
ಕೊಪ್ಪಳ/ ಗಂಗಾವತಿ: ತಾಲೂಕಿನ ಡಣಾಪೂರ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ಜಯಂತಿಯನ್ನು ಪೂರ್ಣ ಕುಂಭದೊಂದಿಗೆ ಅಮ್ಮನವರನ್ನು ಡಣಾಪೂರ ಗ್ರಾಮದ ಆರಾದ್ಯ ದೈವವಾಗಿರುವ ಶ್ರೀ ಮಾರುತೇಶ್ವರ ದೇವಸ್ಥಾನದಿಂದ ರಾಜ ಬೀದಿಯಲ್ಲಿ ಶ್ರೀ ಎದುರು ಮಾರುತೇಶ್ವರ ದೇವಸ್ಥಾನದವರೆಗೆ ಸಕಲ ವಾದ್ಯವೃಂದದಿಂದ ಹಾಗೂ ಭಕ್ತಿ ಹಾಡುಗಳನ್ನು ಭಜನೆ ಮುಖಾಂತರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವರೆಗೆ ಮೆರವಣಿಗೆ ಸಾಗಿತು. ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀವಾಸವಿ ಕನ್ನಿಕಾ ಪರಮೇಶ್ವರಿಗೆ ವಿಶೇಷ ಪೂಜಾ ಕಾರ್ಯಕ್ರಮದೊಂದಿಗೆ ವಾಸವಿ ಜಯಂತಿಯನ್ನು ಭಕ್ತಿ ಭಾವದಿಂದ ಆಚರಿಸಲಾಯಿತು.
ಈ ವೇಳೆಯಲ್ಲಿ ಶ್ರೀ ವಾಸವಿ ಯುವ ಜನ ಸಂಘ ಡಣಾಪುರದ ಮುತ್ತುರಾಜ ಶೆಟ್ಟಿ , ಗುರುರಾಜ ಶಟ್ಟಿ , ಪ್ರಹ್ಲಾದ್ ಶಟ್ಟಿ ,ರಾಘವೇಂದ್ರ ಪೂರ್ಮ , ಕೆ ಎಸ್ ರಾಜು ಶಟ್ಟಿ , ವೀರೇಶ ಪೂರ್ಮ , ದತ್ತು ಅಯೋದ್ಯ , ಸುರೇಶ ಶಟ್ಟಿ ಹೆಬ್ಬಾಳ , ಶ್ರೀನಿವಾಸ ಶಟ್ಟಿ , ವಿಶ್ವನಾಥ ಪೂರ್ಮ ಸೇರಿದಂತೆ ಇತರರು ಭಾಗಿಯಾಗಿದ್ದರು.
ವರದಿ : ಹನುಮೇಶ ಭಾವಿಕಟ್ಟಿ
