
ಬಾಗಲಕೋಟೆ : ಸಮುದಾಯದ ಜೊತೆಗೆ ಇತರ ಸಮಾಜಕ್ಕೂ ಅನುಕೂಲವಾಗುವ ಕಾರ್ಯಗಳನ್ನು ರೆಡ್ಡಿ ಸಮಾಜ ಮಾಡಬೇಕು ಅಂದಾಗಲೇ ನಮ್ಮ ಸಮಾಜ ಎಲ್ಲರ ವಿಶ್ವಾಸ ಗಳಿಸುತ್ತದೆ ಎಂದು ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಭಾನುವಾರ ಜಿಲ್ಲೆಯ ಬಾಗಲಕೋಟೆ ತಾಲೂಕಿನ ಶಿರೂರ ಪಟ್ಟಣದಲ್ಲಿ ಹೇಮರಡ್ಡಿ ಮಲ್ಲಮ್ಮ ವಿಕಾಸ ಸಂಸ್ಥೆಯ ಅಡಿಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ನಾವೂ ಬೆಳೆದು ಇತರರನ್ನೂ ಬೆಳೆಸುವ ಕೆಲಸವನ್ನು ರೆಡ್ಡಿ ಸಮಾಜ ಹಿಂದಿನಿ೦ದಲೂ ಮಾಡುತ್ತಾ ಬಂದಿದ್ದು ಆ ಪರಂಪರೆಯನ್ನು ಉಳಿಸಿಕೊಂಡು ಹೋಗಬೇಕು
ದೇವಸ್ಥಾನ ಕಲ್ಯಾಣ ಮಂಟಪ, ಶಾಲೆ- ಕಾಲೇಜು ಆರಂಭಿಸಿ. ಅವು ನಮ್ಮ ಸಮಾಜದ ಜೊತೆ ಬೇರೆ ಸಮಾಜದ ಜನರಿಗೂ ಅನುಕೂಲವಾಗುವಂತೆ ಮಾಡಬೇಕು ಶಾಲೆ ಹಾಸ್ಟೆಲ್ ತೆರೆದು ಎಲ್ಲಾ ಸಮುದಾಯದ ಮಕ್ಕಳಿಗೂ ಅದರಲ್ಲೂ ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳಿಗೆ ಅನುಕೂಲತೆ ಕಲ್ಪಿಸಬೇಕು ಎಂದು ಅವರು ಹೇಳಿದರು. ಸಮಾಜವನ್ನು ಒಗ್ಗೂಡಿಸುವ ಕಾರ್ಯದೊಂದಿಗೆ ದೇವಸ್ಥಾನ ನಿರ್ಮಾಣಕ್ಕೆ ಸಹಾಯ ಮಾಡಿದ ದಾನಿಗಳ ಹೆಸರನ್ನು ಶಾಶ್ವತವಾಗಿ ಉಳಿಸುವ ಕೆಲಸವನ್ನು ಸಂಸ್ಥೆ ಮಾಡಬೇಕು ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ ಮಾತನಾಡಿ ಹೇಮರಡ್ಡಿ ಮಲ್ಲಮ್ಮ ಮನುಕುಲದ ಉದ್ಧಾರಕ್ಕೆ ಬದುಕಿ ಬಾಳಿದವರು ಉದ್ಧಾರಕ್ಕೆ ಬದುಕಿ ಬಾಳಿದವರು ಅವರ ಆದರ್ಶಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಂಡು ಜೀವನ ಸಾಗಿಸಿದರೆ ನೆಮ್ಮದಿಯ ಬದುಕು ಪ್ರಾಪ್ತವಾಗುತ್ತದೆ ಎಂದರು.
ವೇಮನ ವಿದ್ಯಾಮಂದಿರದ ಆಂಗ್ಲ ಮಾಧ್ಯಮ ಶಾಲೆಯ ಭೂಮಿಪೂಜೆ ನೆರವೇರಿಸಿದ ಮಾಜಿ ಸಚಿವ ಎಸ್. ಆರ್. ಪಾಟೀಲ ಮಂದಿರ ಕಟ್ಟಿದರೆ ಸಾಲದು ಮಹನೀಯರ ತತ್ವಾದರ್ಶ ಪಾಲಿಸಿ ನಡೆಯಬೇಕು ಆಗಲೇ ಅದು ಅರ್ಥಪೂರ್ಣವಾಗುತ್ತದೆ ಎಂದು ಹೇಳಿದರು.
ಶಾಸಕ ಎಚ್. ವೈ .ಮೇಟಿ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿದರು, ಸಾನಿಧ್ಯ ವಹಿಸಿದ್ದ ಎರೆಹೊಸರ್ಳಳಿಯ ವೇಮನಾನಂದ ಸ್ವಾಮೀಜಿ, ಮಲ್ಲಮ್ಮನ ದೇವಸ್ಥಾನದ ಪಾವಿತ್ರ್ಯವನ್ನು ನಿರಂತರವಾಗಿ ಕಾಪಾಡಿಕೊಂಡು ಹೋಗಬೇಕು. ಪ್ರತಿ ಸೋಮವಾರ ಮಹಿಳೆಯರು ಸತ್ಸಂಗ ಹಮ್ಮಿಕೊಳ್ಳಬೇಕು ಸಂಸ್ಥೆ ಕೈಗೊಳ್ಳುವ ಕಾರ್ಯಗಳಿಗೆ ದಾನ ನೀಡಿ ಭಾವನಾತ್ಮಕ ಸಂಬ೦ಧ ಹೊಂದಬೇಕು ಎಂದರು.
ಹೇಮರಡ್ಡಿ ಮಲ್ಲಮ್ಮ ವಿಕಾಸ ಸಂಸ್ಥೆಯ ಅಧ್ಯಕ್ಷ ರವಿಕುಮಾರ ಗಿರಿಜಾ ಅಧ್ಯಕ್ಷ ರವಿಕುಮಾರ ಗಿರಿಜಾ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಎನ್. ಎಚ್. ಶಿವಶಂಕರರೆಡ್ಡಿ ಗುಗಂಜಿ ಕಲ್ಯಾಣ ಮಂಟಪದ ಭೂಮಿಪೂಜೆ ನೆರವೇರಿಸಿದರು. ಬೀಳಗಿ ಶಾಸಕ ಜೆ.ಟಿ. ಪಾಟೀಲ ಉದ್ಘಾಟಿಸಿದರು.
ಗುಳೇದಗುಡ್ಡದ ಒಪ್ಪತ್ತೇಶ್ವರ, ಲೋಪಾಪುರದ ಬಸವಪ್ರಭು ಸಾಮೀಜಿ, ಮುರನಾಳದ ಜಗನ್ನಾಥ ಸ್ವಾಮೀಜಿ ಬಿಡಿಸಿಸಿ ಬ್ಯಾಂಕ ಅಧ್ಯಕ್ಷ ಅಜಯಕುಮಾರ ಸರನಾಯಕ ಭೂದಾನಿಗಳಾದ ಮಲ್ಲಮ್ಮ ಗುಲಗಂಜಿ ಸಾವಿತ್ರಿ ಕೆಂಪಲಿ೦ಗನ್ನವರ ಮೆಲೋಬಶುಗರ್ಸ ಅಧ್ಯಕ್ಷ ಶಿವಾನಂದ ಮೆಳ್ಳಿಗೇರಿ ದೇವೇಂದ್ರಗೌಡ ಮೂಕನಗೌಡ್ರ ನಾರಾಯಣ ಹಾದಿಮನಿ ವೆಂಕಟೇಶಕೇರಿ ಮಲ್ಲನಗೌಡ ಪಾಟೀಲ ತಮ್ಮಣ್ಣ ಗಿರಿಜಾ, ಅಶೋಕ ಮಾಚಾ ಡಾ. ಶೈಲೇಶ ಎಮ್ಮಿ ಸಂಸ್ಥೆಯ ನಿರ್ದೇಶಕ ಎಸ್.ಬಿ. ಮಾಚಾ ಸಂಜಯ ನಡುವಿನಮನಿ ಬಿ.ಎಂ.ಪಾಟೀಲ ಇದ್ದರು.ಇದೇ ಸಂದರ್ಭದಲ್ಲಿ ದಾನಿಗಳನ್ನು, ಸಮಾಜದ ನಿವೃತ್ತ ಸೈನಿಕರನ್ನು ಸನ್ಮಾನಿಸಲಾಯಿತು.
- ಕರುನಾಡ ಕಂದ
