ಬಳ್ಳಾರಿ / ಕಂಪ್ಲಿ : ಪಟ್ಟಣದ ಶಾರದಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪತಂಜಲಿ ಯೋಗ ಸಮಿತಿ ಕಂಪ್ಲಿ ಮುಖ್ಯ ಕೇಂದ್ರೀಯ ಪ್ರಭಾರಿ ಪೂಜ್ಯ ಸ್ವಾಮಿ ಡಾ. ಪರಮಾರ್ಥ ದೇವಜೀ, ಪತಂಜಲಿ ಯೋಗ ಪೀಠ ಹರಿದ್ವಾರ, ಇವರ ದಿವ್ಯ ಉಪಸ್ಥಿತಿಯಲ್ಲಿ ರಾಜ್ಯ ಪ್ರಭಾವಿ ಅಂತರಾಷ್ಟ್ರೀಯ ಯೋಗ ಗುರು ಶ್ರೀ ಭವರಲಾಲ್ ಆರ್ಯ ಇವರ ಮಾರ್ಗದರ್ಶನದಲ್ಲಿ ಸತ್ಸಂಗ ಮತ್ತು ಕಾರ್ಯಕರ್ತರ ಬೈಠಕ್ ಕಾರ್ಯಕ್ರಮ ನಡೆಯಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ರಾಜ್ಯಪ್ರಭಾರಿ ಅಂತರಾಷ್ಟ್ರೀಯ ಯೋಗಗುರು ಭವರಲಾಲ್ ಆರ್ಯಜೀ ಮನೆ ಮನೆಗೆ ಯೋಗ ತಲುಪಿಸುವಂತಹ ಈ ಮಹಾ ಯಾತ್ರೆಯಲ್ಲಿ ದೇಶದ ಜನರು ಇದ್ದಾರೆ. ರಾಜ್ಯದಲ್ಲಿ ಬೆಳಗಾಂ ಹೊಸಪೇಟೆ ಹಾಗೂ ಹಾಸನ ಯೋಗ ಉತ್ಸವ ನಡೆಯುತ್ತಿದೆ. ಕಂಪ್ಲಿಯ ಪತಂಜಲಿ ಯೋಗ ಸಮಿತಿ ಉತ್ತಮ ಕಾರ್ಯವನ್ನು ಮಾಡುತ್ತಿದೆ ಮುಂಬರುವ ದಿನಗಳಲ್ಲಿ ಅಡ್ವಾನ್ಸ್ ಇಂಟಿಗ್ರೇಡ್ ತರಬೇತಿಯನ್ನು ಅಳವಡಿಸಿ ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಹರಿದ್ವಾರದ ಪತಂಜಲಿ ಯೋಗ ಪೀಠದ ಪೂಜ್ಯ ಸ್ವಾಮಿ ಡಾ. ಪರಮಾರ್ಥ ದೇವಜೀ ಮಾತನಾಡಿ ನಿತ್ಯವು ಯೋಗ ಮಾಡಿದರೆ ರೋಗದಿಂದ ಸಂಪೂರ್ಣ ದೂರವಾಗಿ, ನಿರೋಗಿಗಳಾಗಿ ಜೀವನ ನಡೆಸಲು ಸಾಧ್ಯವಾಗುತ್ತದೆ.
ಯೋಗವು ಪ್ರಾಚೀನ ಕಾಲದಿಂದಲೂ ಬಂದಿದೆ. ಇದರಿಂದಾಗಿಯೇ ಇದಕ್ಕೆ ಸಾಕಷ್ಟು ಮನ್ನಣೆ ದೊರೆಯಲು ಸಾಧ್ಯವಾಗಿದೆ. ಹಲವಾರು ಮಹಾನ್ ಪುರುಷರು ಅದರ ಮಹತ್ವ ಅರಿತು ಜೀವನದಲ್ಲಿ ಅಳವಡಿಸಿಕೊಂಡು ಯೋಗಿಗಳಾಗಿದ್ದರು, ಹೀಗಾಗಿ ಎಲ್ಲರು ಯೋಗ ಮಾಡುವುದು ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.
ವಿದೇಶದಲ್ಲಿಯೂ ಯೋಗ ಸಾಕಷ್ಟು ಮನ್ನಣೆ ಪಡೆದುಕೊಂಡಿದೆ. ವರ್ಷದಿಂದ ವರ್ಷಕ್ಕೆ ಭಾರಿ ಪ್ರಮಾಣದಲ್ಲಿ ವಿದೇಶಿಗರು ಮಾರು ಹೋಗುತ್ತಿರುವುದು, ಅದರ ಪ್ರಭಾವ ಹೇಗಿದೆ ಎಂಬುದು ಎಂಬುದು ಅರಿವಾಗುತ್ತದೆ. ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಿರಲು ನಿತ್ಯ ಯೋಗ ಮಾಡಬೇಕು, ಮನಸ್ಸಿಗೆ ಉಲ್ಲಾಸ, ದೇಹಕ್ಕೆ ಚೈತನ್ಯ ಲಬಿಸಲು ಯೋಗ ಮಾಡಬೇಕು. ಇಡೀ ದಿನ ಕೂಡ ಉತ್ಸಾಹದಿಂದ ಓಡಾಡಲು ಅನುಕೂಲವಾಗುತ್ತದೆ. ಇದರಲ್ಲಿ ಯುವ ಜನತೆ ತಮ್ಮ ಆರೋಗ್ಯ ಬಲಿಷ್ಠವಾಗಿ ಬೆಳೆಸಿಕೊಳ್ಳಲು ಮೊದಲು ಯೋಗ ಮಾಡಲು ಮುಂದಾಗಬೇಕು.
ಸದೃಢವಾಗಿ ಆರೋಗ್ಯ ಇರಬೇಕಾದರೆ ಪ್ರತಿಯೊಬ್ಬರೂ ಕಡ್ಡಾಯವಾಗಿ ಯೋಗ ಮಾಡಬೇಕು. ಇದರಿಂದಾಗಿ ಯಾವುದೇ ರೀತಿಯಿಂದ ರೋಗ ರುಜಿನಗಳು ಬರುವುದಿಲ್ಲ. ಮನಸ್ಸು ಉಲ್ಲಾಸದಿಂದ ಇರಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಲ್ಲರೂ ಒತ್ತಡದಿಂದ ಜೀವನ ನಡೆಸಿ ನಾನಾ ರೋಗಗಳಿಗೆ ತುತ್ತಾಗುವ ಮೂಲಕ ಮಾನಸಿಕವಾಗಿ ಸಾಕಷ್ಟು ಕುಗ್ಗಿದ್ದಾರೆ. ಆದರೆ ಇದರಿಂದ ಹೊರ ಬರಲು ಯೋಗದಿಂದ ಮಾತ್ರ ಸಾಧ್ಯವಾಗುತ್ತದೆ. ಯೋಗ ಮನುಷ್ಯನಿಗೆ ರೋಗದಿಂದ ಮುಕ್ತಿ ಮಾಡುತ್ತದೆ, ಅಂತರಾಷ್ಟ್ರೀಯ ಯೋಗ ದಿನಾಚರಣೆ ನಂತರ ಇಂಟಿಗ್ರೇಟೆಡ್ ಅಡ್ವಾನ್ಸ್ ಯೋಗ ತರಬೇತಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪತಂಜಲಿ ಸಮಿತಿಯ ತಾಲೂಕು ಪ್ರಭಾರಿ ಡಿ. ಮೌನೇಶ , ನಗರ ಅಧ್ಯಕ್ಷ ಕೋಟ್ರೇಶ ಶ್ರೇಷ್ಠಿ ರಾಜ್ಯ ಕಿಶಾನ್ ಪ್ರಭಾರಿ ಸಂಜಯ್ ಕುಷ್ಟಕರ್ಜಿ, ರಾಜ್ಯ ಮಹಿಳಾ ಪ್ರಭಾರಿ ಗೌರಮ್ಮ ರಾಜ್ಯ ಸದಸ್ಯ ಬಾಲಚಂದ್ರ ಶರ್ಮಜೀ ಮಹಿಳಾ ಪ್ರಭಾರಿ ಕಲ್ಗುಡಿ ರತ್ನ, ಪತಾಂಜಲಿ ಸಮಿತಿ ಕಾರ್ಯದರ್ಶಿ ಷಣ್ಮುಖಪ್ಪ ಚಿತ್ರಗಾರ, ಅನೇಕ ಮಹಿಳಾ ಯೋಗ ಸಾಧಕರು, ಹಿರಿಯ ಸಾಧಕರು ಸೇರಿದಂತೆ ಪತಂಜಲಿ ಯೋಗ ಸಮಿತಿ, ಭಾರತ ಸ್ವಾಭಿಮಾನಿ ಟ್ರಸ್ಟ್, ಮಹಿಳಾ ಪತಂಜಲಿ ಯೋಗ ಸಮಿತಿ ಹಾಗೂ ಯುವ ಭಾರತ್ ಕಿಸಾನ್ ಸೇವಾ ಸಮಿತಿಯವರು ಹಾಗೂ ಸಾರ್ವಜನಿಕರು ಇದರಲ್ಲಿ ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್
