
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಬೀಗಾರ್ ಪುಟ್ಟ ಗ್ರಾಮದಲ್ಲಿ 1977 ರಂದು ದಿ. ಶ್ರೀಮತಿ ಶಾರದಾ ಮತ್ತು ಶ್ರೀ ರಾಮಚಂದ್ರ ಭಟ್ ಅವರ ದ್ವಿತೀಯ ಪುತ್ರರಾಗಿ ಕೃಷಿ ಕುಟುಂಬದಲ್ಲಿ ಜನನ.ಸರಕಾರಿ ಪ್ರಾಥಮಿಕ ಶಾಲೆ ಬೀಗಾರ್ ಮತ್ತು ಸರ್ವೋದಯ ಪ್ರೌಢಶಾಲೆ ವಜ್ರಳ್ಳಿಯಲ್ಲಿ 9 ನೇ ತರಗತಿಯವರೆಗೆ ವಿದ್ಯಾಭ್ಯಾಸ ಮುಗಿಸಿ 1996 ರಲ್ಲಿ ಒಂದು ಪತ್ರಿಕೆಯ ಜಾಹೀರಾತು ನೋಡಿ ಬೆಂಗಳೂರಿನತ್ತ ಪ್ರಯಾಣ, ತದ ನಂತರ
ಹೋಟೆಲ್ ನಲ್ಲಿ ಕಾರ್ಮಿಕನಾಗಿ, ಬೀಡಾ ಅಂಗಡಿ ಮತ್ತು ಟೀ ಅಂಗಡಿ
ಮಾಲೀಕರಾಗಿ ಅನೇಕ ವಿಭಾಗಗಳಲ್ಲಿ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ.
1999 ರಿಂದ ಕನ್ನಡ ರಂಗಭೂಮಿಯಲ್ಲಿ ನಟರಾಗಿ, ನೇಪಥ್ಯ ಕಲಾವಿದರಾಗಿ, ಕಿರುತೆರೆಯ 25ಕ್ಕೂ ಹೆಚ್ಚಿನ ಧಾರಾವಾಹಿಗಳಲ್ಲಿ ಚಿಕ್ಕ ಪುಟ್ಟ ಪಾತ್ರಗಳನ್ನು ನಿರ್ವಹಿಸಿದ್ದಾರೆ,10 ಕ್ಕೂ ಹೆಚ್ಚು ಕಿರು ಚಿತ್ರಗಳಲ್ಲೂ ಸಹ ಅಭಿನಯಿಸಿದ ಅನುಭವ ಜೊತೆಗೆ 4 ಸಿನೆಮಾಗಳಲ್ಲಿ ಕೂ ಅಭಿನಯಿಸಿದ್ದಾರೆ.
ಮೊದಲನೇ ಸಿನಿಮಾ ಲೂಸಿಯಾ,
- ಮೇಲೊಡಿ
- ಮನಸ್ಮಿತ
- ತ.ರಾ.ಸು ರವರ ಕಾದಂಬರಿ ಆಧಾರಿತ ಸಿನೆಮಾ ಅಕ್ಕಮ್ಮನ ಭಾಗ್ಯ ಸಿನಿಮಾದಲ್ಲಿ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಅಕ್ಕಮ್ಮನ ಭಾಗ್ಯ ಸಿನಿಮಾ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಬೇರೆ ಬೇರೆ ವಿಭಾಗದಲ್ಲಿ 18 ಪ್ರಶಸ್ತಿಯನ್ನು ಗಳಿಸಿಕೊಂಡಿದೆ. ಅಕ್ಕಮ್ಮನ ಭಾಗ್ಯ ಸಿನೆಮಾ ಯ್ಯೂಟೂಬ್ ನಲ್ಲಿ ಲಭ್ಯವಿದೆ. ಸಮಯ ಬಿಡುವು ಮಾಡಿಕೊಂಡು ಒಮ್ಮೆ ನೋಡಿ, ಇದೊಂದು ಕಲಾತ್ಮಕ ಸಿನೆಮಾ.. ಜಾದೂಗಾರರಾಗಿ 2012 ರಿಂದ ಜಾದೂ ಕಲೆಯನ್ನು ಪ್ರದರ್ಶನ ಮಾಡುವ ಮೂಲಕ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ. ಕರ್ನಾಟಕದ, ಹಾಗೂ ಹೊರ ರಾಜ್ಯಗಳಾದ ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ, ಬಾಂಬೆ, ದೆಹಲಿ ಯಲ್ಲಿ ಜಾದೂ ಪ್ರದರ್ಶನ ಮಾಡಿದ ಅನುಭವ ಇವರದು. ಅಮೆಜಾನ್ ಮತ್ತು ಪಂಕಜ್ ಕಸ್ತೂರಿ ಜಾಹೀರಾತುಗಳಲ್ಲಿ ಇವರು ಅಭಿನಯಿಸಿದ್ದಾರೆ.
80G ಹೊಂದಿರುವ U.K.Art’s & Cultural Trust (ರಿ.) NGO ಬೆಂಗಳೂರು ಇದರ Executive Director ರಾಗಿ 2017-18 ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ನಾಟಕ ತರಬೇತಿ ಮತ್ತು ನಾಟಕ ನಿರ್ಮಾಣ ಹಾಗೂ ನಾಟಕ ಬರೆಯುವ ಮೂಲಕ ಕನ್ನಡ ರಂಗಭೂಮಿಗೆ ತಮ್ಮದೇ ಆದ ಕೊಡುಗೆ ನೀಡುತ್ತಾ ಬಂದಿದ್ದಾರೆ
ನಾರಾಯಣ ಭಟ್ ಇವರ ವಾಸ ಬೆಂಗಳೂರು.
ಜಾದೂಗಾರ್ ನಾರಾಯಣ ಭಟ್ 2016 ರಲ್ಲಿ ರಂಗ ಕಲಾವಿದೆ, ಕಿರುತೆರೆ, ಬೆಳ್ಳಿತೆರೆ ನಟಿ ಮಂಜುಳಾ ರವರನ್ನು ವರಿಸಿ ದಾಂಪತ್ಯ ಜೀವನಕ್ಕೆ ಪಾದಾರ್ಪಣೆ.
https://youtu.be/ClPiADj395g
ತ.ರಾ.ಸು ರವರ ಕಾದಂಬರಿ ಆಧಾರಿತ ಸಿನಿಮಾ “ಅಕ್ಕಮ್ಮನ ಭಾಗ್ಯ” ಈಗ ಯೂಟ್ಯೂಬ್‌ನಲ್ಲಿ ಲಭ್ಯ. ಸ್ವಲ್ಪ ಸಮಯ ಬಿಡುವು ಮಾಡಿಕೊಂಡು
ನಾವು ಮುಖ್ಯ ಪಾತ್ರದಲ್ಲಿ ಅಭಿನಯಿಸಿದ ಚಿತ್ರವನ್ನು ನೋಡಿ. ನಿಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ತಿಳಿಸಿ.
ಯಾವಾಗಾದರೂ ,
ಎಲ್ಲಿಯಾದರೂ,
ಯಾವ ರೀತಿಯ ಕಾರ್ಯಕ್ರಮವಾದರೂ
ಎಲ್ಲಾ ವಯಸ್ಸಿನವರು ಕುಳಿತು ನೋಡುವ, ನೋಡಿ ನಗುವ ಕಾರ್ಯಕ್ರಮ ಮಾಡಿ ಕೊಡುತ್ತೇವೆ.
ಜಾದೂ ಪ್ರದರ್ಶನಗಳಿಗೆ ಸಂಪರ್ಕಿಸಿ.
ರಂಗಭೂಮಿ, ಕಿರುತೆರೆ, ಚಲನಚಿತ್ರ ನಟ ಹಾಗೂ ರಂಗಸಂಘಟಕ ಮತ್ತು
ಜಾದೂಗಾರ.

ನಾರಾಯಣ ಭಟ್ – From UK
9449637356
- ಕರುನಾಡ ಕಂದ
