

ಕೊಪ್ಪಳ: ಮಹಿಳೆಯರು ಇದ್ದ ಕಡೆ ಸ್ವಚ್ಛ, ಅರೋಗ್ಯ, ಸ್ವಸ್ತ ಹೆಚ್ಚುರತ್ತದೆ ಎಂದು ಉಪನ್ಯಾಸಕ ಶಿವಪ್ಪ ಬಡಿಗೇರ ಅವರು ಹೇಳಿದರು.
ತಾಲ್ಲೂಕಿನ ಲೇಬಗೇರಿ ಗ್ರಾಮದಲ್ಲಿ ರವಿವಾರದಂದು ಕೊಪ್ಪಳದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಎನ್. ಎಸ್. ಎಸ್ ವಾರ್ಷಿಕ ವಿಶೇಷ ಶಿಬಿರದ ಮೂರನೇ ದಿನದ ಅಭಿವೃದ್ಧಿ ಕೌಶಲ್ಯ ಆಯಾಮಗಳು ಕುರಿತು ವಿಶೇಷ ಉಪನ್ಯಾಸದಲ್ಲಿ ಅವರು ಮಾತನಾಡಿದರು.
ನಮ್ಮಲ್ಲಿ ಸೇವೆ ಮನೋಭಾವನೆ ಹೆಚ್ಚು ಇರುತ್ತದೆ. ಸ್ವಚ್ಛತೆ ಇದ್ದರೇ ಸ್ವಚ್ಛ ಮನಸ್ಸು ಇರುತ್ತದೆ. ನಮ್ಮ ಕೆಲಸ ನೋಡಿ ಈ ಗ್ರಾಮದ ಜನತೆ ನಿಮ್ಮನ್ನು ನೋಡಿ ಮೆಚ್ಚುಗೆ ಪಡುವಂತೆ ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿರುವ ಕನ್ನಡ ಉಪನ್ಯಾಸಕ ಶಿವಪ್ರಸಾದ್ ಹಾದಿಮನಿ ಅವರು ಮಾತನಾಡುತ್ತ ಈ ರೀತಿಯ ಎನ್. ಎಸ್. ಎಸ್ ಶಿಬಿರಗಳ ಮೂಲಕ ನಮಗೆ ಸಂಯಮ, ರಾಷ್ಟ್ರೀಯ ಪ್ರಜ್ಞೆ ಮತ್ತು ಶಿಸ್ತು ಬರುತ್ತದೆ. ನಮ್ಮ ಕೆಲಸ ನೋಡಿ ಇನ್ನೊಬ್ಬರು ಮೆಚ್ಚಿಗೆ ಪಡೆಯುವಂತೆ ಕೆಲಸ ಮಾಡಬೇಕು, ಗ್ರಾಮ ನೈರ್ಮಲ್ಯವನ್ನು ಕಾಪಾಡಿಕೊಳ್ಳಬೇಕು, ಎಲ್ಲರಿಗೂ ಸಮಯ ಪ್ರಜ್ಞೆ ಇರಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎನ್. ಎಸ್. ಎಸ್. ಘಟಕದ ಸಂಚಾಲಕ ಡಾ. ನರಸಿಂಹ ಅವರು ಮಾತನಾಡುತ್ತಾ ಮಹಿಳೆಯರು ಚೆನ್ನಾಗಿ ವಿದ್ಯಾಭ್ಯಾಸ ಮಾಡಬೇಕು. ಹೆಚ್ಚು ಪುಸ್ತಕ ಮತ್ತು ಪತ್ರಿಕೆ ಗಳನ್ನು ಓದಬೇಕು, ಸಾಮಾನ್ಯ ಜ್ಞಾನ ಬೆಳಸಿಕೊಳ್ಳಬೇಕು, ಉತ್ತಮವಾದ ಸರಕಾರಿ ಉದ್ಯೋಗಗಳನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಮಹಾದೇವಿ ನಿರೂಪಿಸಿದರು, ಸಂಗೀತಾ ಪ್ರಾರ್ಥನೆ ಗೀತೆ ಹಾಡಿದರು. ವನಜಾಕ್ಷಿ ಸ್ವಾಗತಿಸಿದರು. ಗೌರಮ್ಮ ವಂದನಾರ್ಪಣೆ ಮಾಡಿದರು.
- ಕರುನಾಡ ಕಂದ
