ಸೇಡಂ/ಹಂದರಿಕಿ : ಶ್ರೀ ಸದ್ಗುರು ಭೀಮಣ್ಣ ತಾತ ಜಾತ್ರಾ ಮಹೋತ್ಸವ ಸುಕ್ಷೇತ್ರ ಹಂದರಿಕಿ ದಿನಾಂಕ:09-05-2025 ಶುಕ್ರವಾರ ರಂದು ಬೆಳಗ್ಗೆ 8:30 ಕ್ಕೆ ಪಲ್ಲಕ್ಕಿ ಉತ್ಸವದೊಂದಿಗೆ ಪ್ರಾರಂಭ ವಾಗುವುದು, ಮಧ್ಯಾಹ್ನ 2:30ಕ್ಕೆ ಸರಪಳಿ ಕಾರ್ಯಕ್ರಮ ನೆರವೇರುವುದು ಎಂದು ಸುಕ್ಷೇತ್ರ ಹಂದರಿಕಿ ದೇವಸ್ಥಾನದ ಸಧ್ಭಕ್ತರು ಪತ್ರಿಕೆಗೆ ತಿಳಿಸಿದ್ದಾರೆ.
ಜಾತ್ರಾ ಮಹೋತ್ಸವದಲ್ಲಿ ಸಾವಿರಾರು ಭಕ್ತರು ಉತ್ತರ ಕರ್ನಾಟಕದ ಮೂಲೆ ಮೂಲೆಗಳಿಂದ ಹಾಗೂ ನೆರೆಯ ತೆಲಂಗಾಣ ಮತ್ತು ಮಹಾರಾಷ್ಟ್ರ ರಾಜ್ಯಗಳಿಂದ ಜಾತ್ರೆಗೆ ಅಗಮಿಸುತ್ತಾರೆ.
ವರದಿ: ಜಗದೀಶ್ ಕುಮಾರ್ ಭೂಮಾ
