ವಿಜಯನಗರ / ಹೊಸಪೇಟೆ : ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಇಲಾಖೆ ವತಿಯಿಂದ ವಲಯದ ರೈತರಿಗಾಗಿ ರಿಯಾಯತಿ ದರದಲ್ಲಿ ವಿವಿಧ ಮಾದರಿಯ ಬಿತ್ತನೆ ಬೀಜಗಳನ್ನು ವಿತರಿಸಲಾಯಿತು.
ವಿಜಯನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಹೆಚ್. ಆರ್. ಗವಿಯಪ್ಪ ರವರು ಹೊಸಪೇಟೆಯ ಎ. ಪಿ. ಎಂ. ಸಿ ಯಾರ್ಡ್ ನಲ್ಲಿರುವ ರೈತ ಸಂಪರ್ಕ ಕೇಂದ್ರದಲ್ಲಿ ನಡೆದ ರೈತರಿಗೆ ಬಿತ್ತನೆ ಬೀಜಗಳು ಹಾಗೂ ಕೃಷಿ ಪರಿಕರಗಳ ವಿತರಿಸಿ ಮಾತನಾಡಿ ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಭೂಮಿಗೆ ಬೇಕಾಗುವ ಅಗತ್ಯ ಬೀಜಗಳನ್ನು ಇಲಾಖೆಯು ಈಗಾಗಲೇ ಸರಬರಾಜು ಮಾಡುತ್ತಿದೆ ಎಲ್ಲಾ ರೈತರು ಮುಂಗಾರು ಬಿತ್ತನೆಗೆ ಖರೀದಿಸಬಹುದು ವಲಯದ ರೈತರಿಗಾಗಿ ಇಲಾಖೆಯಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ, ಶರಣಪ್ಪ ಮುದಗಲ್, ಉಪ ನಿರ್ದೇಶಕರಾದ ನಹಿಮ್ ಪಾಷಾ, ಸಹಾಯಕ ನಿರ್ದೇಶಕರಾದ ಮನೋಹರ್ ಗೌಡ ರವರು ಸೇರಿದಂತೆ ಇಲಾಖೆ ಸಿಬ್ಬಂದಿ ವರ್ಗದವರು, ರೈತರು, ಮುಖಂಡರುಗಳು, ರೈತ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್
