ಚಾಮರಾಜನಗರ/ ಹನೂರು: 12ನೇ ಶತಮಾನದಲ್ಲಿ ಬಸವಣ್ಣನವರು 15ನೇ ಶತಮಾನದಲ್ಲಿ ಆಯ್ದಕ್ಕಿ ಮಾರಯ್ಯ ಅವರ ಹಾದಿಯಲ್ಲಿ ಶ್ರೀ ಗುರು ಮಲ್ಲೇಶ್ವರ ಸ್ವಾಮಿಯು ಮೈಸೂರು, ಚಾಮರಾಜನಗರ ಈ ಭಾಗದಲ್ಲಿ ಸಂಚರಿಸಿ ಧಾರ್ಮಿಕ ಕ್ರಾಂತಿಯನ್ನು ಸ್ಥಾಪಿಸಿದರು ಎಂದು ಸಿದ್ದಗಂಗಾ ಮಠದ ಶ್ರೀ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಹಲಗಪುರ ಗ್ರಾಮದಲ್ಲಿ ಶ್ರೀ ಬಸವೇಶ್ವರ ದೇವಸ್ಥಾನ ಹಾಗೂ ಶ್ರೀ ಗುರು ಮಲ್ಲೇಶ್ವರ ದಾಸೋಹ ಮಠ ಉದ್ಘಾಟನೆ ನೆರವೇರಿಸಿ
ನಂತರ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಹಲಗಪುರ ಬಂಡಳ್ಳಿ ಮಣಗಳ್ಳಿ ಈ ಭಾಗದ ಜನರು ಭಕ್ತಿ ನಿಷ್ಠೆ ಇರುವಂತಹ ಜನರು ಈ ಜನರಿಗೆ ಕಾವೇರಿ ನದಿ ಪಕ್ಕದಲ್ಲಿ ಹರಿಯುತ್ತಿದ್ದು ಸರ್ಕಾರ ಗಮನಹರಿಸಿ ಕಾವೇರಿ ನದಿ ಮೂಲದಿಂದ ಕರೆಕಟ್ಟೆಗಳಿಗೆ ನೀರು ತುಂಬಿಸಬೇಕು ಆರ್ಥಿಕವಾಗಿ ಮುಂದೆ ಬರಲು ಮೂಲಭೂತ ಸೌಕರ್ಯವನ್ನು ಶಿಕ್ಷಣ ಆರೋಗ್ಯ ಕೊಡಿಸಿ ಕೊಡಬೇಕು ಶ್ರೀ ಮಲೆ ಮಹದೇಶ್ವರ ಸ್ವಾಮಿಯು ಈ ಭಾಗದಲ್ಲಿ ಸಂಚರಿಸಿ ಹೋಗಿರೋ ಪುಣ್ಯಸ್ಥಳಗಳಾದ ಹಲಗಪುರ ಗ್ರಾಮ ಪುಣ್ಯ ಮಾಡಿದ ಸ್ಥಳವಾಗಿದೆ ಈ ಗ್ರಾಮದಲ್ಲಿ ಪುಣ್ಯ ಕಾರ್ಯ ಮಾಡುತ್ತಿರುವುದು ನಮ್ಮ ವೀರಶೈವ ಸಮಾಜದ ಸಮಾಜದ ಮುಖಂಡರುಗಳು ಯುವಕರು ಈ ಪುಣ್ಯದ ಕೆಲಸವನ್ನು ಮಾಡಿರುವುದು ಶ್ಲಾಘನೀಯ ಎಂದರು.
ಶ್ರೀ ಮಲೆ ಮಹದೇಶ್ವರ ಸ್ವಾಮಿ ತಪ್ಸರೆ ಗ್ರಾಮದಲ್ಲಿ ತಪಸ್ಸು ಮಾಡಿ ನಂತರ ಶ್ರೀಮಲೆಗೆ ಹೋಗಿದ್ದ ಕ್ಷೇತ್ರವೇ ಪುಣ್ಯಕ್ಷೇತ್ರವಾಗಿದೆ ಈ ಪುಣ್ಯಕ್ಷೇತ್ರಕ್ಕೆ ಜನಪದ ಸಾಹಿತ್ಯ ಪಡೆದುಕೊಂಡಿದೆ ಮತ್ತು ಅನೇಕ ಪವಾಡಗಳು ನಡೆದಿದೆ ಎಂದರು.
ಸರಳ ಸಜ್ಜನಿಕೆ ವ್ಯಕ್ತಿ ದಿವಂಗತ ಎಚ್. ನಾಗಪ್ಪ ರವರನ್ನು ಕಳೆದುಕೊಂಡು ನಮಗೆ ತುಂಬಾ ನೋವುಂಟಾಗಿದೆ ಅವರ ಅವಧಿಯಲ್ಲಿ ಅನೇಕ ಜನಪರ ಕೆಲಸ ಕಾರ್ಯಗಳು ಮಾಡಿರುವುದು ಶ್ಲಾಘನೀಯ ಅವರ ಹಾದಿಯಲ್ಲಿ ಶ್ರೀಮತಿ ಪರಿಮಳ ನಾಗಪ್ಪ ರವರು ಉತ್ತಮ ಜನಪರ ಕೆಲಸ ಕಾರ್ಯಗಳನ್ನು ಮಾಡಿದ್ದಾರೆ ಎಂದರು.
ನಮ್ಮ ಬಂಡಳ್ಳಿ ದೊಡ್ಡ ಮಠದ ಫಲಹಾರ ಪ್ರಭುದೇವ ಸ್ವಾಮಿಗಳು ಸಂಸ್ಕೃತ ಪಾಠಶಾಲೆ ತೆರೆದು ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಿಕೊಂಡು ಬರುತ್ತಿದ್ದು ಎಲ್ಲಾ ಸಮಾಜದ ಜನರನ್ನು ಪ್ರೀತಿ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ ಸಿದ್ದಗಂಗಾ ಮಠದಲ್ಲಿ ಆರೋಗ್ಯ ಶಿಕ್ಷಣ ಸ್ವಚ್ಛತೆ ನಿರಂತರ ದಾಸೋಹ ನಡೆದಿದೆ ಎಂದರು.
ಸಾಲೂರು ಬೃಹನ್ ಮಠದ ಶ್ರೀ ಶ್ರೀ ಶಾಂತ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮಾತನಾಡಿ ಹಲಗಪುರ ಗ್ರಾಮದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಮಾಡುತ್ತಿರುವುದು ಸಂತೋಷದ ವಿಷಯ ಇದೇ ರೀತಿಯಾಗಿ ಮುಂದುವರಿಸಿಕೊಂಡು ಹೋಗಿ ಶ್ರೀ ಮಲೆ ಮಹದೇಶ್ವರ ಸ್ವಾಮಿ ನಡೆದಂತ ಪುಣ್ಯ ಸ್ಥಳದಲ್ಲಿ ನಾವಿದ್ದೀವಿ ಉತ್ತಮ ಮಳೆ ಬೆಳೆಯಾಗಿ ಗ್ರಾಮದಲ್ಲಿ ಎಲ್ಲರೂ ಶಾಂತಿ ನೆಮ್ಮದಿಯಿಂದ ಇರಲಿ ಎಂದು ಹೇಳಿದರು.
ಮಾಜಿ ಶಾಸಕಿ ಪರಿಮಳ ನಾಗಪ್ಪ ರವರು ಮಾತನಾಡಿ ನಮ್ಮ ಸಮಾಜದ ಬಂಧುಗಳು ಎಲ್ಲರೂ ಅಣ್ಣತಮ್ಮಂದಿರಾಗಿ ಪ್ರೀತಿ ವಿಶ್ವಾಸದಿಂದ ಇರಬೇಕು ಸಣ್ಣ ಪುಟ್ಟ ಮನಸ್ತಾಪ ಮಾಡಿಕೊಳ್ಳಬಾರದು ಗ್ರಾಮದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಶ್ಲಾಘನೀಯ ನಾಗಪ್ಪ ರವರ ಅಧಿಕಾರ ಅವಧಿಯಲ್ಲಿ ಅನೇಕ ಜನಪರ ಕೆಲಸ ಕಾರ್ಯಗಳನ್ನು ಮಾಡಿದರು ನನ್ನ ಅಧಿಕಾರ ಅವಧಿಯಲ್ಲಿ ಮಣಗಳ್ಳಿ ಹಳ್ಳದ ಕೆರೆ ಹಲಗಪುರ ಡ್ಯಾಮ್ ಗೆ ಸರ್ಕಾರಕ್ಕೆ ಮನವಿ ಸಲ್ಲಿಸಿದೆ ಆದರೆ ಕಾರಣಾಂತರಗಳಿಂದಾಗಿಲ್ಲ ನಮ್ಮ ಮಠಮಾನ್ಯಗಳು ಎಲ್ಲಾ ಸಮುದಾಯದವರು ದಾಸೋಹ ಶಿಕ್ಷಣವನ್ನು ನೀಡುತ್ತಾ ಬರುತ್ತಿತ್ತು ಅದೇ ರೀತಿ ಹಲಗಪುರ ಗ್ರಾಮದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಸಿರುವುದು ಸಂತೋಷ, ಹಲಗಪುರದ ಗ್ರಾಮದ ವೀರಶೈವ ಸಮಾಜದ ಬಂಧುಗಳು ಸಹಸ್ರರು ಭಕ್ತಾದಿಗಳಿಗೆ ದಾಸೋಹ ವ್ಯವಸ್ಥೆ ಕಲ್ಪಿಸಿಕೊಟ್ಟರು.
ಇದೇ ಸಂದರ್ಭದಲ್ಲಿ ಶ್ರೀ ಶ್ರೀ ಚನ್ನಬಸವ ಸ್ವಾಮಿಗಳು, ಚನ್ನಬಸವ ಸ್ವಾಮಿಗಳು ನೆಮ್ಮದಿ ಶಿವರುದ್ರ ಸ್ವಾಮಿಗಳು ಶ್ರೀ ಶ್ರೀ ಡಾಕ್ಟರ್ ಫಲಹಾರ ಪ್ರಭುದೇವ ಸ್ವಾಮಿಗಳು ಶ್ರೀ ಶ್ರೀ ಸರ್ಪಭೂಷಣ ಸ್ವಾಮಿಗಳು ಸಮಾಜ ಸೇವಾಕ ನಿಶಾಂತ್ ಹಾಗೂ ವೀರಶೈವ ವಿವಿಧ ಮಠಾಧಿಪತಿಗಳು ಹಲಗಪುರದ ಗ್ರಾಮದ ವೀರಶೈವ ಎಲ್ಲಾ ಮುಖಂಡರು ಹಾಗೂ ಯುವಕರು ಹಾಜರಿದ್ದರು.
ವರದಿ ಉಸ್ಮಾನ್ ಖಾನ್
