
ಯಾದಗಿರಿ/ ಗುರುಮಠಕಲ್ : ತಾಲೂಕಿನ ಎಂ ಟಿ ಪಲ್ಲಿ ಗ್ರಾಮದಲ್ಲಿ ನಡೆದ ಒಳಮೀಸಲಾತಿ ಸಮೀಕ್ಷೆಗೆ ಬಂದಿರುವ ಅಧಿಕಾರಿಗಳಿಗೆ ಮಾಹಿತಿ ನೀಡಿ, ತಾಲೂಕಿನ ಎಲ್ಲಾ ಮಾದಿಗ ಸಮಾಜದ ಕುಲಬಾಂಧವರು ದಯವಿಟ್ಟು ಒಳಮೀಸಲಾತಿ ಜಾರಿಗೊಳಿಸಲು ಸಮೀಕ್ಷೆಗೆ ತಮ್ಮ ಮನೆಗೆ ಬಂದಾಗ ತಾವುಗಳು ಕ್ರಮ. ಸಂಖ್ಯೆ : 61 ರಲ್ಲಿ ಪರಿಶಿಷ್ಟ ಜಾತಿ ಮಾದಿಗ ಎಂದು ಬರೆಯಿಸಬೇಕು ಎಂದು ಹೇಳಿದರು.
ಎಮ್. ಟಿ. ಪಲ್ಲಿ ಗ್ರಾಮದ ಮಾದಿಗ ಸಮಾಜದ ಎಲ್ಲಾ ಹಿರಿಯರು, ಯುವಕರು ಸಮಾಜ ಸೇವಕರು ವಿದ್ಯಾವಂತರು ಖುದ್ದಾಗಿ ಒಂದುಗೂಡಿ ಮನೆ ಮನೆಗೆ ತೆರಳಿ ಸರಿಯಾದ ಮಾಹಿತಿ ನೀಡಬೇಕು ಹಾಗೂ ಸಮೀಕ್ಷೆ ಮಾಡಲು ಬಂದ ಸರ್ಕಾರಿ ನೌಕರರಿಗೆ ಬಹಳ ಸೂಕ್ಷ್ಮವಾಗಿ ವಿನಯದಿಂದ ಸ್ವಾಗತಿಸಬೇಕು ಎಂದು ವಿನಂತಿ ಮಾಡಿಕೊಂಡರು.
ಯಾರಾದರೂ ಬೆಂಗಳೂರು, ಪುಣೆ, ಮುಂಬೈ, ಮಹಾರಾಷ್ಟ್ರಕ್ಕೆ ಹೋಗಿದ್ದರೆ ಅವರಿಗೆ ಕರೆ ಮಾಡಿ ತಿಳಿಸಿ ಕುಟುಂಬದ ಒಬ್ಬ ಸದ್ಯಸರು ಆದರೂ ಬರೋದಕ್ಕೆ ಹೇಳಿ…ಆದಷ್ಟು ಎಲ್ಲರ ಗಮನಕ್ಕೆ ತಂದು ಸಮೀಕ್ಷೆಗೆ ಸಹಕಾರ ನೀಡಲು ತಿಳಿಸಿದರು.
ಕ್ರಮ. ಸಂಖ್ಯೆ : 61 ರಲ್ಲಿ ಪರಿಶಿಷ್ಟ ಜಾತಿ ಮಾದಿಗ ಎಂದು ಬರೆಸಬೇಕು, ಯಾವುದೇ ಕಾರಣಕ್ಕೂ ಮಾದರ, ಹರಿಜನ ಮಾತಂಗಿ ಆದಿ ಕರ್ನಾಟಕ ಆದಿ ದ್ರಾವಿಡ ಆದಿ ಜಾಂಭವ ಎಂದು ಯಾರೂ ಇತರೆ ಬರೆಸ ಬೇಡಿ ಎಂದು ಮನವಿ ಮಾಡಿಕೊಂಡರು.
ವರದಿ: ಜಗದೀಶ್ ಕುಮಾರ್ ಭೂಮಾ
