ಬೆಂಗಳೂರು : ಶೇ. 100 ಫಲಿತಾಂಶ ಪಡೆದ ಶಾಲೆಗಳ ಸಂಖ್ಯೆ ಈ ಬಾರಿ ಗಣನೀಯವಾಗಿ ಇಳಿಕೆಯಾಗಿದೆ.
ಶೂನ್ಯ ಫಲಿತಾಂಶ ಪಡೆದ ಶಾಲೆಗಳ ಸಂಖ್ಯೆ ಏರಿಕೆಯಾಗಿದೆ.
ಕಳೆದ ಸಾಲಿನಲ್ಲಿ ರಾಜ್ಯದ 2288 ಶಾಲೆಗಳು ಶೇಕಡಾ 100 ರಷ್ಟು ಫಲಿತಾಂಶ ಪಡೆದಿದ್ದವು. ಆದರೆ ಈ ಬಾರಿ ಇದು 921 ಕ್ಕೆ ಇಳಿದಿದೆ.
ಈ ಪೈಕಿ ಸರ್ಕಾರಿ ಶಾಲೆಗಳ ಸಂಖ್ಯೆ 329 ಅನುದಾನಿತ 53 ಅನುದಾನ ರಹಿತ ಖಾಸಗಿ ಶಾಲೆಗಳ ಸಂಖ್ಯೆ 539 ಇದೆ. ಅದೇ ರೀತಿ 6 ಸರ್ಕಾರಿ 30 ಅನುದಾನಿತ ಮತ್ತು 108 ಅನುದಾನ ರಹಿತ ಸೇರಿ 144 ಶಾಲೆಗಳಲ್ಲಿ ಪರೀಕ್ಷೆ ಬರೆದ ಒಬ್ಬ ವಿದ್ಯಾರ್ಥಿಯೂ ಪಾಸ್ ಆಗದೆ ಶೂನ್ಯ ಫಲಿತಾಂಶ ದಾಖಲಾಗಿದೆ. ಕಳೆದ ಬಾರಿ ಈ ಸಾಲಿನ ಈ ಶಾಲೆಗಳ ಸಂಖ್ಯೆ 78 ಮಾತ್ರ ಇತ್ತು.
ವರದಿ : ಜಿಲಾನಸಾಬ್ ಬಡಿಗೇರ್
