ಚಿತ್ರದುರ್ಗ : ವಿರಾಟ್ ಕೊಹ್ಲಿ ಕಟೌಟ್ ಎದುರು ಮೇಕೆ ಬಲಿ ನೀಡಿ ಆರ್.ಸಿ.ಬಿ (RCB) ಅಭಿಮಾನಿಗಳಿಂದ ಹುಚ್ಚಾಟ ಮೆರೆದಿರುವಂತಹ ಘಟನೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಮಾರಮ್ಮನಹಳ್ಳಿ ನಡೆದಿದೆ. ಸಿಎಸ್ಕೆ ವಿರುದ್ಧ ಆರ್ಸಿಬಿ ಗೆಲುವು ಹಿನ್ನೆಲೆ ಮೇಕೆ ಬಲಿ ನೀಡಲಾಗಿದೆ.
20 ಸೆಕೆಂಡುಗಳ ವೀಡಿಯೊದಲ್ಲಿ, ಒಬ್ಬ ವ್ಯಕ್ತಿ ಕೊಹ್ಲಿಯ ಕಟೌಟ್ನ ಮುಂದೆ ಮೇಕೆಯನ್ನು ಹಿಡಿದಿರುವುದನ್ನು ಕಾಣಬಹುದು. ಮತ್ತೊಬ್ಬ ವ್ಯಕ್ತಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ವಿರುದ್ಧ ಆರ್ಸಿಬಿ ಜಯ ಸಾಧಿಸಿದೆ ಎಂದು ಘೋಷಿಸುತ್ತಿದ್ದಂತೆ, ಆ ಪ್ರಾಣಿಯನ್ನು ಮಚ್ಚಿನಿಂದ ವಧಿಸಿ, ಅದರ ರಕ್ತವನ್ನು ಕೊಹ್ಲಿಯ ಕಟೌಟ್ ಮತ್ತು ಪೋಸ್ಟರ್ಗೆ ರಕ್ತಾಭಿಷೇಕ (ರಕ್ತ ಅರ್ಪಣೆ) ವಾಗಿ ಅರ್ಪಿಸಲಾಗುತ್ತದೆ. ಮೂರನೇ ವ್ಯಕ್ತಿ ಮೇಕೆಯನ್ನು ಹಗ್ಗದಿಂದ ಹಿಡಿದಿರುವುದನ್ನು ಕಾಣಬಹುದು.
ವಿಡಿಯೋ ಕೂಡಾ ವೈರಲ್ ಆಗಿದೆ. ಇದರ ಬೆನ್ನಲ್ಲೇ ಸಣ್ಣ ಪಾಲಯ್ಯ (22 ವರ್ಷ), ಜಯಣ್ಣ (23 ವರ್ಷ) ಮತ್ತು ತಿಪ್ಪೆ ಸ್ವಾಮಿ (28 ವರ್ಷ) ಎಲ್ಲರೂ ಮಾರಮ್ಮನಹಳ್ಳಿ ನಿವಾಸಿಗಳು, ಎಂಬುವವರನ್ನು ಪೊಲೀಸರು ಬಧಿಸಿದ್ದು, ಮೊಳಕಾಲ್ಮೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ : ಜಿಲಾನಸಾಬ್ ಬಡಿಗೇರ್
