
ಬಲ್ಲರಿ / ಕುರುಗೋಡು : ಪಟ್ಟಣದ ಬಳ್ಳಾರಿ ರಸ್ತೆಯ ಶ್ರೀ ಯಲ್ಲಮ್ಮ ದೇವಿ ದೇವಸ್ಥಾನದಿಂದ ಸವದತ್ತಿ ಶ್ರೀ ಎಲ್ಲಮ್ಮ ದೇವಿ ದೇವಸ್ಥಾನದವರೆಗೂ ಪ್ರಥಮ ವರ್ಷದ ಭಕ್ತರ ಪಾದಯಾತ್ರೆಯನ್ನು ಮೇ 9ರಂದು ಬೆಳಿಗ್ಗೆ ಹಮ್ಮಿಕೊಳ್ಳಲಾಗಿದೆ ಎಂದು ಕುರುಗೋಡು ಮತ್ತು ಶ್ರೀ ಯಲ್ಲಮ್ಮ ದೇವಿ ಹೇಳಿದರು ಅವರು ಪಟ್ಟಣದ ಬಳ್ಳಾರಿ ರಸ್ತೆಯಲ್ಲಿನ ಯಲ್ಲಮ್ಮ ದೇವಿ ದೇವಸ್ಥಾನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಿಯ ಪ್ರಥಮ ವರ್ಷದ ಪಾದಯಾತ್ರೆಯನ್ನು ಮಾಡಬೇಕೆಂದು ಹಲವು ವರ್ಷಗಳ ಸಂಕಲ್ಪವಾಗಿತ್ತು ಆ ಸಂಕಲ್ಪ ಎಂದು ಕೂಡಿಬಂತು ಎಂದು ನುಡಿದರು.
ಪ್ರಥಮ ವರ್ಷದ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಬಾನಟ್ಟಿ ಮತ್ತು ಕುರುಗೋಡು ಭಕ್ತರ ಪರಿಶ್ರಮ ಬಹಳಷ್ಟಿದೆ ಎಂದು ನುಡಿದರು. ಆದ್ದರಿಂದ ಶ್ರೀ ರೇಣುಕಾ ಯಲ್ಲಮ್ಮ ದೇವಿ ಪಾದಯಾತ್ರೆಯಲ್ಲಿ ಹೆಚ್ಚಿನ ಭಕ್ತಾದಿಗಳು ಭಾಗವಹಿಸಿ ಶ್ರೀ ರೇಣುಕಾ ಯಲ್ಲಮ್ಮ ದೇವಿಯ ಕೃಪಾ ಆಶೀರ್ವಾದ ಪಡೆದುಕೊಳ್ಳಬೇಕೆಂದು ಮಾತೃಶ್ರೀ ಯಲ್ಲಮ್ಮ ತಾಯಿ ಕರೆ ನೀಡಿದರು.
ವರದಿ : ಜಿಲಾನಸಾಬ್ ಬಡಿಗೇರ್
