
ಮೈಸೂರಿನಲ್ಲಿರುವ ಅನಧಿಕೃತ ಪಿಜಿ ಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ಮನವಿ ಮಾಡಿದ್ದಾರೆ.
ಮೈಸೂರು ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಪಿಜಿ ಗಳ ಸಂಖ್ಯೆ ಹೆಚ್ಚುತ್ತಲೇ ಇದೆ ವಿಶೇಷವಾಗಿ ಹೊರ ರಾಜ್ಯಗಳಿಂದ ಬರುವವರು ಹೆಚ್ಚಾಗಿ ಪಿಜಿಗಳನ್ನು ಬಳಸುತ್ತಿದ್ದಾರೆ.
ಕೆಲವರು ಹಣದ ಆಸೆಗಾಗಿ ನಿಯಮಗಳನ್ನು ಮೀರಿ ಮನೆಗಳನ್ನೆ ಬಾಡಿಗೆಗೆ ಪಡೆದು ಪಿಜಿ ಗಳಾಗಿ ಬದಲಾಯಿಸುತ್ತಾರೆ ಎಂದು ತೇಜಸ್ವಿ ಆರೋಪಿಸಿದ್ದಾರೆ.
ಈಗಾಗಲೇ ರಾಜ್ಯದ ಹಲವು ಭಾಗಗಳಲ್ಲಿ ಪಿಜಿ ಗಳಿಗೆ ನುಗ್ಗಿ ಹತ್ಯೆ ಮತ್ತು ಹಲ್ಲೆಯಾಗಿರುವ ಪ್ರಕರಣಗಳಿವೆ.
ನಿಯಮಾನುಸಾರ ಪಿಜಿ ನಡೆಸಬೇಕಾದರೆ ಇರಬೇಕಾದ ರೂಲ್ಸ್ ಗಳೆಂದರೆ ಕಡ್ಡಾಯವಾಗಿ ನಗರ ಪಾಲಿಕೆಯಿಂದ ಪರವಾನಿಗೆ ಪಡೆದಿರಬೇಕು ಮತ್ತು ಸ್ಥಳೀಯ ಪೋಲಿಸ್ ಠಾಣೆಗೆ ಮಾಹಿತಿ ನೀಡಿರಬೇಕು, ಸಿಸಿಟಿವಿ ಅಳವಡಿಕೆ ಕಡ್ಡಾಯ, 90ದಿನಗಳ ಡೇಟಾ ಸಿಗುವ ವ್ಯವಸ್ಥೆ ಇರಬೇಕು, ಕನಿಷ್ಠ ಪಕ್ಷ ಒಬ್ಬ ಸಿಬ್ಬಂದಿಯನ್ನು 24/7 ಸೇವೆಯಲ್ಲಿ ಇಡಬೇಕು, ಅಕ್ಕ ಪಕ್ಕದ ಜನರಿಗೆ ಕಿರಿಕಿರಿಯಾಗದಂತೆ ಗಮನಹರಿಸಬೇಕು.
ಕೆಲವು ಲೇಡಿಸ್ ಪಿಜಿ ಗಳಲ್ಲಿ ಹುಡುಗಿಯರ ನೋಡಲು ಹುಗುಗರ ಗುಂಪೆ ಪಿಜಿ ಗಳ ಆಸುಪಾಸಿನಲ್ಲಿ ನಿಂತಿರುತ್ತಾರೆ ಮತ್ತು ಹುಡುಗ ಹುಡುಗಿಯರು ಅಲ್ಲೇ ಮಾತನಾಡುತ್ತಾ ನಿಂತಿರುತ್ತಾರೆ ಇದರಿಂದ ಸ್ಥಳೀಯರಿಗೆ ಮುಜುಗರವಾಗುತ್ತದೆ.
ಉದಾಹರಣೆಗೆ ರಾಮಾನುಜ ರಸ್ತೆ, 19 ನೇ ತಿರುವಿನಲ್ಲಿರುವ ಪಿಜಿ ಯಲ್ಲಿ ಅನೇಕ ಹುಡುಗಿಯರು ಕೇರಳ, ತಮಿಳುನಾಡು ಕಡೆಯಿಂದ ಬಂದು ವಾಸವಿದ್ದಾರೆ.
ಇವರನ್ನು ನೋಡಲು, ಕರೆದು ಕೊಂಡು ಹೋಗಲು ದಿನನಿತ್ಯವೂ ಸಂಜೆ ಹುಡುಗರು ಬರುತ್ತಾರೆ ಲಲ್ಲೇ ಹೊಡೆಯುತ್ತಾ ನಿಂತಿರುತ್ತಾರೆ ಎಂದು ತೇಜಸ್ವಿ ದೂರಿದ್ದಾರೆ.
ಇದರಿಂದ ಆಸುಪಾಸಿನ ನಿವಾಸಿಗಳಿಗೆ ಮುಜುಗರ ಉಂಟಾಗುವುದಲ್ಲದೆ ಕಿರಿಕಿರಿಯಾಗುತ್ತಿದೆ.
ಇಂತಹ ಅನೇಕ ಪಿಜಿ ಗಳು ಇರುವುದರಿಂದ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಅನಧಿಕೃತ ಮತ್ತು ನಿಯಮ ಉಲ್ಲಂಘಿಸಿರುವ ಪಿಜಿ ಗಳಿಗೆ ಬೀಗ ಜಡಿದು ಕ್ರಮ ಕೈಗೊಳ್ಳಬೇಕು ಎಂದು ತೇಜಸ್ವಿ ನಾಗಲಿಂಗ ಸ್ವಾಮಿ ಒತ್ತಾಯಿಸಿದ್ದಾರೆ.
- ಕರುನಾಡ ಕಂದ
