ಯಾದಗಿರಿ/ಗುರುಮಠಕಲ್: ಇಂದು ಗುರುಮಠಕಲ್ ನ ಪಟ್ಟಣದ ಖಾಸಮಠದಲ್ಲಿ ಶ್ರೀ ಶ್ರೀ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ ಹಾಗೂ ಶ್ರೀ ಶ್ರೀ ಜ್ಞಾನಪ್ರಕಾಶ್ ಸ್ವಾಮೀಜಿ ಶ್ರೀ ಉರಿಲಿಂಗಪೆದ್ದಿಶ್ವರ ಮಹಾಸಂಸ್ಥಾನ ಮಠ ಕೋಡ್ಲಾ ಮೈಸೂರು ಅವರನ್ನು ಭೇಟಿ ಮಾಡಿ ಡಾ. ಬಿ. ಆರ್. ಅಂಬೇಡ್ಕರ್ ಮತ್ತು ಡಾ. ಬಾಬು ಜಗಜೀವನ್ ರಾಮ್ ಅವರ ದಿನಾಂಕ 19.05.2025 ರಂದು ಜರುಗುವ ಜಯಂತೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ಕೋರಲಾಯಿತು.
ಈ ಸಂದರ್ಭದಲ್ಲಿ ಜಯಂತೋತ್ಸವ ಸಮಿತಿ ಅಧ್ಯಕ್ಷರಾದ ಆಶನ್ನ ಬುದ್ಧ, ಉಪಾಧ್ಯಕ್ಷರು ಅಶೋಕ್ ಶನಿವಾರಂ, ಲಾಲಪ್ಪ ತಲಾರಿ, ಮಾಣಿಕ್ ಮುಕುಡಿ, ಕಾರ್ಯದರ್ಶಿಗಳು ಬಾಲಪ್ಪ ಕಟ್ಟೆಲ್, ಖಜಾನ್ಸಿ ಹನುಮಂತ ಮುಕಡಿ, ಶ್ರೀಕಾಂತ ತಲಾರಿ, ಶರಣಪ್ಪ ಲಕ್ಕಿ, ಭೀಮಶೆಪ್ಪ ಗುಡಿಸೆ, ಮಲ್ಲಿಕಾರ್ಜುನ್ ಸೈದಾಪುರ್, ಕಿಷ್ಟಪ್ಪ ಸೈದಾಪುರ್, ರಂಗಸ್ವಾಮಿ, ಭೀಮಶಪ್ಪ ಗಾಡದನ, ಕಾಶಪ್ಪ ಕಟ್ಟೆಲ್, ಬಿಎಸ್ ತಲಾರಿ, ನಾಗೇಶ್ ಚಂಡರಕಿ,ಇನ್ನಿತರ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ವರದಿ: ಜಗದೀಶ್ ಕುಮಾರ್
