ಬಳ್ಳಾರಿ / ಕಂಪ್ಲಿ : ಬಿ. ಮೋಹನ್ ಬಾಬು ಇನ್ನು ನೆನಪಷ್ಟೇ, ಕಂಪ್ಲಿ ಆರ್ಯವೈಶ್ಯ ಸಮಾಜದ ಮುಖಂಡರು, ಪುರಸಭೆ ಅಧ್ಯಕ್ಷರಾಗಿದ್ದ ಮೋಹನ್ ಬಾಬು ಬಹುಮುಖ ವ್ಯಕ್ತಿತ್ವವುಳ್ಳವರು.
ದಿನಾಂಕ 9.4 1985 ರಿಂದ 3. 12. 1988ರ ತನಕ ಕಂಪ್ಲಿ ಪುರಸಭೆ ಅಧ್ಯಕ್ಷರಾಗಿದ್ದರು.
ಪುರಸಭೆಗೆ ನಿರಂತರ ಆದಾಯ ಕಲ್ಪಿಸಲು ಮಳಿಗೆಗಳನ್ನು ಕಟ್ಟಿಸಿ ಬಾಡಿಗೆಯನ್ನು ನೀಡಿದ್ದರು ಇದರಿಂದ ಪುರಸಭೆಗೆ ಆದಾಯದೊಂದಿಗೆ ವ್ಯಾಪಾರ ವಹಿವಾಟು ಅಭಿವೃದ್ಧಿಗೆ ಅನುಕೂಲವಾಗಿತ್ತು.
ಆಗ ಇದ್ದ ಹೊಸಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಜನತಾದಳದಿಂದ ಟಿಕೆಟ್ ದೊರೆತಿತ್ತು. ಆದರೆ ತುರ್ತಾಗಿ ಆಗಿನ ನಾಯಕರಾದ ರಾಮಕೃಷ್ಣ ಹೆಗ್ಡೆ ಅವರು ಟಿಕೆಟ್ ಬದಲಾವಣೆ ಮಾಡಿದ್ದರು ಇಲ್ಲದಿದ್ದರೆ ಹೊಸಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾಗುತ್ತಿದ್ದರು, ಕಂಪ್ಲಿ ಎಜುಕೇಶನ್ ಸೊಸೈಟಿ ಅಧ್ಯಕ್ಷರಾಗಿ ಕಂಪ್ಲಿಯ ಮೊದಲ ಆಂಗ್ಲ ಮಾಧ್ಯಮ ಶಾಲೆಯಾದ ಭಾರತೀಯ ಶಿಶುವಿದ್ಯಾಲಯ ( BSV) ಅಭಿವೃದ್ಧಿಗೂ ಶ್ರಮಿಸಿದವರು.
ಕಂಪ್ಲಿಯ ಪ್ರತಿಷ್ಠಿತ ಕಾಸ್ಮ ಪಾಲಿಟಿನ್ ಕ್ಲಬ್ ನ ಕ್ರಿಯಾಶೀಲ ಸದಸ್ಯರಾಗಿದ್ದರು. ಮನರಂಜನೆ ಜೊತೆಗೆ ಹಿರಿಯ ಕಿರಿಯರೊಂದಿಗೆ ಸ್ನೇಹಿತರೊಂದಿಗೆ ಒಗ್ಗೂಡಿ ಸಮಯ ಕಳೆಯುವ ಉತ್ತಮ ಮಾತುಗಾರರಾಗಿದ್ದರು. ಹಾಸ್ಯ ಪ್ರಜ್ಞೆಯೊಂದಿಗೆ ಸಮಯೋಚಿತವಾಗಿ ಮಾತನಾಡುವ ಭಾಷಿಕರಾಗಿದ್ದರು.
ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮದ ಮುಖಂಡರು ಹಾಗೂ ಇವರ ಸ್ನೇಹಿತರು ಸಂತಾಪವನ್ನು ಸೂಚಿಸಿದ್ದಾರೆ.
ವರದಿ : ಜಿಲಾನಸಾಬ್ ಬಡಿಗೇರ್
