
ಬಳ್ಳಾರಿ / ಕುರುಗೋಡ : ಸಮೀಪದ ಸಿಂಧಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಡಿ ಕಾಲುವೆಗೆ ಹೂಳು ಎತ್ತುವ ಕಾಮಗಾರಿ ಸ್ಥಳಕ್ಕೆ ತಾಲೂಕು ಪಂಚಾಯಿತಿ ಅಧಿಕಾರಿಗಳು ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸಹಾಯಕ ನಿರ್ದೇಶಕ ಶಿವರಾಮ ರೆಡ್ಡಿ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಮೂಲ ಸೌಕರ್ಯ ಕಲ್ಪಿಸುವುದು ಗುಳೆ ತಪ್ಪಿಸಲು ಉದ್ಯೋಗ ಸೃಷ್ಟಿಸಿರುವ ಉದ್ದೇಶದಿಂದ ಮನರೇಗಾ ಯೋಜನೆ ರೂಪಿಸಲಾಗಿದೆ ಮನರೇಗಾ ಗ್ರಾಮೀಣ ಪ್ರದೇಶದಲ್ಲಿ ಹಲವು ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.
ತಾಂತ್ರಿಕ ಸಂಯೋಜಕ ಮಲ್ಲಿಕಾರ್ಜುನ, ಎಂಇಎಸ್ ಸಂಯೋಜಕೀ ಮುಕ್ತ, ಐಇಸಿ ಸಂಯೋಜಕ ಚಂದ್ರಶೇಖರ, ತಾಂತ್ರಿಕ ಸಹಾಯಕ ಎರಿಸ್ವಾಮಿ, ಆಡಳಿತ ಸಹಾಯಕ ಕನಕಪ್ಪ, ಸೋಮಲಿಂಗಪ್ಪ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಕಾಳಿಂಗಪ್ಪ, ಕರ ವಸಲಿಗಾರ ಸೇರಿದಂತೆ ಇತರರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್
