ಬಳ್ಳಾರಿ/ ಸಿರುಗುಪ್ಪ: ಎಐಸಿಸಿ ಆದೇಶದ ಮೇರೆಗೆ ಕೆಪಿಸಿಸಿ ಅಧ್ಯಕ್ಷರು ಹಾಗೂ ಡಿಸಿಎಂ ಡಿಕೆ. ಶಿವಕುಮಾರ ಅವರ ನಿರ್ದೇಶನದಂತೆ ಬಳ್ಳಾರಿ ಗ್ರಾಮಾಂತರ ಜಿಲ್ಲೆಯ ಸಿರಗುಪ್ಪ ವಿಧಾನಸಭಾ ಕ್ಷೇತ್ರದ ಸಿರಗುಪ್ಪ ಬ್ಲಾಕ್‌ನಲ್ಲಿ ಕಾಂಗ್ರೆಸ್ ಭವನ ನಿರ್ಮಿಸಲು ಶಾಸಕರಾದ ಬಿ.ಎಂ. ನಾಗರಾಜು ಅವರು ಕಾಂಗ್ರೆಸ್ ಭವನ ಟ್ರಸ್ಟ್‌ಗೆ ದಾನವಾಗಿ ನೀಡಿರುವ ನಿವೇಶನವನ್ನು ನೋಂದಣಿ ಮಾಡಲಾಯಿತು.
ಕಾಂಗ್ರೆಸ್ ಭವನ ಟ್ರಸ್ಟ್‌ನ ಟ್ರಸ್ಟಿಗಳಾದ ವಿಜಯ್ ಮುಳಗುಂದ, ಕಾರ್ಯದರ್ಶಿಗಳಾದ ಎಲ್. ನಾರಾಯಣ್, ಕೆಪಿಸಿಸಿ ಸದಸ್ಯರಾದ ಶ್ರೀನಿವಾಸುಲು, ಬ್ಲಾಕ್ ಅಧ್ಯಕ್ಷರಾದ ಕರಿಬಸಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್
