
ಬಳ್ಳಾರಿ / ಎಮ್ಮಿಗನೂರಿನ : ಆಪರೇಷನ್ ಸಿಂಧೂರದ ವಿಜಯೋತ್ಸವವನ್ನು ಆಚರಿಸಿ ಅಂಬೇಡ್ಕರ್ ವಿಚಾರವಾದಿ ಪಂಪಾಪತಿ ಹೆಚ್. ಮಾತನಾಡಿ
ಪಹಲ್ಗಾಮ್ ಕ್ರತ್ಯಕ್ಕೆ ಪ್ರತೀಕಾರವಾಗಿ ಪಾಕಿಸ್ತಾನದ ಉಗ್ರರ ನೆಲೆಗಳ ಮೆಲೆ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆಗೆ ಇಡೀ ದೇಶದ ಜನ ಮನತುಂಬಿ ಬೆಂಬಲಿಸಿದ್ದಾರೆ.
ಪಹಲ್ಗಾಮ್ ಪ್ರತೀಕಾರವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರಮೋದಿಯವರು ಪಾಕಿಸ್ತಾನಕ್ಕೆ ಭಾರತೀಯ ತಾಕತ್ತು ಏನು? ಎಂಬುದನ್ನು ತೋರಿಸಿದ್ದಾರೆ ಹಾಗೂ ಭಾರತದ ಜನರು ಅನುಭವಿಸಿದ ಎಲ್ಲಾ ಸಾವು ನೋವುಗಳಿಗೆ ನ್ಯಾಯ ಸಿಕ್ಕಿದೆ. ಕೇಂದ್ರ ಸರಕಾರದ ನಿರ್ಧಾರದಿಂದ ಭಾರತದ ಸೈನಿಕರಿಗೆ ಶಕ್ತಿ ಬಂದಿದೆ. ದೇಶದಲ್ಲಿ ಶಾಂತಿ ಕದಡುವ ದುಷ್ಟರಿಗೆ ನಮ್ಮ ಭಾರತ ದೇಶದ ಸೈನಿಕರು ತಕ್ಕ ಉತ್ತರವನ್ನು ನೀಡಿದ್ದಾರೆ.
ಪ್ರಪಂಚದಾದ್ಯಂತ ಉಗ್ರರು ಎಲ್ಲೇ ಇದ್ದರೂ ಅಂತವರನ್ನು ಹುಡುಕಿ ನಿರ್ಧಾಕ್ಷಿಣ್ಯವಾಗಿ ಹೊಡೆದು ಹಾಕಬೇಕು. ಕಾಶ್ಮೀರದಿಂದ ಕನ್ಯಾ ಕುಮಾರಿಯ ವರೆಗೂ ಉಚಿತವಾಗಿ ಊಟ ಹಾಕುವ ಸಾಧು ಸಂತರ ದೇಶ ನಮ್ಮ ಭಾರತ. ಇದೇ ಕಾರಣಕ್ಕೆ ಇಡಿ ಪ್ರಪಂಚದಲ್ಲಿ ಭಾರತಕ್ಕೆ ವಿಶೇಷ ಸ್ಥಾನಮಾನವಿದೆ. ಇಂತಹ ಬಲಿಷ್ಟ ಭಾರತದ ಮೇಲೆ ಯಾರು ಸುಮ್ಮನೆ ದಾಳಿ ಮಾಡುವುದಿಲ್ಲ. ಭಾರತದ ಸೈನ್ಯದ ಶಕ್ತಿ ಎಲ್ಲಾರಿಗೂ ತಿಳಿದಿದೆ. ಆಪರೇಷನ್ ಸಿಂಧೂರ ಆ ಹೆಸರಿನಲ್ಲಿ ಒಂದು ಶಕ್ತಿ ಇದೆ. ಪ್ರಪಂಚದ ಯಾವುದೇ ಭಾಗದಲ್ಲಿರುವ. ಯಾವುದೇ ಧರ್ಮದ ಭಯೋತ್ಪಾದಕರಿಗೆ ಇದು ಒಂದು ತಕ್ಕ ಪಾಠವಾಗಿದೆ.
ಶತ್ರು ನಾಶಕ್ಕಿಂತ ಶತ್ರುತ್ವ ನಾಶ ಆಗಬೇಕು ಎಂದು ಹೇಳಿದರು.
ಭಾರತ ಸೈನ್ಯ ನೆಡೆಸಿದ ಆಪರೇಷನ್ ಸಿಂಧೂರ ಪ್ರತೀಕಾರದ ದಾಳಿಗೆ ಎಮ್ಮಿಗನೂರು ಗ್ರಾಮದ ಶ್ರೀ ಆಂಜನೇಯ ದೇವಸ್ಥಾನದ ಮುಂಭಾಗದಲ್ಲಿ ಎಮ್ಮಿಗನೂರು ಗ್ರಾಮದ ಸಮಸ್ತ ಎಲ್ಲಾ ಧರ್ಮದ ಮುಖಂಡರು ಹಾಗೂ ಸಾರ್ವಜನಿಕರು ಆಪರೇಷನ್ ಸಿಂಧೂರದ ವಿಜಯೋತ್ಸವವನ್ನು ಆಚರಿಸಿದರು.
ಈ ಸಂದರ್ಭದಲ್ಲಿ ಸೂಗಪ್ಪಧಣಿ, ಹನುಮಂತರೆಡ್ಡಿ ಬಡಿಗೇರ್, ವೀರೇಶ್, ರಾಜೇಶ್ ಆಚಾರ್ಯ, ಗಾದ್ಲಿ ನಾಗರೆಡ್ಡಿ, ಅಂಗಡಿ ಕಿಶೋರ್ ಕುಮಾರ್, ಎಸ್.ರಾಮಪ್ಪ, ದಿವಾಕರ ರೆಡ್ಡಿ, ಟಿ.ರಾಮಪ್ಪ, ಸದಾಶಿವಪ್ಪ ಇತರರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್
