
ಬಳ್ಳಾರಿ / ಕಂಪ್ಲಿ : ಆಪರೇಷನ್ ಸಿಂಧೂರ ಮೂಲಕ ಭಾರತೀಯ ಸೇನೆ ಉಗ್ರರ ನೆಲೆಗಳ ಮೇಲೆ ಯಶಸ್ವಿ ದಾಳಿ ನಡೆಸಿದ ಹಿನ್ನೆಲೆಯಲ್ಲಿ ನಗರದ ಅಂಬೇಡ್ಕರ್ ವೃತ್ತದಲ್ಲಿ ಬಿಜೆಪಿ ವತಿಯಿಂದ ಸಂಭ್ರಮಾಚರಣೆ ನಡೆಸಲಾಯಿತು.
ಬಿಜೆಪಿ ನಗರ ಘಟಕ ಅಧ್ಯಕ್ಷ ಮುರಳಿ ಮೋಹನ್ ರೆಡ್ಡಿ ಮಾತನಾಡಿ ಕಾಶ್ಮೀರದ ಪೆಹಲ್ಗಮ್ ಗೆ ಪ್ರವಾಸಕ್ಕೆಂದು ತೆರಳಿದ ಪ್ರವಾಸಿಗರ ಮೇಲೆ ಪಾಕಿಸ್ತಾನ ಉಗ್ರರು ನಡೆಸಿದ ನರಮೇದಕ್ಕೆ ಹಿಡಿ ಭಾರತವೇ ದುಃಖ ಪಟ್ಟಿತ್ತು. ಅಲ್ಲದೆ ಎಲ್ಲೆಡೆ ಪ್ರತಿಕಾರದ ಕೂಗಿ ಮುಗಿಲೆದ್ದಿತ್ತು ಭಾರತೀಯ ನಾಗರಿಕರ ಗುಡಿಯಾಗಿಸಿಕೊಂಡು ಅವರ ಪತ್ನಿಯರ ಸಿಂಧೂರ ಅಳಿಸಿದ ಉಗ್ರರಿಗೆ ಆಪರೇಷನ್ ಸಿಂಧೂರ್ ಹೆಸರಿನಲ್ಲಿಯೇ ಪ್ರತಿಕಾರವನ್ನು ಪ್ರತೀಕಾರದ ದಾಳಿಯನ್ನು ಸೇನೆ ನಡೆಸಿ ಪಿಓಕೆ ಯ ಒಂಬತ್ತು ಸ್ಥಳಗಳಲ್ಲಿ ಬೀಡು ಬಿಟ್ಟಿದ್ದ ಉಗ್ರರ ನೆಲೆಗಳನ್ನು ಧ್ವಂಸ ಗೊಳಿಸಿದ್ದು ಇಡೀ ದೇಶವೇ ಖುಷಿಪಡುವ ವಿಚಾರವಾಗಿದೆ ಈ ಮೂಲಕ ನರೇಂದ್ರ ಮೋದಿಜಿಯವರು ಉಗ್ರರನ್ನು ಮಟ್ಟ ಹಾಕಲು ಇರಿಸಿದ ದಿಟ್ಟ ಹೆಜ್ಜೆ ಭಯೋತ್ಪಾದಕತೆಯನ್ನು ಹಾಗೂ ಉಗ್ರವಾದವನ್ನು ಭಾರತ ಎಂದಿಗೂ ಸಹಿಸುವುದಿಲ್ಲ ಎಂಬ ಸಂದೇಶವನ್ನು ಜಗತ್ತಿಗೆ ನೀಡಿದ್ದಾರೆ ಎಂದರು. ಬಳಿಕ ಕಾರ್ಯಕರ್ತರಿಗೆ ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಎನ್. ರಾಮಾಂಜನೇಯಲು, ಟಿ.ವಿ. ಸುದರ್ಶನರೆಡ್ಡಿ, ಆರ್. ಆಂಜನೇಯ, ಹೂಗಾರ್ ರಮೇಶ, ಪ್ರಮುಖರಾದ ಬಿ. ಬ್ರಹ್ಮಯ್ಯ, ಭಾಸ್ಕರ ರೆಡ್ಡಿ, ಎಂ. ಚಂದ್ರಕಾಂತ ರೆಡ್ಡಿ, ಡಿ. ಶ್ರೀಧರ ಶೆಟ್ಟಿ, ಅಗಳಿ ಪಂಪಾಪತಿ, ಡಿ. ದೇವೇಂದ್ರ, ಜೆ ಶ್ರೀನಿವಾಸ ಸತ್ಯನಾರಾಯಣ ಶೆಟ್ಟಿ, ಯು. ಎಂ. ವಿದ್ಯಾಶಂಕರ, ಶರಣಪ್ಪ, ವಿರುಪಾಕ್ಷಿ ಸೇರಿದಂತೆ ಬಿಜೆಪಿ ಬಿಜೆಪಿ ಮುಖಂಡರು ಸೇರಿದಂತೆ ಕಾರ್ಯಕರ್ತರು ಹಾಜರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್
