿ ರೇಖೆಯಲ್ಲಿ ಯುದ್ಧದ ವಾತಾವರಣ ಉಂಟಾಗಿದ್ದು ಪಾಕಿಸ್ತಾನಕ್ಕೆ ತಕ್ಕ ಪ್ರತಿಕ್ರಿಯೆಯನ್ನು ಭಾರತೀಯ ಸೇನೆ ನೀಡಬೇಕು ದೇಶದ ಪ್ರಧಾನ ಮಂತ್ರಿಯೊಂದಿಗೆ ತಾವು ಸದಾ ಬೆಂಬಲಿಸುವವರಾಗಿ ಹೇಳಿದರು. ಅದೇ ರೀತಿಯಾಗಿ ನೇಗಿಲು ಹಿಡಿದು ದೇಶದ ರೈತರಿಗೆ ಅನ್ನ ನೀಡುವುದಕ್ಕೂ ಸಿದ್ಧವಿದೆ ಸಮಯ ಬಂದರೆ ದೇಶ ರಕ್ಷಣೆಗಾಗಿ ದೇಶದ್ರೋಹಿಗಳ ವಿರುದ್ಧ ಭಯೋತ್ಪಾದಕರ ವಿರುದ್ಧ ಬಂದೂಕು ಹಿಡಿದು ಹೋರಾಟ ಮಾಡಲು ರೈತ ಸೇನೆ ದೇಶದ ರಕ್ಷಣೆಯ ಸಲುವಾಗಿ ಪ್ರಾಣ ಕೊಡಲು ಸಿದ್ದರಿರುವುದಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆಯ ರಾಜ್ಯ ಉಪಾಧ್ಯಕ್ಷರಾದ ಲಕ್ಷ್ಮಿಕಾಂತ್ ಪಾಟೀಲ್ ಮದ್ದರಕಿ ಅವರು ಈ ಸಂದರ್ಭದಲ್ಲಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು
- ಕರುನಾಡ ಕಂದ
