ರಾಷ್ಟ್ರೀಯ ಅಹಿಂದ ಒಕ್ಕೂಟ ಬೆಂಗಳೂರು
ಈ ಸಂಘಟನೆಯ ವತಿಯಿಂದ ಶ್ರೀ ಜೆಟ್ಟೆಪ್ಪ ಎಸ್. ಪೂಜಾರಿ ಇವರನ್ನು ಕಲ್ಬುರ್ಗಿ ಜಿಲ್ಲೆಯ ಮಾಧ್ಯಮ ಸಲಹೆಗಾರರನ್ನಾಗಿ ನೇಮಕ ಮಾಡಲಾಗಿದೆ ಹಾಗೂ
ರಾಷ್ಟ್ರೀಯ ಅಹಿಂದ ಒಕ್ಕೂಟದ ರಾಜ್ಯ ಕಾರ್ಯಕಾರಣಿ ಸಮಿತಿಯು ಒಮ್ಮತದಿಂದ ತೀರ್ಮಾನಿಸಿ ಗುಲ್ಬರ್ಗ ಜಿಲ್ಲಾ ಮಾದ್ಯಮ ಸಲಹೆಗಾರರನ್ನಾಗಿ ನೇಮಕ ಮಾಡಲಾಗಿದೆ ಎರಡನೇ ಹಂತದ ಅಹಿಂದ ನಾಯಕರನ್ನು ಗುರುತಿಸುವುದು, ಮತ್ತು ಅವರನ್ನು ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ, ಹಾಗೂ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಮತ್ತು ವೈಯಕ್ತಿಕವಾಗಿ ಬೆಳೆಯಲು ವೇದಿಕೆ ಕಲ್ಪಿಸುವುದರ ಮೂಲಕ ಅವರನ್ನು ಪ್ರೋತ್ಸಾಹಿಸುವುದು ಈ ಒಕ್ಕೂಟದ ಉದ್ದೇಶವಾಗಿದೆ.
ಶ್ರೀ ಮುತ್ತಣ್ಣ ಶಿವಳ್ಳಿ ರಾಜ್ಯಾಧ್ಯಕ್ಷರು
ರಾಷ್ಟ್ರೀಯ ಅಹಿಂದ ಒಕ್ಕೂಟ ಬೆಂಗಳೂರು ಹಾಗೂ
ಪ್ರೊ. ಬೀರಲಿಂಗೇಶ್ವರ ಪೂಜಾರಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ರಾಷ್ಟ್ರೀಯ ಆಹಿಂದ ಒಕ್ಕೂಟ ಬೆಂಗಳೂರು ಶ್ರೀ ಶಿವಶಂಕರ ಗುಂಡಗುರ್ತಿ ಜಿಲ್ಲಾ ಅಧ್ಯಕ್ಷರು ಗುಲ್ಬರ್ಗ ಜಿಲ್ಲೆಯ ರಾಷ್ಟ್ರೀಯ ಅಹಿಂದ ಒಕ್ಕೂಟ ಹಾಗೂ ರಾಜ್ಯ ಕಾರ್ಯಕಾರಣಿ ಸಮಿತಿ ವತಿಯಿಂದ ಜೆಟ್ಟೆಪ್ಪ ಎಸ್. ಪೂಜಾರಿ ಅವರಿಗೆ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು ಎಂದು ಪತ್ರಿಕಾ ಪ್ರಕಟಣೆಯಲ್ಲಿ ರಾಷ್ಟ್ರೀಯ ಅಹಿಂದ ಸಂಘಟನೆಯ ತಾಲೂಕ ಅಧ್ಯಕ್ಷರಾದ ಮಹಾಂತಗೌಡ ಹಂಗರಗಾ ಕೆ. ಅವರು ಈ ಸಂದರ್ಭದಲ್ಲಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- ಕರುನಾಡ ಕಂದ
