ಬೆಳಗಾವಿ/ ಬೈಲಹೊಂಗಲ :
ಗ್ರಾಮೀಣ ಅಕುಶಲ ಕೂಲಿಕಾರ್ಮಿಕರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿಯೇ ಉದ್ಯೋಗ ಖಾತ್ರಿ ಯೋಜನೆಯನ್ನು ಅವಲಂಭಿಸಿದ್ದಾರೆ ಅಂತಹ ದುಡಿಯುವ ಕೈಗಳಿಗೆ ಮೇ-01 ರಿಂದ “ದುಡಿಯೋಣ ಬಾ ಅಭಿಯಾನ” ಪ್ರಾರಂಭವಾಗಿದೆ, ಕೂಲಿಕಾರರನ್ನು ಕೆಲಸಕ್ಕೆ ಕರೆತಂದು ಪ್ರಸ್ತುತ ಬೇಸಿಗೆ ಹೆಚ್ಚಾಗಿರುವುದರಿಂದ ಅಕುಶಲ ಕೂಲಿಕಾರರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಕಾಮಗಾರಿ ಸ್ಥಳದಲ್ಲಿಯೇ ಏರ್ಪಡಿಸಲಾಗಿದೆ ಎಂದು ತಾ.ಪಂ ಸಹಾಯಕ ನಿರ್ದೇಶಕರು (ಗ್ರಾ. ಉ) ವಿಜಯ ಪಾಟೀಲ ರವರು ದುಡಿಯೋಣ ಬಾ ಅಭಿಯಾನ ಹಾಗೂ ಆರೋಗ್ಯ ಶಿಬಿರವನ್ನು ಉದ್ದೇಶಿಸಿ ಮಾತನಾಡಿ ತಾಲೂಕಿನ 34 ಗ್ರಾಮ ಪಂಚಾಯತ್ ಹಾಗೂ 88 ಗ್ರಾಮಗಳಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ “ದುಡಿಯೋಣ ಬಾ ಅಭಿಯಾನ” ಪ್ರಯುಕ್ತ ಮನೆ ಮನೆಗೆ ಭೇಟಿ ನೀಡಿ ಕೆಲಸಕ್ಕೆ ಬಾರದೆ ಇರುವಂತಹ ಕುಟುಂಬಗಳಿಗೆ ಜಾಗೃತಿ ಮೂಡಿಸಿ ಅವರಿಂದ ನಮೊನೆ 6 ರಲ್ಲಿ ಬೇಡಿಕೆ ಸಲ್ಲಿಸಿರುವ ಅಕುಶಲ ಕೂಲಿಕಾರರಿಗೆ ನಿಗದಿತ ಸಮಯದಲ್ಲಿ ಕೆಲಸವನ್ನು ನೀಡುವುದರ ಜೊತೆಗೆ ಗ್ರಾಮ ಆರೋಗ್ಯ ಅಭಿಯಾನದಡಿಯಲ್ಲಿ “ಆರೋಗ್ಯವೇ ಭಾಗ್ಯ” ಎಂಬ ವಿನೂತನ ಕಾರ್ಯಕ್ರಮದಡಿಯಲ್ಲಿ ಎಲ್ಲಾ ನರೇಗಾ ಕೂಲಿಕಾರರಿಗೆ ಹಾಗೂ ಸಾರ್ವಜನಿಕರಿಗೂ ಒಂದು ತಿಂಗಳವರೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದೆ ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ವಿಜಯ ಪಾಟೀಲ ತಿಳಿಸಿದರು.
ತದ ನಂತರ, ನರೇಗಾ ಯೋಜನೆಯಡಿಯಲ್ಲಿ ಪ್ರತಿ ಅರ್ಹ ಕುಟುಂಬಕ್ಕೆ 100 ದಿವಸ ಕೆಲಸವನ್ನು ನೀಡಲಾಗಿದ್ದು ಅದರಂತೆ ಪ್ರತಿ ಮಾನವ ದಿನಕ್ಕೆ 370/- ರೂ. ಗಳನ್ನು ನಿಗಧಿಪಡಿಸಲಾಗಿದೆ ಮತ್ತು ಅತಿಯಾದ ಬೇಸಿಗೆ ಇರುವುದರಿಂದ ಮೇ ಮತ್ತು ಜೂನ್ ತಿಂಗಳಲ್ಲಿ ಕೆಲಸದ ಪ್ರಮಾಣದಲ್ಲಿ 30% ರಷ್ಟು ರಿಯಾಯಿತಿಯನ್ನು ಸಹ ನೀಡಿದೆ. ಇದರೊಂದಿಗೆ ವಿಶೇಷ ಚೇತನರು ಹಾಗೂ ಹಿರಿಯ ನಾಗರಿಕರು (65) ವರ್ಷ ಮೇಲ್ಪಟ್ಟವರು, ಗರ್ಭಿಣಿ ಮತ್ತು ಬಾಣಂತಿಯರಿಗೂ ಸಹ ರಿಯಾಯಿತಿಯನ್ನು ನೀಡಲಾಗಿದೆ ಎಂದು ಕರೆ ನೀಡಿದರು.
ಎಲ್ಲಾ ಕೂಲಿಕಾರ್ಮಿಕರು ಜೀವ ವಿಮೆಗಳಾದ ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ 436/- ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಭಿಮಾ ಯೋಜನೆ 20/- ರೂಗಳನ್ನು ರಾಷ್ಟ್ರೀಕೃತ ಬ್ಯಾಂಕಗಳಲ್ಲಿ ಪ್ರತಿ ವರ್ಷದಲ್ಲಿ ತುಂಬಿದರೆ ಆಕಸ್ಮಿಕ ಸಾವು ಹಾಗೂ ಅಪಘಾತಗಳಾಗಿರುವ ಸಂದರ್ಭದಲ್ಲಿ ಅವಲಂಬಿತ ಕುಟುಂಬಗಳಿಗೆ ಸಹಕಾರಿಯಾಗುತ್ತದೆ ಎಂದು ತಾ .ಪಂ ಐಇಸಿ ಸಂಯೋಜಕ ಎಸ್. ವ್ಹಿ. ಹಿರೇಮಠ ತಿಳಿಸಿದರು.
ಗ್ರಾ. ಪಂ ಸಂಪಗಾಂವ, ಉಡಿಕೇರಿ, ದೇವಲಾಪೂರ ಮತ್ತು ಭಾಂವಿಹಾಳ ದಲ್ಲಿ ಅಕುಶಲ ಕೂಲಿಕಾರರಿಗೆ ಉಚಿತ ಆರೋಗ್ಯ ತಪಾಸಣೆ ಮಾಡಲಾಯಿತು- ಒಟ್ಟು 805 ಜನರು ಸದುಪಯೊಗ ಪಡೆದುಕೊಂಡರು.
ಇದೇ ಸಂದರ್ಭದಲ್ಲಿ ಗ್ರಾ. ಪಂ ಅಭಿವೃದ್ಧಿ ಅಧಿಕಾರಿ ದೊಡ್ಡನಾಯ್ಕ ರಾಯನಾಯ್ಕರ, ತಾ. ಪಂ ಸಿಬ್ಬಂದಿ ಎಸ್ ವ್ಹಿ ಹಿರೇಮಠ, ನಾಗರಾಜ್ ಯರಗುದ್ದಿ, ಆರೋಗ್ಯ ಇಲಾಖೆಯ ಶ್ರೀಮತಿ ಶ್ರೀದೇವಿ ಕುಂದಿಸಿ (ಪ್ರಾಥಮಿಕ ಸುರಕ್ಷಾಣಧಿಕಾರಿಗಳು) ಆನಂದ ತೋಳಿ (ಎನ್ ಸಿ ಡಿ ಆಪ್ತ ಸಮಾಲೋಚಕರು) ಶ್ರೀಮತಿ ಮಹಾದೇವಿ ಪಟ್ಟೇದ ( ಪ್ರಯೋಗ ಶಾಲಾ ತಂತ್ರಜ್ಞಾನರು) ಶಿವಪುತ್ರ ಎ ಕರಿಗಾರ ಎನ್ ಸಿ ಡಿ ವಿಭಾಗ ಗಣಕಯಂತ್ರ ಸಹಾಯಕರು ಮತ್ತು ಗ್ರಾಪಂ ಸಿಬ್ಬಂದಿಗಳು ಶಾನುರ ರುದ್ರಾಪೂರ, ಮೈಲಾರ ದೇಗಾಂವಿ ನಾಗಪ್ಪ ಮಲ್ಲಾಡಿ ಹಾಗೂ ನರೇಗಾ ಮೇಟಿಗಳು ಮತ್ತು ಕೂಲಿಕಾರ್ಮಿಕರು ಹಾಜರಿದ್ದರು.
ವರದಿ : ಭೀಮಸೇನ ಕಮ್ಮಾರ
