ಬಳ್ಳಾರಿ / ಕಂಪ್ಲಿ : ರಾಮಸಾಗರದ ಸರ್ ಸಿ. ವಿ. ರಾಮನ್ ಪ್ರೌಢಶಾಲೆಯ ಎಸ್. ಎಸ್. ಎಲ್. ಸಿ
ಶೇಕಡಾ 47.72 ರಷ್ಟು ಫಲಿತಾಂಶ ಪಡೆದಿದೆ. 31 ವಿದ್ಯಾರ್ಥಿಗಳ ಪೈಕಿ 14 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಇದರಲ್ಲಿ ಎರಡು ಉನ್ನತ ಶ್ರೇಣಿ, 3 ಪ್ರಥಮ, 5 ದ್ವಿತೀಯ ಹಾಗೂ 4 ವಿದ್ಯಾರ್ಥಿಗಳು ತೃತೀಯ ಸ್ಥಾನಗಳನ್ನು ಪಡೆದಿದ್ದಾರೆ ಎಂದು ಮುಖ್ಯಗುರು H. C. ರಾಮಕೃಷ್ಣ ತಿಳಿಸಿದರು.
ಗ್ರಾಮೀಣ ಭಾಗದಲ್ಲಿ ಅತ್ಯುತ್ತಮ ಹಾಗೂ ಮೌಲ್ಯಯುತ ಶಿಕ್ಷಣವನ್ನು ಗ್ರಾಮೀಣ ವಿದ್ಯಾರ್ಥಿಗಳಿಗೆ ನೀಡುವ ಮೂಲಕ ಯಶಸ್ಸು ಸಿಕ್ಕಿರುವುದು ಬಹಳ ಸಂತೋಷ ನೀಡಿದೆ. ಉತ್ತಮ ಫಲಿತಾಂಶ ಗಳಿಸುವಲ್ಲಿ ಹಗಲಿರುಳು ಶ್ರಮಿಸಿದ ವಿದ್ಯಾರ್ಥಿಗಳಿಗೆ, ಪ್ರಾಂಶುಪಾಲರಿಗೂ, ಎಲ್ಲಾ ಭೋದಕ ಮತ್ತು ಸಿಬ್ಬಂದಿ ವೃಂದದವರಿಗೆ ಈ ಮೂಲಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಈ ವಿದ್ಯಾರ್ಥಿಗಳ ಸಾಧನೆಗೆ ಆಡಳಿತ ಮಂಡಳಿಯ ಅಧ್ಯಕ್ಷರು ಸರ್ವ ಸದಸ್ಯರು ಹಾಗೂ ಶಿಕ್ಷಕರು ಅಭಿನಂದನೆಗಳನ್ನು ತಿಳಿಸಿದ್ದಾರೆ.
ವರದಿ : ಜಿಲಾನ್ ಸಾಬ್ ಬಡಿಗೇರ.
