ಬಳ್ಳಾರಿ / ಕಂಪ್ಲಿ :ಪಟ್ಟಣದ ಆರಾಧ್ಯ ದೇವರಾದ ಶ್ರೀ ಸೋಮೇಶ್ವರ ಮಹಾರಥೋತ್ಸವ ಇಂದು ಸಂಜೆ ಅತ್ಯಂತ ವಿಜೃಂಭಣೆಯಿಂದ ಜರುಗಿತು.
ಬೆಳಿಗ್ಗೆ ಶ್ರೀ ಸೋಮೇಶ್ವರ ಶಿಲಾಮೂರ್ತಿಗೆ ವಿವಿಧ ಅಭಿಷೇಕಗಳು, ನೈವೇದ್ಯ ಸಮರ್ಪಣೆ ಮತ್ತು ಮಹಾಮಂಗಳಾರತಿಯ ನಂತರ ಮಡಿ ತೇರನ್ನು ಎಳೆಯಲಾಯಿತು. ಸಂಜೆ ವಿವಿಧ ಜಾನಪದ ಕಲಾತಂಡಗಳು, ಮಂಗಳ ವಾದ್ಯಗಳೊಂದಿಗೆ ರಥದಲ್ಲಿ ಶ್ರೀ ಸೋಮೇಶ್ವರ ರಥೋತ್ಸವಕ್ಕೆ ಚಾಲನೆ ನೀಡಿದರು.
ರಥವು ರಾಜಬೀದಿಯಲ್ಲಿ ಸಾಗಿ ಅಲ್ಲಿಂದ ಪುನಃ ದೇವಸ್ಥಾನಕ್ಕೆ ತಲುಪಿತು.
ಮಹಾರಥೋತ್ಸವದಲ್ಲಿ ಕಂಪ್ಲಿ ವಿಧಾನಸಭಾ ಕ್ಷೇತ್ರದ ಶಾಸಕ ಜೆ. ಎನ್. ಗಣೇಶ ಪಾಲ್ಗೊಂಡು ದೇವರ ಆಶೀರ್ವಾದವನ್ನೂ ಪಡೆದು ಮಾತನಾಡಿ 1 ಕೋಟಿ ರೂಪಾಯಿ ವೆಚ್ಚದಲ್ಲಿ ಸೋಮೇಶ್ವರ ಸಭಾ ಭವನವನ್ನು ನಿರ್ಮಾಣ ಮಾಡುವದಾಗಿ ತಿಳಿಸಿದ್ದರು.
ಶ್ರೀ ಸೋಮೇಶ್ವರ ದೇವಸ್ಥಾನ ಸಮಿತಿಯ ಪದಾಧಿಕಾರಿಗಳು, ಪಟ್ಟಣ, ಗ್ರಾಮಗಳ ವಿವಿಧ ಸಮಾಜಗಳ ಮುಖಂಡರು ಹಾಗೂ ಸದ್ಭಕ್ತರು ಭಾಗವಹಿಸಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್
