
ಆಸ್ಪತ್ರೆಗೆ ಭೇಟಿ ನೀಡಿದ ತಾಲೂಕ ಆರೋಗ್ಯ ಅಧಿಕಾರಿಗಳು
ಸೇಡಂ/ ಇಟ್ಕಲ :ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಇಟ್ಕಲ ಗ್ರಾಮದ ಸರಕಾರಿ ಆಸ್ಪತ್ರೆಯ ಕುರಿತಾದ “ವೈದ್ಯಕೀಯ ಶಿಕ್ಷಣ ಸಚಿವರ ಜಿಲ್ಲೆಯಲ್ಲಿ ಹಗಲಲ್ಲೇ ಆಸ್ಪತ್ರೆಗೆ ಬೀಗ” ತಲೆ ಬರಹದ ಸುದ್ದಿಯಲ್ಲಿ ಈ ಆಸ್ಪತ್ರೆಯ ಕುರಿತು ವಿವರವಾಗಿ ವರದಿಯನ್ನು ಕರುನಾಡ ಕಂದ.ಕಾಮ್ ಸುದ್ದಿ ಪೋರ್ಟಲ್ ನಲ್ಲಿ ಪ್ರಕಟಿಸಲಾಗಿತ್ತು ಈ ಸುದ್ದಿಯನ್ನು ನೋಡಿ ಆಸ್ಪತ್ರೆಗೆ ಭೇಟಿ ನೀಡಿದ ತಾಲೂಕು ಆರೋಗ್ಯಾಧಿಕಾರಿಗಳಾದ ಡಾ. ಸಂಜೀವ ಪಾಟೀಲ್ ಆಸ್ಪತ್ರೆ ಸಿಬ್ಬಂದಿಗೆ ತರಾಟೆಗೆ ತೆಗೆದುಕೊಂಡರು, ಈ ರೀತಿ ಸಾರ್ವಜನಿಕರಿಗೆ ತೊಂದರೆ ಮುಂದುವರೆದರೆ ಎಲ್ಲಾ ಸಿಬ್ಬಂದಿಗಳ ಮೇಲೆ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ವರದಿ: ಜಗದೀಶ್ ಕುಮಾರ್ ಭೂಮಾ
