ಚಾಮರಾಜನಗರ/ ಹನೂರು :ಘನ ಸರ್ಕಾರದ ಗ್ಯಾರಂಟಿ ಯೋಜನೆಯ ಹನೂರು ತಾಲ್ಲೂಕು ಸಮಿತಿಯು ಇಂದು ಹನೂರಿನಲ್ಲಿ ಪ್ರಗತಿ ಪರಿಶೀಲನಾ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಸಭೆಯಲ್ಲಿ ಭಾಗವಹಿಸಿದ್ದ ಗ್ಯಾರಂಟಿ ಯೋಜನೆಯ ಸಭೆಯಲ್ಲಿ ಶ್ರೀ ರಂಗಸ್ವಾಮಿ. ಎ.ಇ.ಇ ಚೆಸ್ಕಾಂ, ಹನೂರು ಉಪವಿಭಾಗ ರವರ ಕಾರ್ಯ ವೈಖರಿ, ಸಾರ್ವಜನಿಕರ ಕುಂದುಕೊರತೆ ನಿವಾರಣೆ, ರೈತರ ಜೊತೆಯಲ್ಲಿ ಉತ್ತಮ ಭಾಂದವ್ಯ, ನಿಗದಿತ ಸಮಯದಲ್ಲಿ ದೂರು ನಿವಾರಣೆ, ಪ್ರತಿದಿನ ಕಚೇರಿಯಲ್ಲಿ ಗ್ರಾಹಕರಿಗೆ ರೈತರಿಗೆ ಸಾರ್ವಜನಿಕರಿಗೆ ಉತ್ತಮ ರೀತಿಯ ಸ್ವಂದನೆ, ಮ.ಮ. ಬೆಟ್ಟದ ಕ್ಯಾಬಿನೆಟ್ ಸಭೆಯಲ್ಲಿ ಚೆಸ್ಕಾಂ ವ್ಯಾಪ್ತಿಯ ರೈತರು,ಸಾರ್ವಜನಿಕರಿಂದ ದೂರಿಲ್ಲದಂತೆ ನಿರ್ವಹಣೆ, ತಾಲ್ಲೂಕು ವ್ಯಾಪ್ತಿಯ ಎಲ್ಲಾ ಜನಸಾಮಾನ್ಯರಲ್ಲಿಯೂ ಉತ್ತಮರು ಎಂದೆನಿಸಿಕೊಂಡು, ಹಳ್ಳಿ-ಹಳ್ಳಿ ಗಳಲ್ಲಿ ಆಚರಣೆ ಮಾಡುವ ಗ್ರಾಮದ ಹಬ್ಬಗಳಲ್ಲಿ ಮೈಕ್ ಗಳಲ್ಲಿ ಇವರ ಹೆಸರು ಪ್ರಸ್ತಾಪ ಮಾಡಿ ಹೊಗಳಿಕೆಯ ಭಾಷಣ, ಪ್ರತಿದಿನ ಸಾರ್ವಜನಿಕರಿಗೆ ಲಭ್ಯ, ಕಛೇಯಲ್ಲಿ ಬಿಡುವಿಲ್ಲದೆ ಕೆಲಸ ಕಾರ್ಯ, ಕಚೇರಿ ಅಧಿಕಾರಿ ನೌಕರರ ಜೊತೆ ಉತ್ತಮ ಬಾಂಧವ್ಯ, ಇದುವರೆಗೂ ಯಾವುದೇ ಆರೋಪಗಳಿಲ್ಲದೆ ಕರ್ತವ್ಯ ನಿರ್ವಹಿಸುತ್ತಿರುವುದನ್ನು ನೋಡಿ ಮಾನ್ಯ ಘನ ಸರ್ಕಾರದ ಗ್ಯಾರಂಟಿ ಯೋಜನೆಯ ಅಧ್ಯಕ್ಷರಾದ ಪಾಳ್ಯದ ರಾಚಪ್ಪ, ಸದಸ್ಯರು, ತಾಲ್ಲೂಕು ಪಂಚಾಯತಿ ಇ.ಓ, ಗ್ಯಾರಂಟಿ ಯೋಜನೆಯ ಎಲ್ಲಾ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಶ್ರೀ ರಂಗಸ್ವಾಮಿ ಎ.ಇ.ಇ ಚೆಸ್ಕಾಂ, ಹನೂರು ಉಪವಿಭಾಗ ರವರನ್ನು ಸನ್ಮಾನಿಸಲಾಯಿತು.
ವರದಿ: ಉಸ್ಮಾನ್ ಖಾನ್
