

“ಅಧಿಕಾರಿಗಳ ಬೇಜವಾಬ್ದಾರಿ ರೋಗಗಳಿಗೆ ರಹದಾರಿ”
ಶೀರ್ಷಿಕೆಯಡಿಯಲ್ಲಿ ಕಳೆದ ಮೇ ೬ ರಂದು ಕರುನಾಡ ಕಂದ ನ್ಯೂಸ್ ಪೋರ್ಟಲ್ ನಲ್ಲಿ ವರದಿ ಮಾಡಲಾಗಿತ್ತು, ವರದಿಗೆ ಎಚ್ಚೆತ್ತ ಚಂಡರಕಿ ಗ್ರಾಮ ಪಂಚಾಯಿತಿ ಅಧಿಕಾರಿಗಳಿಂದಾಗಿ ಬಹು ದಿನಗಳಿಂದ ಸ್ವಚ್ಛತೆಗೆ ದೂರವಾಗಿದ್ದ ಗ್ರಾಮದ ನೀರಿನ ಟ್ಯಾಂಕ್ ಪ್ರಾಂಗಣ ಕೊನೆಗೂ ಸ್ವಚ್ಚತೆ ಕಂಡಿದೆ.
ಈ ಕಾರ್ಯದ ಎಲ್ಲಾ ಶ್ರೇಯಸ್ಸು ಗುರುಮಠಕಲ್ ತಾಲೂಕ ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿ ಅಂಬರೀಷ್ ಪಾಟೀಲ್ ಅವರಿಗೆ ಸಲ್ಲುತ್ತದೆ, ವರದಿ ಪ್ರಕಟವಾದ ಬಳಿಕ ಚಂಡರಿಕಿ ಗ್ರಾಮ ಪಂಚಾಯತಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಗೀತಮ್ಮ ಅವರಿಗೆ ಈಗಾಗಲೇ ಉತ್ತರ ಕೇಳಿ ಎರಡು ಸೂಚನೆ ಜಾರಿ ಮಾಡಿದ್ದಾರೆ, ಅವರ ಉತ್ತರ ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳುವುದದಾಗಿ ತಿಳಿಸಿದರು.
ಕರುನಾಡ ಕಂದ ಪತ್ರಿಕೆ ಸಮಾಜ ಮುಖಿ ಕೆಲಸ ಮಾಡುತ್ತಿರುವುದು, ವರದಿಯ ಮೂಲಕ ಅಧಿಕಾರಿಗಳ ಜವಾಬ್ದಾರಿ ಹೆಚ್ಚಿಸುತ್ತಿದ್ದು ಸಾರ್ವಜನಿಕರ ಸಮಸ್ಯೆ ಪರಿಹರಿಸುವಲ್ಲಿ ಸಹಾಯವಾಗಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಗ್ರಾಮದ ನೀರಿನ ಟ್ಯಾಂಕ್ ಕೆಳಗೆ ಸ್ವಚ್ಚತೆ ಕಾರ್ಯ ಮಾಡಲಾಗಿದೆ, ನೀರಿನ ಸರಬರಾಜು ಮಾಡುವ ಪೈಪ್ ವಾಲ್ ಸುತ್ತ ಮುತ್ತ ಕಸ, ಪ್ಲಾಸ್ಟಿಕ್ ಮದ್ಯ ಬಾಟಲಿಗಳನ್ನು ತೆಗೆದು ಸ್ವಚ್ಚತೆ ಮಾಡಲಾಗಿದೆ, ನೀರಿನ ಟ್ಯಾಂಕ್ ಹಾಗೂ ಸುತ್ತ ಮುತ್ತಲಿನ ಆವರಣ ಸ್ವಚ್ಛತೆಗೊಳಿಸಿ ಕುಡಿಯಲು ಯೋಗ್ಯ ನೀರನ್ನು ಸಾರ್ವಜನಿಕರಿಗೆ ನೀಡಲು ತಕ್ಷಣಕ್ಕೆ ಸ್ಪಂದಿಸಿ ಕಾರ್ಯರೂಪಕ್ಕೆ ತರಲು ಮುಂದಾದ ಗುರುಮಠಕಲ್ ತಾಲೂಕ ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿ ಅಂಬರೀಷ್ ಪಾಟೀಲ್ ಅವರಿಗೆ ಸಾರ್ವಜನಿಕರು ಹಾಗೂ ಕರುನಾಡ ಕಂದ ಪತ್ರಿಕೆ ವತಿಯಿಂದ ತುಂಬು ಹೃದಯದ ಧನ್ಯವಾದಗಳು.
ವರದಿ: ಜಗದೀಶ್ ಕುಮಾರ್ ಭೂಮಾ
