ಮಂಡ್ಯ: ಬೂಕನಕೆರೆ ಹೋಬಳಿಯ ಐಚನಹಳ್ಳಿ ಗ್ರಾಮದಲ್ಲಿ ಸುಮಾರು 14 ವರ್ಷಗಳಿಂದ ಮಾಡದೆ ಇರುವ ಐಚನಹಳ್ಳಮ್ಮ ಹಬ್ಬವು ಈ ವರ್ಷ ಅದ್ದೂರಿಯಾಗಿ 22/05/2025 ಮತ್ತು 23/05/2025 ರಂದು ನಡೆಯಲಿದೆ.
ಈ ಹಬ್ಬಕ್ಕೆ ದೀಪಾಲಂಕಾರ, ಡೊಳ್ಳು ಕುಣಿತ, ಪೂಜಾ ಕುಣಿತ, ಕೇರಳ ಮೂಲದ ಅದ್ದೂರಿ ವಾದ್ಯ, ಬಂಡಿ ಹಾಗು ಇನ್ನೂ ಹಲವಾರು ಮನರಂಜನಾ ಕಾರ್ಯಕ್ರಮಗಳ ಜೊತೆಯಲ್ಲಿ ರಾತ್ರಿ ಪೂರ್ತಿ ಊರಿನ ಎಲ್ಲಾ ಮನೆ-ಮನೆಗಳ ಹತ್ತಿರ ದೇವತೆಯ ಮೆರವಣಿಗೆ ನಡೆಯಲಿದೆ ಆದ್ದರಿಂದ ತಾವೆಲ್ಲರೂ ಕುಟುಂಬ ಸಮೇತರಾಗಿ ಆಗಮಿಸಿ ತಾಯಿಯ ಕೃಪೆಗೆ ಪಾತ್ರರಾಗಬೇಕು ಎಂದು ಐಚನಹಳ್ಳಿ ಗ್ರಾಮಸ್ಥರು ಹಾಗೂ ಯುವಕ ಮಿತ್ರರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- ಕರುನಾಡ ಕಂದ
